ಬೆಂಗಳೂರು; ಕೆ ಎಂ ಎಫ್ ಚುನಾವಣೆಗೆ ನಾನು ಆಕಾಂಕ್ಷಿ ಎಂದು ಹೇಳೇ ಇಲ್ಲ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಕೆ ಎಂ ಎಫ್ ಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ನಂಗೆ ಗೊತ್ತಿಲ್ಲ. ನಾನು ಆಕಾಂಕ್ಷಿ ಅಂತಾ ಹೇಳೇ ಇಲ್ಲ. ಆ ರೀತಿ ನಾನು ಹೇಳೇ ಇಲ್ಲ ಎಂದಿದ್ದಾರೆ.
ದ್ವಿಭಾಷ ನೀತಿಗೆ ಬಿಜೆಪಿ ವಿರೋಧ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು ದೇಶದಲ್ಲಿ ಮಾತೃ ಭಾಷೆ ತುಂಬಾ ಮುಖ್ಯ.ದ್ವೀತಿಯ ಭಾಷೆ ಕೂಡ ನೀಡಿದ್ದಾರೆ. ಅದು ಪೋಷಕರಿಗೆ ಬಿಟ್ಟ ವಿಚಾರ. ಅದು ಅವರ ವೈಯಕ್ತಿಕ ಅಭಿಲಾಷೆ. ಅದನ್ನ ಪೋಷಕರು ನಿರ್ಧಾರ ಮಾಡ್ತಾರೆ. ಮಕ್ಕಳಿಗೆ ಮೂರು ಭಾಷೆ ಒತ್ತಡ ಹಾಕಿದ್ರೆ ಅವರ ಕಲಿಕೆ ಮೇಲೆ ಪರಿಣಾಮ ಬೀಳುತ್ತೆ.
ಸಚಿವರು ಒಳ್ಳೆಯ ತೀರ್ಮಾನ ಮಾಡಿದ್ದಾರೆ. ಎರಡು ಭಾಷೆ ಕಲಿಯಿರಿ ಅಂತಾ ಹೇಳಿದ್ದಾರೆ. ಬಿಜೆಪಿ ನಾಯಕರಿಗೆ ವಿರೋಧ ಮಾಡೋದೇ ಗುರಿ. ಅವರ ನಾಯಕರನ್ನ ಮೆಚ್ಚಿಸಬೇಕು. ನಾವು ಹಿಂದಿ ಪರ ಇದ್ದೇವೆ ಎಂದು ಹೋರಾಟ ಮಾಡ್ತಾರೆ. ಆ ತರಹ ಕೇಂದ್ರದ ನಾಯಕರಿಗೆ ತೋರಿಸಬೇಕು. ಅದನ್ನ ಬಿಜೆಪಿ ನಾಯಕರು ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದು ಶೈಕ್ಷಣಿಕ ನಿರ್ಧಾರನಾ ಆಥವಾ ರಾಜಕೀಯನಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಆವತ್ತಿನ ಪರಿಸ್ಥಿತಿ ಬೇರೆ ಇವತ್ತಿನ ಪರಿಸ್ಥಿತಿ ಬೇರೆ. ಇವತ್ತು ಎರಡು ಭಾಷೆಗೆ ಅವಕಾಶ ಕೊಟ್ಟಿದ್ದಾರೆ. ಬಹುತೇಕರು ಮೂರನೇ ಭಾಷೆಯಲ್ಲಿ ಫೇಲ್ ಆಗ್ತಾರೆ. ಹಾಗಾಗೀ ಈ ಬೆಳವಣಿಗೆಯನ್ನ ತಂದಿದ್ದಾರೆ ಎಂದಿದ್ದಾರೆ











