ಹಾಸನ; ಉಪಚುನಾವಣೆಯಲ್ಲಿ ಎರಡು ಸ್ಥಾನ ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷ ಗೆಲ್ಲುತ್ತೆ ಎನ್ನುವ ವಿಶ್ವಾಸ ಇದೆ ಎಂದು ಬೇಲೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ಉಪಚುನಾವಣೆಯಲ್ಲಿ ಎರಡು ಸ್ಥಾನ ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷ ಗೆಲ್ಲುತ್ತೆ ಎನ್ನುವ ವಿಶ್ವಾಸ ಇದೆ: ಬೇಲೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಎಂದಿದ್ದಾರೆ.
ಎರಡು ಬೈ ಎಲೆಕ್ಷನ್‌ಗೆ ನಾನು ಹೋಗಿರಲಿಲ್ಲ, ಬೇರೆ ಕಡೆ ಎಲೆಕ್ಷನ್‌ಗೆ ಹೋಗಿದ್ದೆ. ಉಪಚುನಾವಣೆ ಪ್ರಚಾರದಲ್ಲಿ ನಮ್ಮ ಮುಖಂಡರೆಲ್ಲಾ ಭಾಗವಹಿಸಿದ್ದಾರೆ ಅವರ ವರದಿ ಪ್ರಕಾರ ಖಂಡಿತ ಎರಡು ಸೀಟ್ ಗೆಲ್ಲುತ್ತೆ ಎನ್ನುವ ವಿಶ್ವಾಸ ಇಟ್ಟುಕೊಂಡಿದ್ದೇನೆ. ಎಂದ ಅವರು ರಾಜ್ಯದಲ್ಲಿ ವಾಣಿಜ್ಯ, ಗೃಹಬಳಕೆ, ಆಟೋ ಗ್ಯಾಸ್ ಅಭಾವ ವಿಚಾರದ ಬಗ್ಗೆ ಮಾತನಾಡಿ ಎಲ್‌ಪಿಜಿ ಸಿಲಿಂಡರ್ ಸಮಸ್ಯೆ ದಿನೇ ದಿನೇ ಉಲ್ಬಣವಾಗುತ್ತಿದೆ. ಯುದ್ಧ ಇದೆ ನಿಜ, ಆದರೆ ಕೇಂದ್ರ ಸರ್ಕಾರದವರು ಜವಾಬ್ದಾರಿ ತಗೊಂಡು ಇದಕ್ಕೆ ಏನಾದರೂ ಒಂದು ಪರಿಹಾರವನ್ನು ತಕ್ಷಣ ಕೊಡಬೇಕು. ಸಣ್ಣಪುಟ್ಟ ಕಾಫಿ, ತಿಂಡಿ ಅಂಗಡಿಗಳಿಗೆ ಗ್ಯಾಸ್ ಸಿಗದೆ ಅವರ ಜೀವನೋಪಾಯನೇ ಬಂದ್ ಆಗಿದೆ. ಲಕ್ಷಾಂತರ ಆಟೋದವರಿಗೆ ಗ್ಯಾಸ್ ಸಿಗದೆ ಅವರ ಜೀವನದ ಸಂಪಾದನೆ ನಿಂತು ಹೋಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಇದನ್ನು ಜವಾಬ್ದಾರಿಯಾಗಿ ತಗೊಂಡು ಪರಿಹಾರ ಮಾಡಬೇಕು. ಸದ್ಯಕ್ಕೆ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಿದ್ದಾರೆ. ಈಗಲಾದರೂ ಕೇಂದ್ರ ಸರ್ಕಾರ ತಕ್ಷಣ ಪರಿಹಾರ ಮಾಡಬೇಕು. ಲಕ್ಷಾಂತರ ಜನರ ದಿನದ ಸಂಪಾದನೆ ನಿಂತು ಹೋಗಿದೆ. ಸಣ್ಣಪುಟ್ಟ ಹೋಟೆಲ್‌ಗಳಿಗೆ ಸಮಸ್ಯೆಯಾಗಿದೆ. ದೊಡ್ಡ ಹೋಟೆಲ್‌ಗಳು ಬ್ಲಾಕ್ ಮಾರ್ಕೆಟ್‌ನಲ್ಲಿ ತಗೊತಾರೆ. ನಾಲ್ಕು, ಐದು ಸಾವಿರ ಕೊಟ್ಟರೆ ಬ್ಲಾಕ್ ಮಾರ್ಕೆಟ್‌ನಲ್ಲಿ ಸಿಲಿಂಡರ್ ಸಿಗುತ್ತಂತೆ ಎಲ್ಲಾ ಮಾತನಾಡುತ್ತಿದ್ದಾರೆ. ಅದನ್ನು ಕಂಟ್ರೋಲ್ ಮಾಡಲು ಏಕೆ ಆಗುತ್ತಿಲ್ಲ. ಲೀಗಲ್ ಆಗಿ ಸಪ್ಲೈ ಸಿಗುವುದಿಲ್ಲ, ಆದರೆ ಬ್ಲಾಕ್ ಮಾರ್ಕೆಟ್‌ನಲ್ಲಿ ಹೇಗೆ ಸಿಗುತ್ತಿದೆ. ಇದು ಆಡಳಿತ ವೈಫಲ್ಯ ಹೌದೋ, ಅಲ್ಲವೋ. ಯಾರಿಗೂ ಸಿಗಲಿಲ್ಲ ಅಂದರೆ ಅದು ಒಂದು ತರ. ಬ್ಲಾಕ್ ಮಾರ್ಕೆಟ್‌ಗೆ ಹೇಗೆ ಲೀಕ್ ಮಾಡ್ತಿದ್ದಾರೆ. ಗ್ಯಾಸ್ ಸಪ್ಲೈ ಮಾಡುವ ಕಂಪನಿಗಳು ನಾಲ್ಕೈದು ಇವೆ. ಎಲ್ಲವೂ ಕೇಂದ್ರ ಸರ್ಕಾರ ಸ್ವಾಮ್ಯದ ಕಂಪನಿಗಳು. ಅದು ಹೇಗೆ, ಯಾರನ್ನು ಯಾಮಾರಿಸಿ ಬ್ಲಾಕ್ ಮಾರ್ಕಟ್‌ಗೆ ಎಂಟ್ರಿ ಆಗುತ್ತಿದೆ. ಲೀಗಲ್ ಆಗಿ ಏಕೆ ಸಿಗುತ್ತಿಲ್ಲ, ಬ್ಲಾಕ್ ಮಾರ್ಕೆಟ್‌ನಲ್ಲಿ ಹೇಗೆ ಸಿಗುತ್ತಿದೆ.ಇದನ್ನು ತಕ್ಷಣ ಕೇಂದ್ರ ಸರ್ಕಾರ ನಿವಾರಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.











