ಕೊಪ್ಪಳ ಲೋಕಸಭಾ ಕ್ಷೇತ್ರದ ಸೋಲಿನ ಕುರಿತು ಪರಾರ್ಮಶೆ ಸಭೆ ನಡೆಯಿತು. ಸಭೆಯಲ್ಲಿ ಶಾಸಕ ಜನಾರ್ದನ್ ರೆಡ್ಡಿ, ಹಾಲಪ್ಪ ಆಚಾರ್, ಪರಾಜಿತ ಅಭ್ಯರ್ಥಿ ಡಾ ಬಸವರಾಜ್ ಕ್ಯಾವಟೂರು ಭಾಗಿಯಾಗಿದ್ದರು.ಈ ವೇಳೆ ನಾಯಕರ ಮುಂದೆ ಸೋಲಿಗೆ ಕಾರಣವಾಗಿರೋ ಅಂಶಗಳನ್ನು ನಾಯಕರು ತಿಳಿಸಿದ್ರು.
ಅಭ್ಯರ್ಥಿ ಬದಲಾವಣೆ ಸೋಲಿಗೆ ಕಾರಣವಲ್ಲ.ಸಂಗಣ್ಣ ಕರಡಿ ಸ್ಪರ್ಧಿಸಿದ್ರೆ ಇನ್ನೂ ಹೆಚ್ಚು ಅಂತರದಲ್ಲಿ ಸೋಲುತ್ತಿದ್ವು.ಟಿಕೆಟ್ ಘೋಷಣೆ ಸ್ವಲ್ಪ ವಿಳಂಬ ಆಯ್ತು.ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿದಿದೆ.ಸಂಗಣ್ಣ ಕರಡಿ ಪಕ್ಷ ತೊರೆದಿದ್ದು ಒಂದಿಷ್ಟು ಮತ ಪರಿವರ್ತನೆ ಆಗೋಕೆ ಕಾರಣವಾಯ್ತು.ಎಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಗೆ ಹೆಚ್ಚು ಅನುಕಂಪ ಅಲೆ ಇತ್ತು. ಯಾಕಂದ್ರೆ ಸತತ ಮೂರು ಬಾರಿ ಬಿಜೆಪಿ ಗೆದ್ದಿತ್ತು. ಹಿಟ್ನಾಳ್ ಕುಟುಂಬದ ಬಗ್ಗೆ ಅನುಕಂಪ ಮೂಡಿತ್ತು. ಕ್ಷೇತ್ರದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದಾರೆ.ಅದ್ರಲ್ಲೂ ಜನಾರ್ದನ್ ರೆಡ್ಡಿ ಬಲ ಕೂಡ ಸಿಕ್ಕಿತ್ತು.ಬಿಜೆಪಿ ಸರ್ಕಾರ ಇದ್ದಾಗ ಅಧಿಕಾರದಲ್ಲಿದ್ದವರು ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದಿರೋದೇ ಸೋಲಿಗೆ ಕಾರಣ. ಕಾರ್ಯಕರ್ತರ ಮಟ್ಟದಲ್ಲಿ ಆಸಕ್ತಿ ಕೂಡ ಕಡಿಮೆ ಆಗಿತ್ತು.ಇದೆಲ್ಲವೂ ಕೂಡ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸೋಲಿಗೆ ಕಾರವಾಗಿತ್ತು ಎಂದು ಸಭೆಯಲ್ಲಿ ಪ್ರಸ್ತಾಪವಾಯಿತು.
ಅಲ್ಲದೇ ಮುಂಬರುವ ಸ್ಥಳೀಯ ಸಂಸ್ಥೆ ಗಳ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಭರವಸೆ ನೀಡಿದ್ರು.ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ನೇತೃತ್ವದಲ್ಲಿ ಅವಲೋಕನ ಸಭೆ ನಡೆಯಿತು.
ಇನ್ನು ಸಭೆಯ ಬಳಿಕ ಮಾತನಾಡಿದ ನಾನು ಸಂಡೂರು ವಿಧಾನಸಭೆ ಉಪಚುನಾವಣೆ ಟಿಕೆಟ್ ಕೇಳಿಲ್ಲ.ನಾನು ಸಂಡೂರಿನಲ್ಲಿ ನಿಲ್ಲೋದೂ ಇಲ್ಲ.ಪಕ್ಷ ಯಾರಿಗೆ ಟಿಕೆಟ್ ಕೊಡುತ್ತೋ ಅವರ ಪರ ಕೆಲಸ ಮಾಡ್ತೇನೆ, ಗೆಲ್ಲಿಸ್ತೇನೆ ಎಂದರು. ಅಲ್ಲದೇ ಪರಾಮರ್ಶೆ ಸಭೆಯಲ್ಲಿ ಬಳ್ಳಾರಿ ಲೋಕಸಭೆ ಸೋಲು ಹಾಗೂ ಸಂಡೂಡು ಉಪಚುನಾವಣೆ ಸಿದ್ಧತೆ ಬಗ್ಗೆ ಚರ್ಚೆ ನಡೆಸಲಾಯಿತು.ಬಳ್ಳಾರಿ ಕ್ಷೇತ್ರದ ಸೋಲಿನ ಬಗ್ಗೆ ಚರ್ಚೆ ಆಯ್ತು.ಸಂಡೂರು ಗೆಲ್ಲುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದ್ರು. ಇನ್ನು ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣಲ್ಲಿ ಹೋರಾಟ ಮುಂದುವರೆಸುತ್ತೇವೆ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.ಆದರೆ ಇದುವರೆಗೆ ಅವರ ವಿಚಾರಣೆ ಆಗಿಲ್ಲ.ಉಳಿದ ನಿಗಮ, ಮಂಡಳಿಗಳಲ್ಲೂ ಹಣ ಅಕ್ರಮ ವರ್ಗಾವಣೆ ಆಗಿರುವ ಅನುಮಾನ ಇದೆ.ಎಲ್ಲ ನಿಗಮ, ಮಂಡಳಿಗಳಲ್ಲೂ ಸರ್ಕಾರ ತನಿಖೆ ನಡೆಸಬೇಕಾಗಿದೆ.ಈ ಸರ್ಕಾರದ ಅವಧಿಯಲ್ಲಿ ಒಂದರ ಮೇಲೆ ಒಂದು ಭ್ರಷ್ಟಾಚಾರ ಹಗರಣಗಳು ನಡೆಯುತ್ತಿವೆ.ಸರ್ಕಾರ ವಿವಿಧ ದರಗಳನ್ನು ಏರಿಸಿದೆ.ಹಾಲಿನ ದರ ಮಾತ್ರ ಜಾಸ್ತಿ ಆಗಿದೆ, ಆದ್ರೆ ಪಾಕೆಟ್ ನಲ್ಲಿ ಹಾಲಿನ ಪ್ರಮಾಣ ಜಾಸ್ತಿ ಮಾಡಿಲ್ಲ.ಪ್ರಿಂಟ್‌ನಲ್ಲಿ ಮಾತ್ರ 50 ಮಿಲಿ ಅಂತ ಹಾಕಿದ್ದಾರೆ.ದೇಶದಲ್ಲಿ ಕರ್ನಾಟಕದ ಮಾನ ಹರಾಜು ಹಾಕಿದೆ ಈ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ರು.