ಮನೆ ಪ್ರಸ್ತುತ ವಿದ್ಯಮಾನ ಕೇರಳ ರಾಜ್ಯದ ವಿಧಾನಸಭೆ ಚುನಾವಣೆ ಹಿನ್ನೆಲೆ; ಬೆಂಗಳೂರಿನಲ್ಲಿರುವ ಕೇರಳ ಮತದಾರರ ಸೆಳೆಯಲು ಬಿಜೆಪಿ ಕಸರತ್ತು

ಕೇರಳ ರಾಜ್ಯದ ವಿಧಾನಸಭೆ ಚುನಾವಣೆ ಹಿನ್ನೆಲೆ; ಬೆಂಗಳೂರಿನಲ್ಲಿರುವ ಕೇರಳ ಮತದಾರರ ಸೆಳೆಯಲು ಬಿಜೆಪಿ ಕಸರತ್ತು

0

ಬೆಂಗಳೂರು: ಕೇರಳ ರಾಜ್ಯದ ವಿಧಾನಸಭೆ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿರುವ ಕೇರಳ ಮತದಾರರನ್ನು ಸೆಳೆಯಲು ಬಿಜೆಪಿ ಕಸರತ್ತು ನಡೆಸುತ್ತಿದೆ.

ಈ ಹಿನ್ನೆಲೆ ಕೇರಳ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಶೋಭಾ ಕರಂದ್ಲಾಜೆ ರಾಜ್ಯದಲ್ಲಿರುವ ಕೇರಳ ಮತದಾರರ ಜೊತೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದರು. ಈ ವೇಳೆ ಕೇರಳ ಬಿಜೆಪಿ ಅಭ್ಯರ್ಥಿಗಳ ಪರ ಮತ ಹಾಕುವಂತೆ ಮನವಿ ಮಾಡಿದ್ರು.

ಕೇರಳ‌ ಮತದಾರರ ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೇರಳದ ಉಳಿವಿಗಾಗಿ ಈ ಚುನಾವಣೆ ನಡೀತಿದೆ. ಇಷ್ಟು ವರ್ಷ ಎಲ್‌ಡಿಎಫ್, ಯುಡಿಎಫ್ ಆಡಳಿತಗಳಿಂದ ಅಭಿವೃದ್ಧಿ ಆಗಿಲ್ಲ. ಅಲ್ಲಿನ ಯುವಕರು, ಯುವತಿಯರು ಕೆಲಸಕ್ಕೆ ಬೇರೆ ರಾಜ್ಯಕ್ಕೆ ಹೋಗ್ತಾರೆ. ಕಂಪೆನಿಗಳೂ ಕೇರಳಕ್ಕೆ ಬರಲ್ಲ.ಕೇಂದ್ರದ ಅನುದಾನ ಕೇರಳದಲ್ಲಿ ಸದುಪಯೋಗ ಆಗ್ತಿಲ್ಲ. ನಾವು ಕರ್ನಾಕಟದಲ್ಲಿರುವ ಎಲ್ಲ ವಿದ್ಯಾರ್ಥಿಗಳು, ವ್ಯಾಪಾರಸ್ಥರು, ವಿವಿಧ ಸಂಘಟನೆಗಳ ಸದಸ್ಯರು ಕೇರಳಕ್ಕೆ ಹೋಗಿ ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದ್ದೇವೆ ಎಂದರು.

ದ್ವಿಭಾಷಾ ನೀತಿ, ಹಿಂದಿ ಪರೀಕ್ಷೆ ಕಡ್ಡಾಯವಲ್ಲ ಎಂಬ ಸರ್ಕಾರದ ತೀರ್ಮಾನಕ್ಕೆ ಶೋಭಾ ಕರಂದ್ಲಾಜೆ ಈ ವೇಳೆ ಖಂಡನೆ ವ್ಯಕ್ತಪಡಿಸಿದ್ದಾರೆ. ಭಾಷೆ ಕಲಿಯುವಂಥದ್ದು, ಅದು ಹೇರಿಕೆ ಅಲ್ಲ. ಮೊದಮೊದಲು ನಾವು ದೆಹಲಿಗೆ ಹೋದಾಗಲೂ ನಮ್ಮ ಭಾಷೆ ಕೇಳಿ ಅಲ್ಲಿನವ್ರು ನಕ್ಕಿದ್ರು. ಯಾವ ಭಾಷೆ ಮಾತಾಡೋದು ನೀವು ಅಂತ ನಗಾಡಿದ್ರು.

ಹಿಂದಿ ಕಲಿಯುವುದರಿಂದ ಸಮಸ್ಯೆ ಏನಾಗುತ್ತೆ?. ರಾಜ್ಯ ಸರ್ಕಾರ ಅನಾವಶ್ಯಕವಾಗಿ ತ್ರಿಭಾಷಾ ನೀತಿ ಬಗ್ಗೆ ಗೊಂದಲ ಸೃಷ್ಟಿಸ್ತಿದೆ. ನಾವೂ ತ್ರಿಭಾಷಾ ಸೂತ್ರ ಕಲಿತಿದ್ದೇವೆ, ನಮಗೇನೂ ಸಮಸ್ಯೆ ಆಗಿಲ್ಲ. ಎಲ್ಲ ಭಾಷೆಯನ್ನೂ ಎಲ್ಲರೂ ಕಲೀಬೇಕು. ರಾಜ್ಯ ಸರ್ಕಾರ ಗೊಂದಲ ಮೂಡಿಸುವ ಕೆಲಸ ಮಾಡ್ತಿದೆ. ವರ್ಷಪೂರ್ತಿ ವಿದ್ಯಾರ್ಥಿಗಳು ಹಿಂದಿ ಕಲಿತಿರ್ತಾರೆ. ಆದ್ರೆ ಬೇಜವಾಬ್ದಾರಿ ಸರ್ಕಾರ ಪರೀಕ್ಷೆ ಶರುವಾದಾಗಾ ಹಿಂದಿ ಕಡ್ಡಾಯ ಅಲ್ಲ ಅನ್ನುತ್ತೆ. ಒಂದು ವರ್ಷ ಕಲಿತ ಮೇಲೆ ಪರೀಕ್ಷೆ ಬಂದಾಗ ಪರೀಕ್ಷೆ ಬರೀಬೇಡಿ ಅಂದ್ರೆ ಹೇಗೆ?. ಮಕ್ಕಳು ನಮಗೆ ಹಿಂದಿ ಬೇಡ ಅಂದಿದ್ರಾ? ಪೋಷಕರು ಬೇಡ ಅಂದಿದ್ರಾ?.ಯಾರ ಮಾತು ಕೇಳಿ ಹಿಂದಿ ತೆಗೆದ್ರಿ?. ರಾಜ್ಯದ ಶಿಕ್ಷಣ ಸಚಿವರಿಗೆ ಶಿಕ್ಷಣವೇ ಇಲ್ಲ.

ಸಿಎಂ ಅವರಿಗೇನಾಗಿತ್ತು? ಯಾಕೆ ಇಂಥ ತೀರ್ಮಾನ?. ನಮ್ಮ ಮಕ್ಕಳು ಮಣ್ಣಿನ ಮೂರ್ತಿ ಥರ, ಈ ವಯಸ್ಸಲ್ಲಿ ಯಾವ ಭಾಷೆ ಕಲಿಸಿದರೂ ಕಲೀತಾರೆ. ಈ ರಾಜ್ಯ ಸರ್ಕಾರ ಬೇಜವಾಬ್ದಾರಿಯುಳ್ಳ ಸರ್ಕಾರ, ಗೊಂದಲ ಮೂಡಿಸಿದೆ ಎಂದು ತಿಳಿಸಿದರು.