ಮನೆ Latest News ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಸ್ನೇಹಿತೆಗೂ ಸಂಕಷ್ಟ; ಪವಿತ್ರ ಸ್ನೇಹಿತೆ ಸಮತಾ ಸೇರಿ ಮೂವರಿಗೆ...

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಸ್ನೇಹಿತೆಗೂ ಸಂಕಷ್ಟ; ಪವಿತ್ರ ಸ್ನೇಹಿತೆ ಸಮತಾ ಸೇರಿ ಮೂವರಿಗೆ ನೋಟಿಸ್

0

ಬೆಂಗಳೂರು :ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದರ ನಡುವೆ ಪೊಲೀಸರು ಮಾತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಲೇ ಇದ್ದಾರೆ. ನಿನ್ನೆ 24ನೇ ಎಸಿಎಂಎಂ ಕೋರ್ಟ್ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18 ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದರು. ಇದರ ಬೆನ್ನಲ್ಲೇ  ಪ್ರಕರಣದ ಎ1 ಆರೋಪಿ, ಮಾಸ್ಟರ್ ಮೈಂಡ್ ಪವಿತ್ರ ಗೌಡ ಸ್ನೇಹಿತೆ ಸಮತಾ ಸೇರಿದಂತೆ ಮೂವರು ಆರೋಪಿಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.ಮೂವರಿಗೂ ವಿಚಾರಣೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಆರೋಪಿ ಒಬ್ಬನಿಗೆ ಆರ್ಥಿಕವಾಗಿ ಸಹಾಯ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪವಿತ್ರ ಗೌಡ ಸ್ನೇಹಿತೆ ಸಮತಾ ಅವರಿಗೆ ನೋಟಿಸ್ ಸೇರಿದಂತೆ ನೋಟಿಸ್ ನೀಡಿದ್ದಾರೆ.ಇನ್ನು ಶಾಸಕ ರವಿ ಸುಬ್ರಮಣ್ಯ ಅವರ ಕಾರು ಚಾಲಕ ಎನ್ನಲಾದ ಕಾರ್ತಿಕ್ ಪುರೋಹಿತ್ ಎಂಬಾತನಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಕಾರ್ತಿಕ್ ಆರೋಪಿ ಪ್ರದೂಷ್ ಗೆ ಆಪ್ತನಾಗಿದ್ದ ಎನ್ನಲಾಗಿದೆ. ಪೊಲೀಸರು ನೋಟಿಸ್ ನೀಡುತ್ತಿದ್ದಂತೆ ಕಾರ್ತಿಕ್ ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಇದರ ಮಧ್ಯೆ ಮಾಜಿ ಉಪಮೇಯರ್ ಮೋಹನ್ ರಾಜ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ದರ್ಶನ್ ಅವರಿಗೆ ಮೋಹನ್ ರಾಜ್ 40 ಲಕ್ಷ ರೂಪಾಯಿ ಹಣ ನೀಡಿದ್ದಾರೆ ಎಂಬ ಆರೋಪ ಹಿನ್ನೆಲೆ ಅವರಿಗೆ ನೋಟಿಸ್ ನೀಡಲಾಗಿದೆ. ಈ ಹಿಂದೆಯೂ ಮೋಹನ್ ರಾಜ್ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು ಎನ್ನಲಾಗಿದೆ. ಇದೀಗ ಮೋಹನ್ ರಾಜ್ಗೆ ಎರಡನೇ ಬಾರಿ ನೋಟಿಸ್ ಜಾರಿ ಮಾಡಿದ್ದಾರೆ. ಅದರಂತೆ  ಬಸವೇಶ್ವರನಗರ ಪೊಲೀಸ್ ಠಾಣೆಗೆ ಮಾಡಿ ಉಪಮೇಯರ್ ವೋಹನ್ ರಾಜ್ ಹಾಜರಾಗಿದ್ದಾರೆ.

ಇನ್ನು ದರ್ಶನ್ ಹಾಗೂ ಮೋಹನ್ ಅವರಿಗೆ 2019 ರಿಂದ ಸ್ನೇಹವಿತ್ತು ಎಂದು ಹೇಳಲಾಗಿದೆ. ಕಳೆದ ಲೋಕಸಭೆ ಎಲೆಕ್ಷನ್ ವೇಳೆ ಮೋಹನ್ ರಾಜ್ ಅವರು ದರ್ಶನ್ ಜೊತೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಮೋಹನ್ ರಾಜ್ ಹಾಗೂ ದರ್ಶನ್ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಚುನಾವಣೆ ಪ್ರಚಾರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅಲ್ಲದೇ ತಮ್ಮ ತಮ್ಮ ವಾರ್ಡ್​ನ ಹಲವು ಕಾರ್ಯಕ್ರಮಗಳಿಗೂ ದರ್ಶನ್​ರನ್ನು ಅತಿಥಿಯಾಗಿ ಆಹ್ವಾನಿಸುತ್ತಿದ್ದರು ದರ್ಶನ್ ಭಾಗಿಯಾಗಿದ್ದರು. ಫೆಬ್ರವರಿ 20ರಂದು ತಮ್ಮ ವಾರ್ಡ್ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರ ಬಗ್ಗೆ ಹಾಡಿ ಹೊಗಳಿದ್ದರು ಎಂದು ಹೇಳಲಾಗುತ್ತಿದೆ.

ಪೊಲೀಸ್ ಕಮೀಷನರ್ ಬಿ ದಯಾನಂದ ಅವರಿಗೆ ಪತ್ರ ಬರೆದ ವಿಜಯಲಕ್ಷ್ಮೀ ದರ್ಶನ್

ದರ್ಶನ್ ಧರ್ಮಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರು ಪೊಲೀಸ್ ಕಮೀಷನರ್ ಬಿ ದಯಾನಂದ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಅದರ ಸಾರಾಂಶ  ಈ ರೀತಿಯಿದೆ.

ನಿಮ್ಮ ಇಲಾಖೆ ನನ್ನ ಪತಿ ದರ್ಶನ್ ಮತ್ತು ಕೆಲವರನ್ನು ಬಂಧಿಸಿ ಎರಡು ವಾರಗಳು ಕಳೆದಿವೆ.ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಈ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಮತ್ತು ಎ 1 ಆರೋಪಿಯಾಗಿರುವ ಶ್ರೀಮತಿ ಪವಿತ್ರ ಗೌಡ  ಬಗ್ಗೆ ದಾಖಲೆಗಳಲ್ಲಿ ಸರಿಯಾಗಿ ಮಾಹಿತಿ ದಾಖಲಿಸುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಅವರು ನನ್ನ ಪತಿ ಶ್ರೀ ದರ್ಶನ್ ಶ್ರೀನಿವಾಸ್ ಅವರ ಸ್ನೇಹಿತೆ ಅನ್ನೋದು ನಿಜ. ಆದರೆ ಅವರು ದರ್ಶನ್ ಪತ್ನಿಯಲ್ಲ ಎಂಬುವುದನ್ನು ನೀವು ದಯವಿಟ್ಟು ಗಮನಿಸಿ. ನಾನು ಕಾನೂನುಬದ್ಧವಾಗಿ ವಿವಾಹವಾದ ಏಕೈಕ ಪತ್ನಿ. 19.05.2003 ರಂದು ಧರ್ಮಸ್ಥಳದಲ್ಲಿ ನಮ್ಮ ವಿವಾಹವು ನೆರವೇರಿತು.

ನೀವು, ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುವಾಗ ಆರಂಭದಲ್ಲಿ ತಾವು ತಪ್ಪಾಗಿ ಪವಿತ್ರಗೌಡ ಅವರನ್ನು ದರ್ಶನ್ ಪತ್ನಿ ಎಂದು ಸಂಬೋಧಿಸಿದ್ದೀರಿ. ಆ ನಂತರ ಗೃಹ ಸಚಿವರು ಸೇರಿದಂತೆ ರಾಷ್ಟ್ರೀಯ ಮಾಧ್ಯಮಗಳು ಸಹ ದರ್ಶನ್ ಶ್ರೀನಿವಾಸ್ ಹಾಗೂ ಅವರ ಪತ್ನಿಯ ಬಂಧನ ಎಂದು ಸುದ್ದಿ ಪ್ರಸಾರ ಮಾಡಲು ಆರಂಭಿಸಿದವು.

ನಾನು ಅವರ ಏಕೈಕ ಕಾನೂನುಬದ್ಧವಾಗಿ ವಿವಾಹವಾದ ಪತ್ನಿ ಮತ್ತು ನಮ್ಮ ಮಗ ವಿನೀಶ್ ದರ್ಶನ್. ದಾಖಲೆಗಳಲ್ಲಿ ತಪ್ಪಾಗಿ ನಮೂದಿಸೋದರಿಂದ ನನಗೆ ಹಾಗೂ ನನ್ನ ಮಗನಿಗೆ ಭವಿಷ್ಯದಲ್ಲಿ ಯಾವುದೇ ತೊಂದರೆ ಅಥವಾ ಗೊಂದಲ ಆಗಬಾರದು.

ಶ್ರೀಮತಿ ಪವಿತ್ರಾ ಅವರು ಶ್ರೀ ಸಂಜಯ್ ಸಿಂಗ್ ಅವರನ್ನು ವಿವಾಹವಾಗಿದ್ದರು ಮತ್ತು ಅವರಿಗೆ ಮಗಳಿದ್ದಾಳೆ. ಈ ಕುರಿತಾಗಿ ಪೊಲೀಸ್ ಫೈಲ್‌ಗಳಲ್ಲಿ ಎಲ್ಲಾ ದಾಖಲೆಗಳು ಹಾಗೂ ಮಾಹಿತಿಗಳನ್ನು ಸರಿಯಾಗಿ ಹೊಂದಿಸಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ವಿಜಯಲಕ್ಷ್ಮೀ ಬರೆದಿದ್ದಾರೆ.

ಆ ಮೂಲಕ ಪವಿತ್ರ ಗೌಡ ದರ್ಶನ್ ಅವರ ಪತ್ನಿ ಅನ್ನೋದನ್ನು ಬಹಳ ಸ್ಪಷ್ಟವಾಗಿ ವಿಜಯಲಕ್ಷ್ಮೀ ದರ್ಶನ್ ಅಲ್ಲಗಳೆದಿದ್ದಾರೆ. ಅಲ್ಲದೇ ಹರಿದಾಡುತ್ತಿದ್ದ ಹಲವು ಸುಳ್ಳು ಗಾಸಿಪ್ ಗಳಿಗೆ ಬ್ರೇಕ್ ಹಾಕಿದ್ದಾರೆ. ಪರೋಕ್ಷವಾಗಿ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.