ಮನೆ Latest News ಕನ್ನಡದ ಮೇಷ್ಟ್ರಾದ ಸಿಎಂ ಸಿದ್ದರಾಮಯ್ಯ; ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳಿಗೆ ಸಿಎಂ ಕನ್ನಡ...

ಕನ್ನಡದ ಮೇಷ್ಟ್ರಾದ ಸಿಎಂ ಸಿದ್ದರಾಮಯ್ಯ; ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳಿಗೆ ಸಿಎಂ ಕನ್ನಡ ಪಾಠ

0

ಬೆಂಗಳೂರು; ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮ್ಯ ದಿಡೀರ್ ಭೇಟಿ ನೀಡಿದರು. SCSP/TSP ಸಭೆಯ ಬಳಿಕ ನೇರವಾಗಿ ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಿಎಂ ಭೇಟಿ ನೀಡಿದರು.

ಈ ಶಾಲೆಯಲ್ಲಿ 250 ವಿದ್ಯಾರ್ಥಿಗಳಿದ್ದು, ಮೊದಲಿಗೆ 10 ನೇ ತರಗತಿಗೆ ಸಿಎಂ ಮತ್ತು ಸಚಿವರ ಭೇಟಿ ನೀಡಿ ಸಮಾಲೋಟಚನೆ ನಡೆಸಿದರು.  ವಿದ್ಯಾರ್ಥಿಗಳೊಂದಿಗೆ ಸಿಎಂ ಸಮಾಲೋಚನೆ. ಮಾಡಿದ್ರು. ಈ ವೇಳೆ  ಠ್ಯ, ಬಾತ್ ರೂಂ ಕಿಟ್ ಗಳ ಸಮರ್ಪಕ ವಿತರಣೆ ಆಗ್ತಿದೆ ಎಂದು ವಿದ್ಯಾರ್ಥಿಗಳು. ಸಿಎಂ ತಿಳಿಸಿದ್ರು.

ಬಳಿಕ ಊಟದ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಿಂದ ಸಿಎಂ ಸಿದ್ದರಾಮಯ್ಯ ಕೇಳಿ ತಿಳಿದಿದ್ದಾರೆ. ಆಗ ವಿದ್ಯಾರ್ಥಿಗಳು ಬೆಳಗ್ಗೆ ದೋಸೆ, ಮಧ್ಯಾಹ್ನ ಊಟ ಚೆನ್ನಾಗಿತ್ತು ಎಂದಿದ್ದಾರೆ. ಆಗಾಗ ಪಲಾವ್ ಕೊಡ್ತಾರೆ ಎಂದು ವಿದ್ಯಾರ್ಥಿಗಳು ಖುಷಿಪಟ್ಟರು. ಇದೇ ವೇಳೆ ಕಳೆದ ಬಾರಿ SSLC ಯಲ್ಲಿ ಎಲ್ಲರೂ ಡಿಸ್ಟಿಂಕ್ಷನ್, ಒಬ್ಬ ವಿಧ್ಯಾರ್ಥಿನಿ ಮಾತ್ರ ಸೆಕೆಂಡ್ ಬಂದಿದ್ದಾಗಿ ಶಿಕ್ಷಕರು  ಈ ವೇಲೆ ಸಿಎಂಗೆ ಹೇಳಿದ್ರು.

ಇದೇ ವೇಳೆ ನಮ್ಮ ಆರೋಗ್ಯ ತಪಾಸಣೆಗೆ ನಿಯಮಿತವಾಗಿ ವೈದ್ಯರು ಬರುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಸಿಎಂ ಗೆ ತಿಳಿಸಿದ್ರು. ಅಲ್ಲದೇ ಇದೇ ವೇಳೆ ಸಿಎಂ ವಿದ್ಯಾರ್ಥಿಗಳಿಗೆ ಕನ್ನಡ ಪಾಠ ಮಾಡಿದ್ದಾರೆ. ಪ್ರವರ್ಗ ಎಂದರೇನು?ಅಲ್ಪ ಪ್ರಾಣ ಮಹಾ ಪ್ರಾಣ ಎಂದರೇನು? ಹೃಸ್ವ ಸ್ವರ ದೀರ್ಘ ಸ್ವರ ಎಂದರೇನು? ಎಂದು ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಅಕ್ಷರಗಳು ಎಡಬಿಡದೆ ಸೇರುವುದೇ ಸಂಧಿ ಎಂದು ಸಿಎಂ ಮಕ್ಕಳಿಗೆ ಸಂಧಿ ಬಗ್ಗೆ ತಿಳಿಸಿದ್ದಾರೆ.ಸಂಧಿ ಎಂದರೇನು? ಸಂಧಿಗಳಲ್ಲಿ ಎಷ್ಟು ವಿಧ? ಕನ್ನಡ ಅಕ್ಷರ ಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಅವಲ್ಲಿ ಯೋಗವಾಹಗಳು ಎಷ್ಟು? ಸ್ವರ ಎಂದರೇನು? ವ್ಯಂಜನಗಳು ಎಂದರೇನು? ಎಷ್ಟಿವೆ? ವರ್ಗೀಯ, ಅವರ್ಗೀಯ ವ್ಯಂಜನಗಳು ಎಷ್ಟಿವೆ?ಅಲ್ಪಪ್ರಾಣ, ಮಹಾಪ್ರಾಣ ಎಂದರೇನು? ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎನ್ನುವ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಿದ ಸಿಎಂ ಮಕ್ಕಳ ಉತ್ತರಗಳನ್ನು ತಿದ್ದಿ ಹೇಳಿದರು.

ಮೊರಾರ್ಜಿ ದೇಸಾಯಿ ಶಾಲೆಗಳನ್ನು ರಾಜ್ಯದಲ್ಲಿ ಯಾರು, ಯಾವಾಗ ಆರಂಭಿಸಿದರು ಎಂದು ಸಿಎಂ ಪ್ರಶ್ನೆ ಮಾಡಿದ್ದಾರೆ. ನೀವೇ ಆರಂಭಿಸಿದ್ದು  ಎಂದ ವಿದ್ಯಾರ್ಥಿ ಇಸವಿ ಹೇಳಲಿಲ್ಲ. ಬಳಿಕ 94-95ರಲ್ಲಿ ಆರಂಭಿಸಿದ್ದಾಗಿ ಸಿಎಂ ಹೇಳಿದರು. ಇದಕ್ಕೆ ಮಕ್ಕಳು ಚಪ್ಪಾಳೆ ತಟ್ಟಿದರು. ಬಳಿಕ ಮಕ್ಕಳ ಜೊತೆ ಮಧ್ಯಾಹ್ನದ ಉಪಹಾರ ಸೇವಿಸದ್ರು. ಅಲ್ಲದೇ  ಮಕ್ಕಳಿಗೆ ಬಸವಣ್ಣನವರ ಮಹತ್ವ ತಿಳಿಸಿದ್ರು. ಬಸವಣ್ಣನವರು ಸಾಮಾಜಿಕ ಕ್ರಾಂತಿ ಮಾಡಿದ್ದು ಏಕೆ ಎಂದು ಸಿಎಂ ಕೇಳಿದ್ದಾರೆ. ಮನುಷ್ಯರ ನಡುವಿನ ತಾರತಮ್ಯ, ಜಾತಿ ವ್ಯವಸ್ಥೆ ವಿರೋಧಿಸಿ ಸಾಮಾಜಿಕ ಕ್ರಾಂತಿ ನಡೆಸಿದವರು ಬಸವಣ್ಣನವರು ಎಂದು  ಸಿಎಂ ತಾವೇ ಮಕ್ಕಳಿಗೆ ಉತ್ತರಿಸಿದರು.

ಬಳಿಕ ವಸತಿ ಶಾಲೆಯ ಮಕ್ಕಳೊಂದಿಗೆ ಸಿಎಂ ಗ್ರೂಪ್ ಫೋಟೋಗೆ ಪೋಸ್ ಕೊಟ್ರು. ಇನ್ನು ಮಕ್ಕಳೊಂದಿಗೆ ಸಿಎಂ ಮುದ್ದೆ ಊಟ ಸವಿದ್ರು. ಅಲ್ಲದೇ ಮುದ್ದೆ, ತರಕಾರಿ‌ ಸಾಂಬರ್, ಅನ್ನ ಮೈಸೂರು ಪಾಕ್, ಹಪ್ಪಳ, ಬಜ್ಜಿಹಾಗೂ ಚೌಚೌ ರುಚಿ ಸವಿದ್ರು. ಇದೇ ವೇಳೆ ಅಡುಗೆ ಸಹಾಯಕಿಗೆ ಸಿಎಂ ಮುದ್ದೆ ಇನ್ನೂ ಬೇಯಿಸಿಬೇಕಮ್ಮ ಎಂದ್ದು.ಮುದ್ದೆ ಯಾರು ಬೇಯಿಸಿದ್ದು..?ಬಾರಮ್ಮ ಇಲ್ಲಿ

ಅರ್ಧಂಬರ್ಧ ಬೆಂದಿದೆ ಇನ್ನೂ ಚನ್ನಾಗಿ ಬೇಯಿಸಬೇಕು . ದಿನಾ ಹಿಂಗಾ ಮಾಡ್ತೀರಾ..? ಎಂದ್ರು. ಆಗ ಆಕೆ ಇನ್ಮೇಲೆ ಚನ್ನಾಗಿ ಮಾಡ್ತೀನಿ ಎಂದು ಅಡುಗೆ ಸಹಾಯಕಿ ಹೇಳಿದ್ರು. ಈ ವೇಳೆ ಸಮಾಜಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, MLC ಪ್ರಕಾಶ್ ರಾಥೋಡ್ ಸೇರಿ ಸಿಎಂಗೆ ಸಾಥ್ ನೀಡಿದ್ರು.