ಬೆಂಗಳೂರು: ಎಸ್ ಸಿ, ಎಸ್ ಟಿ ಪಂಗಡವನ್ನ ಬಿಜೆಪಿ ಅವರು ಒಡೆದಿದ್ದಾರೆ ಎಂಬ ತಮ್ಮ ಹೇಳಿಕೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದರು ಯಾರು?. ಅದಕ್ಕಾಗಿ ನಾನು ಹೇಳಿದ್ದು. ಹಿಂದೆ ಸದಾಶಿವ ಆಯೋಗ ರಿಜೆಕ್ಟ್ ಮಾಡಿದರು, ದೆಹಲಿಗೆ ಪರ್ಸೆಂಟೇಜ್ ಕಳಿಸಿದರು. ಇದೇ ಗೊಂದಲ ವಿಚಾರವಾಗಿ ನಾನು ಹೇಳಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೈ ಎಲೆಕ್ಷನ್ ಮೇಲೆ ಎಫೆಕ್ಟ್ ಆಗುತ್ತಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಮಾಡಲ್ಲ ಅಂತ ಏನಾದರೂ ಹೇಳಿದ್ದೇವಾ?. ನಾವು ಬದ್ಧವಾಗಿದ್ದೇವೆ ಎಂದಿದ್ದೇವೆ, ಪ್ರಾಸಸ್ ನಲ್ಲಿದೆ. ಸ್ಪೆಷಲ್ ಕ್ಯಾಬಿನೆಟ್ ಪೋಸ್ಟ್ ಪೋನ್ ಆಗಿದೆ. ಮುಂದೆ ಸ್ಪೆಷಲ್ ಸಂಪುಟ ಸಭೆ ಕರೆಯೋದು ಸಿಎಂ ಗೆ ಬಿಟ್ಟಿದ್ದು ಎಂದಿದ್ದಾರೆ.
ಶಾಸಕರ ಟಿಕೆಟ್ ನಲ್ಲಿ ಬೇರೆಯವರು ಬಂದಿರುವ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಟಿಕೆಟ್ ಅವರು ಆನ್ ಲೈನ್ ತೆಗೆದುಕೊಳ್ಳುತ್ತಾರೆ, ಅವ್ರು ಬಂದಿದ್ದರು. ಆದ್ರೆ ಆನ್ ಲೈನ್ ನಲ್ಲಿ ಟಿಕೆಟ್ ತೆಗೆದುಕೊಂಡವರು ಬಂದಿದ್ದಾರೆ. ಆದ್ರೆ ಯಾರೋ ತೆಗೆದುಕೊಳ್ಳುತ್ತಾರೆ ಅಂದ್ರೆ ಆನ್ ಲೈನ್ ನಾವು ಕಂಟ್ರೋಲ್ ಮಾಡೋಕೆ ಆಗುತ್ತಾ?. ದುರ್ಬಳಕೆ ಏನಿಲ್ಲ, ಅವರೇ ಹೋಗಬಹುದು, ಕುಟುಂಬದದವರು ಹೋಗಬಹುದು ಅಂತ ಮಾಡಿರ್ತಾರೆ. ಅದರಲ್ಲಿ ನಾವು ತಪ್ಪು ಕಂಡು ಹಿಡಿಯೋದು ಕಷ್ಟ ಆಗುತ್ತದೆ. ಅದರಲ್ಲಿ ನಾಟ್ ಟ್ರಾನ್ಸ್ ಪರೇಬಲ್ ಅಂತ ಬರೆದಾಗ ಬೇರೆಯವರು ಹೋಗೋಕೆ ಆಗಲ್ಲ. ಹಂಗೆ ಕಂಡೀಷನ್ ಹಾಕಿದ್ರೆ ಕೊಡಲ್ಲ, ಓಪನ್ ಆಗಿದ್ರೆ ಹೋಗಬಹುದು .ಸ್ನೇಹಿತರು, ಕುಟುಂಬದ ದವರು ಹೋಗಬಹುದು ಎಂದಿದ್ದಾರೆ.
ಇದೇ ವೇಳೆ ದಾವಣಗೆರೆ ದಕ್ಷಿಣ, ಬಾಗಲಕೋಟೆ ಉಪಚುನಾವಣಾ ಪ್ರಚಾರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಎರಡೂ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಸರ್ಕಾರ ಏನು ಕೆಲಸ ಮಾಡಿದೆ, ಜನರ ಪರ ಕೆಲಸ ಮಾಡಿದ್ದೇವೆ. ಕಳೆದ ಮೂರು ವರ್ಷಗಳಿಂದ ಕೆಲಸ ಮಾಡಿದ್ದೇವೆ. ನಾವು ಗೆಲ್ಲುತ್ತೇವೆ ಅನ್ನೋ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.
ದ್ವಿಭಾಷಾ ವಿಷ್ಯಕ್ಕೆ ರಾಜ್ಯಪಾಲರ ಆಕ್ರೋಶ, ಕನ್ನಡ ಪರ ಸಂಘಟನೆ ಗಳ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿ ಇದು ಹೊಸತೇನು ಅಲ್ಲ.ನಾವು ಶಾಲೆಯಲ್ಲಿದ್ಸಾಗ ನಮ್ಮ ಕೈಲೇ ಕೂಗಿಸುತ್ತಿದ್ದರು. ಸ್ಥಳೀಯ ಭಾಷೆಗೆ ಪ್ರಾತಿನಿಧ್ಯತೆ ಸಿಗಬೇಕು ಅನ್ನೋದು ಬೇಡಿ.ಇದು ಮೊದಲಿನಿಂದಲೂ ಇದೆ ಎಂದ ಅವರು ಲೋಕಸಭೆ ಸ್ಥಾನಗಳ ಏರಿಕೆ ವಿಷ್ಯದಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ ಆಗ್ತಿದೆ ಎಂಬ ವಿಚಾರದ ಬಗ್ಗೆ ಮಾತನಾಡಿ ಜನಸಂಖ್ಯೆ ಆಧಾರದ ಮೇಲೆ ಮಾಡೋದು ಬೇಡ. ಫ್ಯಾಮಿಲಿ ಪ್ಲಾನಿಂಗ್ ವಿಷ್ಯದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಕಠಿಣ ಹೆಜ್ಜೆ ಇಟ್ಟಿದೆ. ಅದರ ಆಧಾರದ ಮೇಲೆ ಸಿಎಂ ಹೇಳಿದ್ದಾರೆ.ಅವರ ಮಾನದಂಡ ಇರೋದು ಜನಸಂಖ್ಯೆ, ಇದು ಆಗಬಾರದು ಅನ್ನೋದು ನಮ್ಮ ಇಚ್ಛೆ ಕೂಡ ಎಂದು ತಿಳಿಸಿದ್ದಾರೆ,
ಗ್ಯಾಸ್ ಸಿಗ್ತಿಲ್ಲ, ಆಟೋ ಚಾಲಕರ ಆಕ್ರೋಶದ ಬಗ್ಗೆ ಮಾತನಾಡಿ ನಾವು ಬೇಡಿಕೆ ಕೊಟ್ಟಿದ್ದೇವೆ.ಒಂದು ರಾಜ್ಯಕ್ಕೆ ಕೋಡೋದನ್ನ ಕೊಡಬೇಕು ಅಲ್ವೇ.ಯುದ್ಧದಿಂದ ತೊಂದ್ರೆ ಆಗ್ತಿದೆ ಅನ್ನೋದು ಗೊತ್ತು. ಆದ್ರೆ ನಮಗೆ ಕೊಡಬೇಕಾಗಿರೋದನ್ನ ಕೊಡಬೇಕು ಅಲ್ಲ, ಅದರನ್ನ ಸರಿ ಪಡಿಸಿ ಎಂದಿದ್ದೇವೆ ಎಂದ ಅವರು ವಿರೋಧ ಪಕ್ಷಗಳ ಸರ್ಕಾರವನ್ನ ಇಕ್ಕಟ್ಟಿಗೆ ಕೇಂದ್ತ ಸರ್ಕಾರ ಸಿಲುಕಿಸುತ್ತಿದ್ಯಾ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ನಾವು ಏನೂ ಬೇಕಾದರೂ ಹೇಳಬಹುದು. ನಮಗೆ ಗ್ಯಾಸ್ ಬೇಕಲ್ಲ, ತೈಲ ಬೇಕು.ಎಲ್ಲಾ ರಾಜ್ಯಗಳಿಗೆ ಕೊಟ್ಟಂತೆ ನಮಗೂ ಕೊಡಬೇಕು. ಕಾಳ ಸಂತೆಯಲ್ಲಿ ಮಾರೋರಿಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ.ಕೇಸ್ ದಾಖಲಾಗಿದೆ, ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.











