ದಾವಣಗೆರೆ: ಸಿದ್ದರಾಮಯ್ಯ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ದಾವಣಗೆರೆ ತಾಲೂಕಿನ ಕೈದಾಳ ಗ್ರಾಮದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪನವರ ಪರ ಆರ್ ಅಶೋಕ್ ಪ್ರಚಾರ ಮಾಡಿದ್ರು. ಈ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ರು. ಸಿದ್ದರಾಮಯ್ಯ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಬಡವರನ್ನು ಗೆಲ್ಲಿಸಿ ಎಂದು ಪ್ರಚಾರ ಮಾಡಿದ್ದಾರೆ. ಅವರು ಬಂದಿರೋದು ಶ್ರೀನಿವಾಸ್ ದಾಸ್ ಕರಿಯಪ್ಪನ ಪರ ಪ್ರಚಾರಕ್ಕೆ . ಶ್ರೀಮಂತರಿಗೆ ಯಾರೂ ವೋಟ್ ಹಾಕಬೇಡಿ ಅಂತ ಹೇಳಿದ್ದಾರೆ. ಹಾಗಂದ್ರೆ ಬಡವರದ ಶ್ರೀನಿವಾಸ್ ದಾಸ್ ಕರೆಪ್ಪನಗೆ ವೋಟ್ ಹಾಕಿ ಅಂತ ಅರ್ಥ ಎಂದಿದ್ದಾರೆ.
ದಯವಿಟ್ಟು ನೀವೆಲ್ಲರೂ ಸಿದ್ದರಾಮಯ್ಯ ಹೇಳಿದಂಗೆ ಬಿಜೆಪಿಗೆ ಮತ ಹಾಕಿ..ಅವರು ಹೇಳಿದಂಗೆ ಅವರು ಅನ್ನರಾಮಯ್ಯ ಅಲ್ಲ, ಸುಳ್ಳುರಾಮಯ್ಯ. ಅನ್ನಭಾಗ್ಯ ನೀಡ್ತಿರೋದು ಕೇಂದ್ರ ಸರ್ಕಾರ, ಅದರ ಮೇಲಿರುವ ಎರಡು ರೂಪಾಯಿ ಚೀಲ ಕೊಡ್ತಿರೋದು ಮಾತ್ರ ರಾಜ್ಯ ಸಿದ್ದರಾಮಯ್ಯ ಸರ್ಕಾರ. ಒಬ್ಬ ಸಾಮಾನ್ಯ ಕಾರ್ಯಕರ್ತನ ವಿರುದ್ದ ಇಡೀ ಕಾಂಗ್ರೆಸ್ ಸರ್ಕಾರ ಬಂದು ದಾವಣಗೆರೆಯಲ್ಲಿ ಕೂತಿದೆ.ಅವರೆಲ್ಲ ಬರೀ ಕೈಯಲ್ಲಿ ಬಂದಿಲ್ಲ ಚೀಲದಲ್ಲಿ ಹಣ ತಂದಿದ್ದಾರೆ. ಒಂದೊಂದು ಬೂತಲ್ಲಿ ಮೂವರು ಶಾಸಕ ಸಚಿವರು ಇದ್ದರೆ, ಇಡಿ ಸರ್ಕಾರವೇ ಬಂದು ಬೂತ್ ಬೂತಗಳಲ್ಲಿ ಕೂತಿದೆ.ಹಾಗಾಗಿ ನೀವೆಲ್ಲರೂ ಬಡವರಾದ ಶ್ರೀನಿವಾಸ್ ದಾಸ್ ಕರಿಯಪ್ಪನವರಿಗೆ ಮತ ನೀಡಿ.ಒಬ್ಬ ಸಾಮಾನ್ಯ ಕಾರ್ಯಕರ್ತ ಬಡವನನ್ನು ಗೆಲ್ಲಿಸಿ ಎಂದು ಹದಡಿ ಗ್ರಾಮದಲ್ಲಿ ಆರ್ ಅಶೋಕ್ ಅಬ್ಬರದ ಭಾಷಣ ಮಾಡಿದ್ದಾರೆ.











