ಬೆಂಗಳೂರು; ವಾಲ್ಮೀಕಿ ನಿಗಮದಲ್ಲಿ ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ಸುದ್ದಿಗೋಷ್ಠಿ ನಡೆಸಿದ್ರು. ಇದೇ ವೇಳೆ ಮಾತನಾಡಿದ ಅವರು ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಪರಿಶಿಷ್ಟ ವರ್ಗಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದೆ.ಮಾಜಿ ಸಚಿವ ನಾಗೇಂದ್ರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಯುತ್ತಿದೆ.ಇಡಿ ಮಾಡಿರುವ ಕೆಲಸ ಸ್ವಾಗತಾರ್ಹ ಎಂದ್ರು.
ಇನ್ನು ಯೂನಿಯನ್ ಬ್ಯಾಂಕ್ ಸಿಬಿಐ ಗೆ ದೂರು ನೀಡಿದ ಆಧಾರದಲ್ಲಿ ದಾಳಿ ನಡೆಯುತ್ತಿರಬಹುದು.ನಾಗೇಂದ್ರ ಪಿಎ ಹರೀಶ್ ಖಾತೆಗೆ 80 ಲಕ್ಷ ರೂ. ಹಣ ವರ್ಗಾವಣೆ ಆಗಿದೆ.ನಿನ್ನೆಯ ಗೃಹ ಸಚಿವರ ಹೇಳಿಕೆ ಪ್ರಕಾರ ಅವರು ಇಡಿ ಯನ್ನು ಆಹ್ವಾನ ಮಾಡಿಲ್ಲವಂತೆ.ಜನ ಇಂದು ಥೂ, ನಾಚಿಕೆಯಿಲ್ಲದ, ಕಳ್ಳರ ಸರ್ಕಾರ ಎನ್ನುತ್ತಿದ್ದಾರೆ.ಇಡಿಯವರು ಬಂದು ಕಳ್ಳರ ಉಪಾಧ್ಯಕ್ಷನನ್ನು ಹಿಡಿದುಕೊಂಡಿದ್ದಾರೆ.ಅಧ್ಯಕ್ಷ ಯಾರು ಅಂತಾ ಅವರಿಗೆ ಗೊತ್ತಾಗುತ್ತಿಲ್ಲ.ಅಧ್ಯಕ್ಷರನ್ನು ಹಿಡಿಯುವ ಕೆಲಸವನ್ನು ಇಡಿ ಮಾಡುತ್ತಿದೆ.ಎಸ್ ಐಟಿ ಸರಿಯಾದ ಕೆಲಸ ಮಾಡಿರುತ್ತಿದ್ದರೆ ಇಡಿ ಬರುತ್ತಿರಲಿಲ್ಲ.ತನಿಖೆಯಲ್ಲಿ ಎಸ್ ಐಟಿ ಎಡವಿದೆ ಎಂದಿದ್ದಾರೆ.
ಲ್ಯಾಂಬೋರ್ಗಿನಿ ಕಾರು, ಹನಿ ಟ್ರ್ಯಾಪ್, ಹವಾಲಾ, ಎಲೆಕ್ಷನ್ ಫಂಡ್ ಅಂತೆ.ಜವಾಬ್ದಾರಿ ಇಲ್ಲದ ಉಪಾಧ್ಯಕ್ಷರು ಹನಿಟ್ರ್ಯಾಪ್ ಮಾಡಿಸಿದ್ದಾರೆ ಅಂತೆ ನೋಡಿ ಎಂತಾ ಪರಿಸ್ಥಿತಿ ಅಂತಾ ವ್ಯಂಗ್ಯವಾಡಿದ್ರು.ಪರಿಶಿಷ್ಟ ವರ್ಗಗಳ ಜನರ ಶಾಪ ಈ ಸರ್ಕಾರವನ್ನು ಬಿಟ್ಟು ಹೋಗುವುದಿಲ್ಲ.ಸಮುದಾಯದ ಜನರಿಗೆ ಸೇರಬೇಕಿರುವ ಹಣದಲ್ಲಿ ಶೋಕಿ ಮಾಡುತ್ತಿದ್ದಾರೆ.ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ಸುರಪುರ ಚುನಾವಣೆಯಲ್ಲಿ ಈ ಹಣ ಬಳಕೆ ಮಾಡಿದ್ದಾರೆ.ಬುಡಕಟ್ಟು ಸಮುದಾಯದ ಜನರ ಶಾಪದಿಂದ ಈ ಸರ್ಕಾರ ಮುಕ್ತ ಆಗುವುದಿಲ್ಲ.ಇದು ಕಳ್ಳರ, ಡಕಾಯಿತರ ಸರ್ಕಾರ.ನಾಗೇಂದ್ರ ಅರೆಸ್ಟ್ ಆಗಲೇಬೇಕು.ಮೀಸಲು ಕ್ಷೇತ್ರದಿಂದ ಗೆದ್ದ ವ್ಯಕ್ತಿಯಾಗಿ ಸಮುದಾಯದ ಬಗ್ಗೆ ನೋವು ಇದ್ದರೆ ನಾಗೇಂದ್ರ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.ನಾಗೇಂದ್ರ ಮೇಲೆ ಬಲವಾದ ಎಫ್ ಐಆರ್ ಆಗಬೇಕು.ಮೂರು ತಿಂಗಳ ಒಳಗೆ ವಾಲ್ಮೀಕಿ ನಿಗಮಕ್ಕೆ ಎಲ್ಲಾ ಹಣ ವಾಪಸ್ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತಿ ನಿಗಮದಲ್ಲಿ ಎಷ್ಟೆಷ್ಟು ಕಳ್ಳರು ಇದ್ದಾರೆ ಅಂತಾ ಗೊತ್ತಾಗಬೇಕು.ಬಿಜೆಪಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತದೆ.ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು.ಬೀದರ್ ನಿಂದ ಬೆಂಗಳೂರಿನವರೆಗೆ ಚಲೋ ಮಾಡುತ್ತೇವೆ.ದೆಹಲಿಗೆ ತೆರಳಿ ರಾಷ್ಟ್ರೀಯ ಪರಿಶಿಷ್ಟ ಆಯೋಗಕ್ಕೆ ದೂರು ಕೊಡುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಾಜೂ ಕಾಂಗ್ರೆಸ್ ಸರ್ಕಾರ ವೈಟ್ ಮನಿಯಲ್ಲಿ ಭ್ರಷ್ಟಾಚಾರ ಮಾಡಿದೆ.ಕಾಂಗ್ರೆಸ್ ನಿಂದ ಗೆದ್ದ ೧೪ ಜನ ಎಸ್ ಟಿ ಶಾಸಕರು ಇದರ ಬಗ್ಗೆ ಮಾತಾಡುತ್ತಿಲ್ಲ. ನಮ್ಮಿಂದ ಮೊದಲು ಅವರು ಹೋರಾಟ ಮಾಡಬೇಕಿತ್ತು.ಆದರೆ ಬರೀ ರಬ್ಬರ್ ಸ್ಟ್ಯಾಂಪ್ ಇದ್ದವರು ಮಾತ್ರ ಗೆದ್ದಿರುವುದಕ್ಕೆ ಈ ಸಮಸ್ಯೆ .ರಾಜ್ಯ ಸರ್ಕಾರವೇ ಇದರಲ್ಲಿ ಹಗರಣದಲ್ಲಿ ತೊಡಗಿರುವ ಕಾರಣ ಎಸ್ ಐಟಿ ಮಾಡಿದ್ದಾರೆ.ರಾಜ್ಯ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು.ಎಲ್ಲಾ ಹಣವನ್ನು ಇಲ್ಲೇ ಲೂಟಿ ಹೊಡೆದಿರುವಾಗ ಸಮುದಾಯದ ಜನರಿಗೆ ಎಲ್ಲಿ ಕೃಷಿಗೆ ಅನುದಾನ ಬರುತ್ತದೆ?ಹಗರಣದಲ್ಲಿ ಭಾಗಿಯಾದ ಎಲ್ಲರನ್ನೂ ಬಂಧಿಸಬೇಕು.ಫೈನಾನ್ಸ್ ಸೆಕ್ರೆಟರಿ ಗಮನದಲ್ಲಿ ಇಲ್ಲದೇ ಇದು ಆಗಲು ಸಾಧ್ಯವಿಲ್ಲ.ಫೈನಾನ್ಸ್ ಸೆಕ್ರೆಟರಿ ಗಮನಕ್ಕೆ ಇಲ್ಲದಿದ್ದರೆ ಸಿಎಂ ಗಮನಕ್ಕೆ ಬರದೇ ಆಗಲು ಸಾಧ್ಯವಿಲ್ಲ.ನಾಗೇಂದ್ರ ರಾಜೀನಾಮೆ ಕೊಡಿಸಿ ಪ್ರಕರಣ ಮುಚ್ಚಿ ಹಾಕಲು ಸಾಧ್ಯವಿಲ್ಲ.ನಾಗೇಂದ್ರ ಒಬ್ಬನಿಂದಲೇ ಇದು ಸಾಧ್ಯವಿಲ್ಲ, ದೊಡ್ಡ ದೊಡ್ಡ ಮಂತ್ರಿಗಳ ಕೈವಾಡ ಇದೆ.ರಾಮುಲು ರಾಜೂ ಗೌಡ ರೀತಿ ಸೋತು ಕೂರಬೇಕಾಗುತ್ತದೆ ಅಂತಾ ಎಸ್ ಟಿ ಸಚಿವರು ಮಾತಾಡುತ್ತಿಲ್ಲ.ಸಮುದಾಯದ ಶಾಸಕರು, ಗುರುಪೀಠದ ಸ್ವಾಮೀಜಿಗಳು ಮಾತಾಡಬೇಕು.ಶಾಸಕರು ಸ್ವಾಭಿಮಾನ ಇದ್ದರೆ ಧ್ವನಿ ಎತ್ತಿ ಹೋರಾಟ ಮಾಡಿ ಎಂದು ರಾಜಬ ಗೌಡ ಸವಾಲು ಹಾಕಿದ್ದಾರೆ.