ಬೆಂಗಳೂರು; ನೀವು ಸಿಎಂ ಆಗಿದ್ದಾಗ ತಾಜ್ ವೆಸ್ಟೆಂಡ್ ಬಿಟ್ಟು ಕದಲುತ್ತಿರಲಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಎಸ್ ಟಿ ಸೋಮಶೇಖರ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಸ್ವಂತ ಹಿತಾಸಕ್ತಿಗಾಗಿ ಮುಖ್ಯಮಂತ್ರಿ ಆದವರು ಕುಮಾರಸ್ವಾಮಿ. 2018ರಲ್ಲಿ ನಾನು ಶಾಸಕನಾಗಿದ್ದಕ್ಕೆ ನೀವು ಸಿಎಂ ಆಗಿದ್ದು. ಆವಾಗ ಕಾಂಗ್ರೆಸ್ ನಲ್ಲಿ ಶಾಸಕರನ್ನು ಹತ್ತು ಹದಿನೈದು ದಿನಗಳ ಕಾಲ ನಾನೇ ನೋಡಿಕೊಂಡಿದ್ದೆ. ಆವಾಗ ಅದರ ಜವಬ್ದಾರಿ ಕಾಂಗ್ರೆಸ್ ಪಕ್ಷ ನನಗೆ ಕೊಟ್ಟಿತ್ತು. ನಿಮ್ಮ ಸರ್ಕಾರವನ್ನು ನಾನೊಬ್ಬನೇ ಅಲ್ಲ ನಿಮ್ಮ ಜೆಡಿಎಸ್ ನವರು ಸೇರಿ ತೆಗೆದ್ರು. ನೀವು ಸಿಎಂ ಆಗಿದ್ದಾಗ ತಾಜ್ ವೆಸ್ಟೆಂಡ್ ಬಿಟ್ಟು ಕದಲುತ್ತಿರಲಿಲ್ಲ ಎಂದಿದ್ದಾರೆ.
ವಿಧಾನಸೌಧದಲ್ಲೋ, ಕೃಷ್ಣಾದಲ್ಲೋ ಕುಳಿತು ಶಾಸಕರ ಹಾಗೂ ಜನ ಸಾಮಾನ್ಯರ ಕಷ್ಟ ಸುಖ ಕೇಳಿಲ್ಲ. ಕೇಳಿದಿದ್ರೆ ನಾನು ಬಿಜೆಪಿಗೆ ಹೋಗುವ ಪ್ರಮೇಯ ಬರುತ್ತಿರಲಿಲ್ಲ. ನಿನ್ನೆ ಕೊಮ್ಮಘಟ್ಟದಲ್ಲಿ ಸಮಾವೇಶ ಮಾಡಿ ಸರ್ಕಾರ ಇಂತಹ ಕಾರ್ಯಕ್ರಮ ಮಾಡಿಲ್ಲ ಎಂದಿದ್ದೀರಿ. ನಾನೇನು ಸರ್ಕಾರದ ಶಾಸಕ, ಮಂತ್ರಿ ಹಾಗೂ ಕೇಂದ್ರದ ಮಂತ್ರಿ ಆಗಿಲ್ಲ. ಕ್ಷೇತ್ರದ ಶಾಸಕನಾಗಿ ಜನ ಸಾಮಾನ್ಯರ ಅಭಿವೃದ್ಧಿಗೆ ಕೆಲಸ ಮಾಡ್ತಿದ್ದೇನೆ. ಎಲೆಕ್ಸನ್ ಬಂದಾಗ ಮಾತ್ರ ಜನರು ನಿಮಗೆ ನೆನಪು ಆಗೋದು. ಐದು ವರ್ಷಕ್ಕೆ ಬರುವ ಸೋಮಶೇಖರ್ ನಾನಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕ್ಷೇತ್ರಕ್ಕೆ ಅಭಿವೃದ್ಧಿಗೆ ಏನು ಅನುದಾನ ಬೇಕೋ ಅದನ್ನು ಸರ್ಕಾರದಿಂದ ತರುತ್ತೇನೆ. ಐದು ವರ್ಷಕ್ಕೆ ಬಂದು ನನ್ನನ್ನೇ ತೆಗೆಳುತ್ತೀರಾ. ಕೇಂದ್ರದ ಮಂತ್ರಿಯಾಗಿ ನಿಮ್ಮ ಕೊಡುಗೆ ಏನು..? . ನನಗೂ ನಿಮ್ಮ ಸಮಾವೇಶಕ್ಕಿಂತ ಎರಡರಷ್ಟು ಜನ ಸೇರಿಸಿ ಕಾರ್ಯಕ್ರಮ ಮಾಡುವ ಶಕ್ತಿ ಇದೆ. ಯಾವತ್ತಿಗೂ ಜನರ ಇಟ್ಟಿರುವ ವಿಶ್ವಾಸ ಕಳೆದುಕೊಳ್ಳಲ್ಲ. ಒಂದು ವೇಳೆ ಜನರಿಂದ ಕಳೆದುಕೊಂಡರೆ ಅವತ್ತೇ ನಾನು ಕ್ಷೇತ್ರಕ್ಕೆ ಕಾಲಿಡಲ್ಲ ಎಂದಿದ್ದಾರೆ.











