ಬೆಂಗಳೂರು: ಇಡೀ ದೇಶದಲ್ಲೆ ಗ್ರಾಮವಾಸ್ತವ್ಯ ಮಾಡುವ ಕಾರ್ಯಕ್ರಮ ಯಾರಾದ್ರು ಅನುಷ್ಟಾನಕ್ಕೆ ತಂದಿದ್ರೆ ಅದು ಕುಮಾರಸ್ವಾಮಿ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.
ಕುಮಾರಸ್ವಾಮಿ ಬರೀ ಗ್ರಾಮ ವಾಸ್ತವ್ಯ ಮಾಡಿದಷ್ಟೆ ಅಲ್ಲಾ. ರೈತರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕೆಟ್ಟ ಸನ್ನಿವೇಶ ಗಮನಿಸಿ. ಆತ್ಮಹತ್ಯೆಗೆ ತುತ್ತಾಗಿದ್ದ ಕುಟುಂಬಕ್ಕೆ ಆರ್ಥಿಕ ನೆರವು ಕೊಡುವ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ. ರೈತ ಆತ್ಮಹತ್ಯೆ ಮಾಡಿಕೊಂಡವರಿಗೆ ಬೇರೆ ಯಾರು ಮುಖ್ಯಮಂತ್ರಿಗಳು ಆರ್ಥಿಕ ಸಹಾಯ ಮಾಡಲಿಲ್ಲ. ಎಸ್ ಎಮ್ ಕೃಷ್ಣ ನವರು ಮಂಡ್ಯದಲ್ಲಿ 15 ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಆರ್ಥಿಕ ನೆರವು ಕೊಟ್ಟಿದ್ರು. ಆದ್ರೆ ಈಗಿನ ಸರ್ಕಾರ ಯಾವುದೇ ಆರ್ಥಿಕ ನೆರವು ನೀಡಲ್ಲ. ನಾನು ಬಡವರ ಹಿಂದುಳಿದವರ ಪರವಾಗಿದ್ದೇನೆ ಅಂತಾರೆ. ಧಾರವಾಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರೆನ್ನೆಲ್ಲಾ ಸೇರಿಸಿ ಆರ್ಥಿಕ ನೆರವು ಕೊಟ್ರು. ಈಗ ಯಾರು ಆ ಕೆಲಸ ಮಾಡ್ತಿಲ್ಲ ಎಂದಿದ್ದಾರೆ.
ಈಗ ಬೆಂಗಳೂರನ್ನ ಐದು ಭಾಗ ಮಾಡಲಾಗಿದೆ. ಮೇಲುಸ್ತುವಾರಿಯಾಗಿ ಕೆಲಸ ಮಾಡಲು ರಮೇಶ್ ಗೌಡರಿಗೆ ಅವಕಾಶ ಕೊಡಲಾಗಿದೆ. ಮಹಿಳೆಯರ ಮೀಸಲಾತಿ ಬಗ್ಗೆ ಪಸ್ತಾಪ ಮಾಡಿದ್ದಾರೆ. ಇಡೀ ಇತಿಹಾಸದಲ್ಲಿ ಹೆಣ್ಣುಮಕ್ಕಳಿಗೆ ಮೀಸಲಾತಿ ಕೊಟ್ಟ ಸರ್ಕಾರ ಇದ್ರೆ ಅದು ಕರ್ನಾಟಕ ಸರ್ಕಾರ. ಲೀಲಾವತಿ ಆರ್ ಪ್ರಸಾದ್ ಮಂತ್ರಿಯಾಗಿದ್ರು. ಎಲ್ಲಾ ರಾಜಕೀಯ ಪಕ್ಷಗಳಿಗೆ ಮುಂಬರುವ ಚುನಾವಣೆಯ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳಿ. ಇದರ ಬಗ್ಗೆ ದೆಹಲಿಗೆ ಹೋಗಿ ಎಲ್ಲಾ ಪಕ್ಷದ ರಾಷ್ಟ್ರೀಯ ನಾಯಕರನ್ನ ಭೇಟಿ ಮಾಡಿದ್ರು. ಅದರ ಫಲವಾಗಿ ೧೯೯೫/೯೬ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡ್ರು. ಆಗ ವಾಜಪೇಯಿ 13 ದಿನ ಪ್ರಧಾನಿಯಾಗಿದ್ರು. ಆದಾದ ಮೇಲೆ ೧3 ಪಕ್ಷಗಳ ಒಕ್ಕೂಟದಿಂದ ನಾನು ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದೆ. ಅಂದಿನ ಸ್ಪೀಕರ್ ಅವರು ಮಹಿಳಾ ಮೀಸಲಾತಿ ಜಾರಿಗೆ ಚರ್ಚೆ ಮಾಡಿದ್ರು. ಬಿಜೆಪಿಯ ಉಮಾಭಾರತಿಯವರು ಉತ್ತರ ಪ್ರದೇಶದಲ್ಲಿ ಸಿಎಂ ಆಗಿದ್ರು .ಮಹಿಳಾ ಮೀಸಲಾತಿಯನ್ನ ವಿರೋಧಿಸಿದ್ರು.ಮೋದಿಯವರು ಮಹಿಳಾ ಮೀಸಲಾತಿ ಚರ್ಚಿಸಲು ಮುಂದಾದ್ರು. ಈ ಬಗ್ಗೆ ಚರ್ಚಿಸಲು ಮೂರು ದಿನದ ವಿಶೇಷ ಅಧಿವೇಶನ ಕರೆದಿದ್ದಾರೆ ಎಂದು ತಿಳಿಸಿದ್ದಾರೆ.
ಮುಸ್ಲಿಂ ಲೀಡರ್ ಗೆಲ್ಲಿಸಲು ದರಿದ್ರ ನಾರಾಯಣ ರ್ಯಾಲಿ ಮಾಡಿದೆ. ಆ ರ್ಯಾಲಿಗೆ ಸಿದ್ದರಾಮಯ್ಯ ಬರಲಿಲ್ಲ. ಕುಮಾರಸ್ವಾಮಿ ಸರ್ಕಾರ ತೆಗೆದಿದ್ದು ನೀವು. ಮೋದಿಯವರನ್ನ ನೋಡಿ ಕಲಿಬೇಕು.ನಿತೀಶ್ ಕುಮಾರ್ 20 ವರ್ಷ ಬಿಹಾರ ಸಿಎಂ ಆಗಿದ್ರು. ನಿತೀಶ್ ಕುಮಾರ್ ಗೆ ಶಕ್ತಿ ಕೊಟ್ಟಿದ್ದು ಮೋದಿ. ಕುಮಾರಸ್ವಾಮಿ ಅವರ ಸರ್ಕಾರವನ್ನ ಇವ್ರು ( ಸಿದ್ದರಾಮಯ್ಯ) ತೆಗೆದ್ರು. ಆಗ ಮೋದಿಯವರು ಜೊತೆಗೆ ಬನ್ನಿ ಎಂದು ಕರೆದ್ರು. ನಾನು ಓಕೆ ಎಂದೆ.ಕಾಂಗ್ರೆಸ್ ಜೊತೆ ಇದ್ದು ಏಟಿನ ಮೇಲೆ ಏಟು ತಿಂದ್ವಿ. ಹಾಗಾಗಿ ಮೋದಿ ಜೊತೆಗೆ ಹೋಗಲು ಕುಮಾರಸ್ವಾಮಿಗೆ ಒಪ್ಪಿಗೆ ಕೊಟ್ಟೆ. ಈಗ ಕೇಂದ್ರ ಸಚಿವರಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಸರ್ಕಾರ ಕುಮಾರಸ್ವಾಮಿಗೆ ಸಹಕಾರ ಕೊಡ್ತಿಲ್ಲ. Hmt ಜಾಗದ ವಿಚಾರವಾಗಿ ಕೋರ್ಟ್ ಗೆ ಹೋಗ್ತಾರೆ. ರಾಷ್ಟ್ರೀಯ ಪಕ್ಷದ ಜೊತೆ ಕೆಲಸ ಮಾಡುವಾಗ ನಮಗೂ ಇತಿಮಿತಿ ಇದೆ. ರಾಜ್ಯದಲ್ಲಿ ಅತ್ಯಂತ ನಾಡುಕಂಡ ಕೆಟ್ಟ ಸರ್ಕಾರ ಇದೆ.ಎರಡು ವರ್ಷ ಈ ಸರ್ಕಾರ ಇರಬಹುದು. ನನಗೆ 93 ವರ್ಷ ಈಗ .ಆದ್ರೂ ನಿಮ್ಮ ನಡುವೆ ಇದ್ದೇನೆ ಎಂದಿದ್ದಾರೆ.
ಕಾಂಗ್ರೆಸ್ ಕಾರಣ ಪಕ್ಷದ ಕಚೇರಿ ಬಿಟ್ಟುಕೊಡಬೇಕಾಯಿತು. ಅಂದಿನ ಘಟನೆ ನಾನೆಂದೂ ಮರೆಯಲ್ಲ. ಹೊಸ ಕಚೇರಿಗೆ ಜಾಗ ಕೊಡಲು ನಾನು ಧರಣಿಗೆ ಕೂರುವ ಸಂದರ್ಭ ಬಂದಿತ್ತು. ಆಗ ವಿಷಯ ತಿಳಿದು ಸಿದ್ದರಾಮಯ್ಯ ಜಾಗ ಕೊಟ್ರು. ಮಹಿಳಾ ಮೀಸಲಾತಿ ಬಿಲ್ ಪಾಸಾಗತ್ತೆ. ಮುಂದೆ ಬರುವ ಚುನಾವಣೆಗೆ 33% ಮೀಸಲಾತಿ ಜಾರಿ ಆಗತ್ತೆ ಎಂದು ತಿಳಿಸಿದ್ದಾರೆ.











