ಮನೆ Latest News ಈಗ ಬಿಜೆಪಿಯವರ ನಿಜದ ಬಣ್ಣ ನಿಮಗೆ ಗೊತ್ತಾಗಿದೆ; ದಾವಣಗೆರೆಯಲ್ಲಿ ಬಿಜೆಪಿ ವಿರುದ್ಧ ಡಿಸಿಎಂ ವಾಗ್ದಾಳಿ

ಈಗ ಬಿಜೆಪಿಯವರ ನಿಜದ ಬಣ್ಣ ನಿಮಗೆ ಗೊತ್ತಾಗಿದೆ; ದಾವಣಗೆರೆಯಲ್ಲಿ ಬಿಜೆಪಿ ವಿರುದ್ಧ ಡಿಸಿಎಂ ವಾಗ್ದಾಳಿ

0

ದಾವಣಗೆರೆ: ಈಗ ಬಿಜೆಪಿಯವರ ನಿಜದ ಬಣ್ಣ ನಿಮಗೆ ಗೊತ್ತಾಗಿದೆ ಎಂದು ದಾವಣಗೆರೆಯಲ್ಲಿ ಬಿಜೆಪಿ ವಿರುದ್ಧ ಡಿಸಿಎಂ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಅವರು ಈಗ ಬಿಜೆಪಿಯವರ ನಿಜದ ಬಣ್ಣ ನಿಮಗೆ ಗೊತ್ತಾಗಿದೆ. ನಾವೇನು ಬಡವರಿಗೆ 5 ಗ್ಯಾರಂಟಿಯನ್ನ ಕೊಟ್ಟಿದ್ದೇವೆ, ಆ 5 ಗ್ಯಾರಂಟಿ ಹಣ ಬಿಡುಗಡೆ ಮಾಡಬಾರದು ಅಂತ ಹೇಳಿ ಕೋರ್ಟ್ ಗೆ ಹೋಗಿದ್ದಾರೆ. ಆದರೆ ಕೋರ್ಟ್ ನಲ್ಲಿ ಅವರಿಗೆ ಸ್ಟೇ ಕೊಡ್ಲಿಲ್ಲ. ಯಾವುದೋ ಈಗ ನಾವು ಗೃಹಲಕ್ಷ್ಮಿದು ಈಗ ತಿಂಗಳು ಮುಗಿತು, ಈಗ ದುಡ್ಡು ಬಿಡುಗಡೆ ಆಗಬೇಕು. ಕೊಡಬಾರದು ದುಡ್ಡು ಅಂತ ಹೇಳಿ ಕೋರ್ಟ್ ಗೆ ಹೋಗಿದ್ದಾರೆ. ಅವರ ನಿಜದ ಬಣ್ಣ ಬಯಲಾಗಿದೆ. ಆದರೆ ಕೋರ್ಟ್ ಅಲ್ಲಿ ಬರೀ ನೋಟಿಸ್ ಮಾತ್ರ ಕೊಟ್ಟಿದ್ದಾರೆ. ಇದೇನು ಹೊಸ ಸ್ಕೀಮ್ ಅಲ್ಲ ಇದು, ಮೊದಲಿಂದಾನೂ ನಡೆದುಕೊಂಡು ಬಂದಂತಹ ಸ್ಕೀಮ್ ಇದು. ಕಳೆದ ಎರಡು ವರ್ಷದಿಂದ ಹಣನ ಕೊಡ್ತಾ ಇದ್ದೀವಿ ಎಂದಿದ್ದಾರೆ.

​ಇವತ್ತು ಯಾವ ಕಾರಣಕ್ಕೂ ನಾವು ಆ ಕಾರ್ಯಕ್ರಮ ನಿಲ್ಲಿಸೋದಿಲ್ಲ, ಹಣನೂ ನಿಲ್ಲಿಸೋದಿಲ್ಲ. ತಾವೆಲ್ಲ ತತ್ತರಿಸ್ತಾ ಇದ್ದೀರಿ, ತಾವು ತಲೆ ಕೆಡಿಸಿಕೊಳ್ಳಬೇಡಿ. ಇದು ನಿಮ್ಮ ಪಕ್ಷ, ನಿಮ್ಮ ಸರ್ಕಾರ, ಯಾವ ಕಾರಣಕ್ಕೂ ಈ ಹಣನ ಇನ್ನಷ್ಟು ಜನ್ಮ ಬಂದು ಕೂಡ ಬಿಜೆಪಿಯವರ ಕೈಲಿ ನಿಲ್ಲಿಸಲಿಕ್ಕೆ ಸಾಧ್ಯ ಇಲ್ಲ. ​ಈಗ ಇಂದಿರಾಗಾಂಧಿಯವರು ಓಲ್ಡ್ ಏಜ್ ಪೆನ್ಷನ್ ಕೊಟ್ರು, ನಿಲ್ಸೋಕೆ ಆಯ್ತಾ? ಈಗ ಅಕ್ಕಿ ಕೊಟ್ರು ಮನಮೋಹನ್ ಸಿಂಗ್ ಸರ್ಕಾರ, ಸಿದ್ದರಾಮಯ್ಯ ಸರ್ಕಾರ, ನಿಲ್ಸೋಕೆ ಆಯ್ತಾ ಬಿಜೆಪಿ ಬಂದು? ಯಾವ್ದೂ ನಿಲ್ಸೋಕೆ ಆಗಲ್ಲ. ನಿಮ್ಮ ಬಸ್ಸನ್ನು ನಿಲ್ಸೋಕೆ ಆಗಲ್ಲ. ಈಗ ಮೊನ್ನೆ ತಾನೆ ನಾನು ತೆಲಂಗಾಣಕ್ಕೆ ಹೋಗಿ ಬಂದಿದ್ದೀನಿ, ಅಲ್ಲೂ ಹೆಣ್ಣುಮಕ್ಕಳಿಗೆ ಫ್ರೀ ಬಸ್ಸು, ಪೆನ್ಷನ್ 3000 ರೂಪಾಯಿ, ಇವೆಲ್ಲ ಕೂಡ ಅನೌನ್ಸ್ ಮಾಡಿಬಿಟ್ಟು ಬಂದಿದ್ದೀವಿ. 28 ಲಕ್ಷ ರೂಪಾಯಿ ವರೆಗೂ ಅಲ್ಲಿ ಹೆಲ್ತ್ ಇನ್ಶೂರೆನ್ಸ್ ಸ್ಕೀಮ್ ಅನ್ನ ಅನೌನ್ಸ್ ಮಾಡಿದ್ದೀವಿ ಆರೋಗ್ಯಕ್ಕೋಸ್ಕರ. ಹಂಗೆ ಇಲ್ಲಿ ಏನು 5 ಗ್ಯಾರಂಟಿ ಕೊಟ್ಟಿದ್ದೀವಿ, ಯಾವ ಕಾರಣಕ್ಕೂ ಬಿಜೆಪಿಯವರು ತಿಪ್ಪರಲಾಗ ಹೊಡಿಲಿ, ಅವರು ಗೆಲ್ಲೋದಿಲ್ಲ. 28ಕ್ಕೂ ನಿಮ್ಮದೇ ಸರ್ಕಾರ. ಈ ಕ್ಷೇತ್ರಕ್ಕೆ ಸಮರ್ಥ ಎಂ.ಎಲ್.ಎ ನಿಮ್ಮ ಆಶೀರ್ವಾದ ಇರಲಿ.ತಾವೆಲ್ಲ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

​ನಾನು ಸುಮಾರು ಜನ ಬಡವರನ್ನ ಕೇಳಿದೆ, ಏನಪ್ಪಾ ಅಂತ? ‘ಅಪ್ಪಾ, ಹಾಸ್ಪಿಟಲ್ ಗೆ ಹೋಗ್ಬೇಕಾದ್ರೆ ಶಿವಶಂಕರ್ ಅಪ್ಪನ ಹತ್ರ ಹೋಗ್ಬೇಕು. ಕಷ್ಟಕ್ಕೆ, ಈ ಸ್ಕೂಲ್ ಸೇರಿಸ್ಬೇಕಾದ್ರೆ ಶಿವಶಂಕರ್ ಅಪ್ಪನ ಹತ್ರ ಹೋಗ್ಬೇಕು. ಕೋವಿಡ್ ಡೌಸ್ ಗೆ ಶಿವಶಂಕರ್ ಅಪ್ಪನ ಹತ್ರ ಹೋಗ್ಬೇಕು. ಅವರ ಮನೆಯ ಬಾಗಿಲು ಬಡವರಿಗೆ ಯಾವತ್ತೂ ತೆರೆದಿದೆ. ನಮಗೆ ಯಾರೂ ಇಲ್ಲ, 25-40 ವರ್ಷದಿಂದ ಶಿವಶಂಕರ್ ಅಪ್ಪ ಸಾಕ್ದಿದ್ದಾರೆ.’ ಸೋ ಅದಕ್ಕೆ ನಾವು ಏನಿದ್ರೂ ಅವರ ಪರವಾಗಿ ನಿಂತ್ಕೊತೀವಿ ಅಂತ ಬಡವರು ಅಂತಾ ಇದ್ದಾರೆ.  ಆದ್ದರಿಂದ ಅವರ ಗುಡಿ ನಮ್ಮ ಸಮರ್ಥ, ನಿಮ್ಮ ಮಗ ಅವನು. ಎಲ್ಲಾ ಜಾತಿ ಎಲ್ಲಾ ಧರ್ಮದ ಮಗ ಅವನು. ಅವನಿಗೆ ಆಶೀರ್ವಾದ ಮಾಡಬೇಕು, ಅವನ ಹಸ್ತಕ್ಕೆ ನೀವು ವೋಟ್ ಮಾಡಬೇಕು ಅಂತ ಹೇಳಿ ನಾನು ನಿಮಗೆಲ್ಲ ಪ್ರಾರ್ಥನೆ ಮಾಡ್ತೀನಿ ಎಂದಿದ್ದಾರೆ