ಮನೆ Latest News ವಿಜಯೇಂದ್ರ, ಅಶೋಕಣ್ಣ ಮಾಡಿರುವ ಆಸ್ತಿಯನ್ನ ವೈಟ್ ಪೇಪರ್‌ನಲ್ಲಿ ಬರೆದಿಡಬೇಕು: ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ

ವಿಜಯೇಂದ್ರ, ಅಶೋಕಣ್ಣ ಮಾಡಿರುವ ಆಸ್ತಿಯನ್ನ ವೈಟ್ ಪೇಪರ್‌ನಲ್ಲಿ ಬರೆದಿಡಬೇಕು: ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ

0

ದಾವಣಗೆರೆ; ವಿಜಯೇಂದ್ರ, ಅಶೋಕಣ್ಣ ಮಾಡಿರುವ ಆಸ್ತಿಯನ್ನ ವೈಟ್ ಪೇಪರ್‌ನಲ್ಲಿ ಬರೆದಿಡಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

 

ನಾನು ದಾವಣಗೆರೆಯ ಮುಸ್ಲಿಂ ಭಾಂದವರನ್ನು ಕೈ ಮುಗಿದು ವಿನಂತಿ ಮಾಡ್ತೀನಿ. ಬಿಜೆಪಿಯವ್ರು ನಿಮ್ಮ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಕಾಂಗ್ರೆಸ್‌ ನಿಮ್ಮ ಪರ ನಿಂತಿದೆ. ಹಿಂದೂಗಳಾದ ನಾವು ಅಟ್ಯಾಕ್ ಮಾಡಿ ಬಿಜೆಪಿಯವ್ರನ್ನ ಎದುರು ಹಾಕಿಕೊಂಡಿದ್ದೇವೆ. ದಾವಣಗೆರೆ ಮುಸ್ಲಿಂ ಬಾಂಧವರು ನನ್ನ ತಮ್ಮ ಸಮರ್ಥ್‌ ಬೆಂಬಲಿಸಿ.

ಅಹಿಂದ ಮತದಾರರು ಕಾಂಗ್ರೆಸ್‌ಗೆ ಮತ ಹಾಕಬೇಕು. ಎರಡೂ ಕ್ಷೇತ್ರಗಳನ್ನ ನಾವು ಗೆಲ್ತೀವಿ. ಶ್ರೀಮಂತಿಕೆ ಬಡವರ ಬಗ್ಗೆ ಅಶೋಕಣ್ಣ ಮಾತನಾಡೋದೆ ನನಗೆ ಆಶ್ಚರ್ಯ. ವಿಜಯೇಂದ್ರ, ಅಶೋಕಣ್ಣ ಮಾಡಿರುವ ಆಸ್ತಿಯನ್ನ ವೈಟ್ ಪೇಪರ್‌ನಲ್ಲಿ ಬರೆದಿಡಬೇಕು. ಅಶೋಕಣ್ಣ ನೀವು ಕಂದಾಯ ಸಚಿವರಾದಾಗ ಎಷ್ಟೆಷ್ಟು ಸೈಟು ಜಮೀನು ಮಾಡಿದ್ದೀರಿ ಎಂದು ಆರ್.ಅಶೋಕ್‌ಗೆ ಪ್ರದೀಪ್ ಈಶ್ವರ್ ತಿರುಗೇಟು ಕೊಟ್ಟಿದ್ದಾರೆ.

ಮಲ್ಲಿಖಾರ್ಜುನ ಖರ್ಗೆ ಅವರ ವಿಷ ಸರ್ಪ ಹೇಳಿಕೆಗೆ ಬಿಜೆಪಿ ಆಕ್ರೋಶ ವಿಚಾರದ ಬಗ್ಗೆ ಮಾತನಾಡಿದ ಅವರು ಅಸ್ಸಾಂನಲ್ಲಿ ಸರ್ಪ ಬಂದ್ರೆ ಒಡೆದುಹಾಕಿ ಅಂತ ಹೇಳಿದ್ದಾರೆ. ಖರ್ಗೆಯವ್ರು ಅವರ ಹಿರಿತನದ ಮಾತನಾಡಿದ್ದಾರೆ. ನೊಂದಾವಣಿ‌ ಇಲ್ಲದ ಸಂಸ್ಥೆ ಆರ್‌ಎಸ್‌ಎಸ್. ಬೇಸಿಕ್ ರಿಜಿಸ್ಟ್ರೇಷನ್ ಇಲ್ಲದ ಆರ್‌ಎಸ್‌ಎಸ್, ನಮಗೆ ಪಾಠ ಹೇಳ್ತೀರಾ.

ಸಿ.ಕೆ.ರಾಮಮೂರ್ತಿಯನ್ನ ಕಾನ್ಸ್‌ಸ್ಟೇಬಲ್‌‌ ಮಾಡಿಕೊಂಡಿದ್ದಾರೆ. ಯಾರು ಬೈದರೂ ಅವರನ್ನ ಕಳುಹಿಸಿ ಕೇಸ್ ಹಾಕಿಸೋಕೆ‌.ನಮಗೆ ಬಿಜೆಪಿಯವ್ರ ಮೇಲೆ ಕೇಸ್ ಹಾಕಿಸೋಕೆ‌ ಕಷ್ಟನಾ. ರಾಜ್ಯಕ್ಕೆ ಮಲ್ಲಿಕಾರ್ಜುನ ಖರ್ಗೆಯವರದ್ದೆ ಆದ ಕೊಡುಗೆ ಇದೆ. ಮಹಾತ್ಮ ಗಾಂಧಿ ಕೂತ ಜಾಗದಲ್ಲಿ ಇವತ್ತು ಕೂತಿದ್ದಾರೆ. ಅದು ದಲಿತರ ತಾಕತ್ತು. ಸುರೇಶ್ ಕುಮಾರ್, ಛಲವಾದಿ ಬಾಯಿ ಬಡಿದುಕೊಳ್ತೀರಾ. ಖರ್ಗೆಯಂತ ದಲಿತ ವ್ಯಕ್ತಿಯನ್ನ ಟಾರ್ಗೆಟ್ ಮಾಡ್ತಿದ್ದಾರೆ.ನಿಮಗೆ ಇಷ್ಟ ಆಗೋದು ಒಂದೇ ಆರ್‌ಎಸ್‌ಎಸ್. ನೀವು ಬ್ರಾಹ್ಮಣರ ಮಕ್ಕಳಿಗೆ ಏನ್ ಮಾಡಿದ್ದೀರಾ. ದೇವಸ್ಥಾನದಲ್ಲಿ ಪೂಜೆ ಮಾಡುವ ಅರ್ಚಕರಿಗೆ ನಾವು ಕಾರ್ಯಕ್ರಮ ಕೊಟ್ಟಿದ್ದೇವೆ. ಬರೀ ಹಿಂದೂ ಮುಸ್ಲಿಂ ಕೋಮುಗಲಭೆ ಅಷ್ಟೇ ಎಂದಿದ್ದಾರೆ..