ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ರಿಯಲ್ ಎಸ್ಟೇಟ್ ಮಾಡಬಾರದು ಅಂತ ಕಟ್ಟು ನಿಟ್ಟಾಗಿ ಹೇಳಿದ್ದೀನಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ದೇವನಹಳ್ಳಿಯಲ್ಲಿ ನೂತನ ಪೊಲೀಸ್ ಠಾಣೆ ಉದ್ಘಾಟನೆ ಮಾಡಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಿಯಲ್ ಎಸ್ಟೇಟ್ ದಂಧೆ ರಾಜ್ಯ ಹಾಗೂ ಬೆಂಗಳೂರಿನಲ್ಲಿ ನಡೆಯುತ್ತಿದೆ ಅಂತ ಸಂಸದ ಸುಧಾಕರ್ ಅವರು ಹೇಳಿದರು. ನನಗೆ ಗೊತ್ತು ಅವರು ನಮಗೆ ಎಚ್ಚರಿಕೆಯನ್ನ ಕೊಟ್ಟಿದ್ದಾರೆ. ಅನೇಕ ಭಾರಿ ನಾನು ನಮ್ಮ ಪೊಲೀಸರಿಗೆ ಹೇಳಿದ್ದೇನೆ. ಪೊಲೀಸ್ ಠಾಣೆಯಲ್ಲಿ ರಿಯಲ್ ಎಸ್ಟೇಟ್ ಮಾಡಬಾರದು ಅಂತ ಕಟ್ಟು ನಿಟ್ಟಾಗಿ ಹೇಳಿದ್ದೀನಿ ಎಂದಿದ್ದಾರೆ.
ದೇವನಹಳ್ಳಿ ಯಲಹಂಕ ದೊಡ್ಡಬಳ್ಳಾಪುರ ಭಾಗದಲ್ಲಿ ಭೂಮಿ ಬೆಲೆ ಚಿನ್ನಕ್ಕಿಂತ ಹೆಚ್ಚಾಗಿದೆ. ದೇವನಹಳ್ಳಿ ಭಾಗದಲ್ಲಿ ಹೆಚ್ಚು ರಿಯಲ್ ಎಸ್ಟೇಟ್ ನಡೆಯುತ್ತಿದೆ ಅನ್ನೋದು ನನಗೆ ಗೊತ್ತಿದೆ. ದೇವನಹಳ್ಳಿ ಭಾಗದಲ್ಲಿ ಒಂದು ಸೆಟ್ಲ್ಮೆಂಟ್ ಮಾಡಿದರೆ ನಮಗೆ ಇಷ್ಟು ಭಾಗ ಅನ್ನೋದು ನಡೆಯುತ್ತಿದೆ. ಅದು ನನಗೆ ಗೊತ್ತಿದೆ ಇನ್ಮುಂದೆ ಅಂದು ನಡೆಯಬಾರದು.
ಇಡೀ ರಾಜ್ಯದಲ್ಲೆ ಮಾದರಿಯಾದ ಪೊಲೀಸ್ ಠಾಣೆ ಇಂದು ದೇವನಹಳ್ಳಿಯಲ್ಲಿ ಮಾಡಿದ್ದಾರೆ. ಹಗಲಲ್ಲಿ ಸ್ವಾಭಾವಿಕ ಗಾಳಿ ಬೆಳಕು ಬರುವಂತೆ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣ ಮಾಡಿದ್ದಾರೆ. ನೋಡಲು ತುಂಬಾ ಖುಷಿಯಾಗ್ತಿದೆ ಈ ಪೊಲೀಸ್ ಠಾಣೆ ಎಂದಿದ್ದಾರೆ.
ಇಲ್ಲಿನ ಎಸಿಪಿ ಇನ್ಸಪೆಕ್ಟರ್ ಇಬ್ಬರು ಇಂತಹ ಕಟ್ಟಡದಲ್ಲಿ ಕೆಲಸ ಮಾಡಲು ಅದೃಷ್ಟ ಮಾಡಿದ್ದಾರೆ. ಕೆಲಸ ಸಹ ಇದೇ ರೀತಿ ಸುಸಜ್ಜಿತವಾಗಿರವೇಕು ಒಳ್ಳೆ ಕೆಲಸ ಮಾಡಬೇಕು ಎಂದು ಪೊಲೀಸರಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಕಿವಿ ಮಾತು ಹೇಳಿದ್ದಾರೆ. ನಿನ್ನೆ ಒಂದು ರಿಪೋರ್ಟ್ ಬಂತ್ತು ಐಪಿಎಲ್ ಮ್ಯಾಚ್ ನೋಡಿ ಬಂದವರು. ಏನ್ ಸರ್ ಪೊಲೀಸ್ ನವರ ಕೆಲಸ ಎಷ್ಟು ಚೆನ್ನಾಗಿ ಮಾತನಾಡಿದರು ಅಂತ. ಎಷ್ಟು ಚೆನ್ನಾಗಿ ಟಿಕೆಟ್ ನೋಡಿ ಎಷ್ಟು ಚೆನ್ನಾಗಿ ಒಳಗೆಡೆ ಕಳಿಸಿಕೊಟ್ಟರು ಅಂತ. ಇದು ಅಲ್ವಾ ಬೇಕಾಗಿರುವುದು ಜನ ಸ್ನೇಹಿ ಪೊಲೀಸ್ ಗೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.











