ಮನೆ Latest News ತಿರುಗಿ ತಿರುಗಿ ಅದನ್ನೇ ಯಾಕೆ ಹೇಳೋದು? ನಿನ್ನೆ ಹೇಳಿದ್ದು‌ ಮುಗೀತು: ಇನ್ನೆರಡು ವರ್ಷ ಸಿದ್ದರಾಮಯ್ಯ ಸಿಎಂ...

ತಿರುಗಿ ತಿರುಗಿ ಅದನ್ನೇ ಯಾಕೆ ಹೇಳೋದು? ನಿನ್ನೆ ಹೇಳಿದ್ದು‌ ಮುಗೀತು: ಇನ್ನೆರಡು ವರ್ಷ ಸಿದ್ದರಾಮಯ್ಯ ಸಿಎಂ ಎಂಬ ಹೇಳಿಕೆ ಬಗ್ಗೆ ಪರಮೇಶ್ವರ್ ಸ್ಪಷ್ಟನೆ

0

ಬೆಂಗಳೂರು;  ತಿರುಗಿ ತಿರುಗಿ ಅದನ್ನೇ ಯಾಕೆ ಹೇಳೋದು? ನಿನ್ನೆ ಹೇಳಿದ್ದು‌ ಮುಗೀತು ಎಂದು ಇನ್ನೆರಡು ವರ್ಷ ಸಿದ್ದರಾಮಯ್ಯ ಸಿಎಂ ಎಂಬ ಹೇಳಿಕೆ ಬಗ್ಗೆ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.

ಸಂಪುಟ ಪುನಾರಚನೆ ಬಗ್ಗೆ ನಮ್ಮ ಹೈಕಮಾಂಡ್ ಇದೆ ನಿರ್ಧಾರ ಮಾಡುತ್ತೆ. ಸಿಎಂ, ಹೈಕಮಾಂಡ್ ‌ತೀರ್ಮಾನ ಮಾಡ್ತಾರೆ. ಪದೇ ಪದೇ ಅದನ್ನೇ ಕೇಳೋದೇಕೆ?. ಯಾವುದೇ ತೀರ್ಮಾನ ನಾವು ಹೇಳೋಕ್ಕ ಆಗಲ್ಲ. ನಮ್ಮ ಅನಿಸಿಕೆಯಂತೆ ಹೈಕಮಾಂಡ್ ನಿರ್ಧಾರ ಮಾಡಲ್ಲ. ಊಹೆ ಮಾಡಿಕೊಂಡು ದಿನಾ ಮಾತಾಡೋದು ಸರಿಯಿಲ್ಲ. ಎಲ್ಲವನ್ನೂ ಹೈಕಮಾಂಡ್ ನವ್ರು ಗಮನಿಸ್ತಾರೆ. ಎರಡು ಮೂರು ಬಾರಿ ಗೆದ್ದವರು ಸಭೆ ಮಾಡಿದ್ದು ಹೈಕಮಾಂಡ್ ಗಮನಿಸಿದೆ. ಅದರ ಬಗ್ಗೆ ಪ್ರಧಾನ ಕಾರ್ಯದರ್ಶಿಗಳು ವರದಿ‌ ಕೊಡ್ತಾರೆ. ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಹೈಕಮಾಂಡ್ ಮಾಡುತ್ತೆ ಎಂದಿದ್ದಾರೆ.

ತಮಿಳುನಾಡಿನಲ್ಲಿ 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಚಾರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದರ ಬಗ್ಗೆ ನಾನು ಇನ್ನೂ ಡಿಜಿಪಿಯವರ ಜತೆ ಚರ್ಚೆ ಮಾಡಿಲ್ಲ. ತಮಿಳುನಾಡಿನಲ್ಲಿ ನಡೆದ ಘಟನೆಯನ್ನು ಒಂದು ಉದಾಹರಣೆ ರೀತಿ ನೋಡಬೇಕೇ ಹೊರತು ಬೇರೇನಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಎಲ್‌ಪಿಜಿ, ಆಟೋ ಗ್ಯಾಸ್ ಅಭಾವ ವಿಚಾರದ ಬಗ್ಗೆ ಮಾತನಾಡಿದ ಅವರು ಈಗಾಗಲೇ ಕೇಂದ್ರಕ್ಕೆ ರಾಜ್ಯದಿಂದ ಈ ಬಗ್ಗೆ ಪತ್ರ ಬರೆಯಲಾಗಿದೆ.ನಮಗೆ ಕೊಡಬೇಕಾದ ಹಂಚಿಕೆ ಕೊಡಿ ಅಂತ ಕೇಳದ್ದೇವೆ. ಮುನಿಯಪ್ಪನವರೂ ಸಹ ಕೇಂದ್ರದ ಜತೆ ಸಂಪರ್ಕದಲ್ಲಿದ್ದಾರೆ. ಎಲ್ಲರಿಗೂ ಆಗೋದೇ‌ ನಮಗೂ ಆಗೋದು. ಆದರೆ ನಮಗೆ ಎಲ್‌ಪಿಜಿ ಹಂಚಿಕೆ‌ ಕೊಡಬೇಕಲ್ಲ ಕೇಂದ್ರ. ನಮಗೊಂದು ಬೇರೆಯವರಿಗೊಂದು ಆಗೋದು ಬೇಡ. ಸಿಎಂ ಅವರೂ ನಿನ್ನೆ ಮಾತಾಡಿದ್ದಾರೆ. ನಮ್ಮ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕಲ್ಲ. ಚುನಾವಣೆ ಆದ ನಂತರ ಬಹುಶ: ಈ ಸಮಸ್ಯೆ ನಿರ್ವಹಣೆಗೆ ಸಿಎಂ ಯಾರನ್ನಾದರೂ ನಿಯೋಜಿಸಬಹುದು. ಮುನಿಯಪ್ಪ ಹಾಗೂ ಅಧಿಕಾರಿಗಳನ್ನು ನಿಯೋಜಿಸಿ ಕೇಂದ್ರದ ಜತೆ ಸಂಪರ್ಕದಲ್ಲಿರುವ ಹಾಗೆ ಮಾಡ್ತಾರೆ ಎಂದಿದ್ದಾರೆ.

ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣದ ಬಗ್ಗೆ ಮಾತನಾಡಿ ಈಗಾಗಲೇ ಕ್ರಮ ತಗೊಂಡು ಬಂಧನ ಮಾಡಲಾಗಿದೆ. ಪೊಲೀಸರು ಕ್ರಮ ತಗೊಳ್ತಿದ್ದಾರೆ. ಅದನ್ನು ರಾಜ್ಯದಲ್ಲಿ ಪ್ರಚಾರ ಮಾಡಲು‌ ಕೆಲವರು ಹೊರಟಿದ್ದಾರೆ, ಅದಾಗಬಾರದು. ನಾವು ಕಾನೂನು ಪ್ರಕಾರ ಏನು ಕ್ರಮ ತಗೋಬೇಕೋ ತಗೋತೇವೆ. ಎಲ್ಲದಕ್ಕೂ ಹಿಂದೂ ಮುಸ್ಲಿಂ ಅಂತ ಹೇಳೋದು ಸರಿಯಲ್ಲ. ಅಂಥ ಘಟನೆಗಳು ನಡೆದರೆ ಹತ್ತಿಕ್ಕುತ್ತೇವೆ. ಎಲ್ಲದಕ್ಕೂ ಅದನ್ನು ತರೋದು ಬೇಡ. ಕಾನೂನು ಪ್ರಕಾರ ಕ್ರಮ‌ ಆಗಲಿದೆ. ಈ ಪ್ರಕರಣದಲ್ಲೂ ಪೊಲೀರು ಕ್ರಮ ವಹಿಸಿದ್ದಾರೆ ಎಂದಿದ್ದಾರೆ.

ಐಪಿಎಲ್ ವೇಳೆ ಪಿಕ್‌ಪಾಕೆಟ್ ಪ್ರಕರಣಗಳ ಬಗ್ಗೆ ಮಾತನಾಡಿ ಹೊರ ರಾಜ್ಯದ ಗ್ಯಾಂಗ್ ಮಾಡಿರೋದು ಇದು. ಈಗಾಗಲೇ ಅವರನ್ನು ಬಂಧಿಸಲಾಗಿದೆ ಕ್ರಮ ವಹಿಸಲಾಗಿದೆ . ಬಹಳಷ್ಟು ಪೋನ್ ಗಳನ್ನು ಸೀಜ್ ಮಾಡಲಾಗಿದೆ. ಮೊಬೈಲ್‌ ಗಳನ್ನು ಮಾಲೀಕರಿಗೆ ವಾಪಸ್ ಕೊಡಲಾಗುತ್ತೆ. ಈ ಗ್ಯಾಂಗ್ ಐಪಿಎಲ್ ನಡೆಯುವ ಕಡೆ ಎಲ್ಲ ಹೋಗುತ್ತೆ. ಕದ್ದ ಮೇಲೆ ಎಲ್ರೂ ಒಂದೇ, ಕಳ್ಳ ಅಂತಾನೆ, ಅಪ್ರಾಪ್ತರು ಅಂತ ಬರಲ್ಲ ಎಂದಿದ್ದಾರೆ.

ಬಾಗಲಕೋಟೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯ ವರದಿ ವಿಚಾರದ ಬಗ್ಗೆ ಮಾತನಾಡಿ ಉಪಚುನಾವಣೆ ಪ್ರಚಾರ ಚೆನ್ನಾಗಿ ನಡೆದಿದೆ. ನಾನೂ ಹೋಗಿ ಬಂದಿದ್ದೇನೆ, ಸಿಎಂ ಅಲ್ಲೇ ಇದ್ದಾರೆ. ಚುನಾವಣೆ ಅಂದ್ರೆನೆ ಟಫ್ ಇರುತ್ತೆ. ನಮಗೆ ಬಂದ ಮಾಹಿತಿ ಪ್ರಕಾರ ಎರಡೂ ಕಡೆಯೂ ನಾವೇ ಗೆಲ್ತೇವೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.