ಮನೆ Latest News ಡಿಸಿಎಂ ಡಿಕೆಶಿ ಹಾಗೂ ಶಾಸಕ ಮುನಿರತ್ನ ನಡುವೆ ಜಟಾಪಟಿ; ನೀನೊಬ್ಬ ರೇಪಿಸ್ಟ್ ಎಂದ ಡಿಕೆಶಿ

ಡಿಸಿಎಂ ಡಿಕೆಶಿ ಹಾಗೂ ಶಾಸಕ ಮುನಿರತ್ನ ನಡುವೆ ಜಟಾಪಟಿ; ನೀನೊಬ್ಬ ರೇಪಿಸ್ಟ್ ಎಂದ ಡಿಕೆಶಿ

0

ಬೆಂಗಳೂರು: ವಿಧಾನಸಭೆಯಲ್ಲಿ ಡಿಸಿಎಂ ಡಿಕೆಶಿ ಹಾಗೂ ಶಾಸಕ ಮುನಿರತ್ನ ನಡುವೆ ಮಾತಿನ ಜಟಾಪಟಿ ನಡೆದಿದ್ದು ಈ ವೇಳೆ ಮುನಿರತ್ನ ಅವರನ್ನು ನೀನೊಬ್ಬ ರೇಪಿಸ್ಟ್ ಎಂದಿದ್ದಾರೆ ಡಿಸಿಎಂ ಡಿ ಕೆ ಶಿವಕುಮಾರ್.

ಮುನಿರತ್ನ ಕೇಸ್ ಗಳ ಬಗ್ಗೆ ಮಾತಾಡೋದು ಬೇಕಾದಷ್ಟಿದೆ .ಅದರ ಬಗ್ಗೆ ಚರ್ಚೆ ಮಾಡಬೇಕು ಅಂದರೆ ಮಾಡ್ತೀನಿ ಎಂದಿದ್ದಾರೆ ಡಿಕೆಶಿ. ಈ ವೇಳೆ ಎಲ್ಲವನ್ನೂ ಹೇಳಿ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ. ಆಯ್ತಣ್ಣ ಮುನಿರತ್ನ ಕೂತ್ಕೊಳಣ್ಣ ಎಂದು ಡಿಸಿಎಂ ಡಿಕೆಶಿ ಸಿಟ್ಟಾಗಿದ್ದಾರೆ. ಅಶೋಕ್ ಗೆ ಹೇಗೆ ಏಡ್ಸ್ ಇಂಜೆಕ್ಷನ್ ಚುಚ್ಚಿದ್ರು ಎಂದು ಎಫ್ಐಆರ್ ಇದೆ ಎಂದು ಡಿಕೆಶಿ ಹೇಳ್ತಿದ್ದಂತೆ  ಡಿಕೆಶಿ ಮಾತಿಗೆ ಅಶೋಕ್, ಅಶ್ವಥ್ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆಗ ಶಾಸಕ ಮುನಿರತ್ನ ಚರ್ಚೆಗೆ ಪಟ್ಟು ಹಿಡಿದಿದ್ದಾರೆ. ಈ ವೇಳೆ ಸದನದಲ್ಲಿ ಭಾರಿ ಗದ್ದಲ ಉಂಟಾಗಿದೆ. ಡಿಕೆಶಿ ಪಾಪ ಮಾಡಿದ್ದಾರೆ. ನನ್ನ ಮೇಲೆ ಎಫ್ ಐ ಆರ್ ಹಾಕಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸಿದ್ದು ಇವರೇ. ಇವರಿಗೆ ಮೂರು ಜನ ಮಕ್ಕಳಿದ್ದಾರೆ. ಒಂದೋ ಎರಡೋ ಪಾಪದ ಕೆಲಸ ಮಾಡಿ ಬಂದಿಲ್ಲ ಇವ್ರು. ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು  ಡಿಕೆಶಿ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.

ಆಗ ಡಿಕೆಶಿ ಮಾಡಬಾರದು ಮಾಡಿ ಬಂದಿದ್ದಿಯಾ. ನಿನ್ನಂತ ಪುಡಿ ರೌಡಿ ಗಳಿ ಹೆದರಲ್ಲ. ನೀನೊಬ್ಬ ರೇಪಿಸ್ಟ್ ಎಂದಿದ್ದಾರೆ.ಡಿಕೆಶಿ ಮಾತಿಗೆ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು ಇಲ್ಲಿಯವರೆಗೆ ಒಳ್ಳೆಯ ಚರ್ಚೆ ಆಗಿದೆ.

ಅವರ ಮಾತುಗಳು ಇಲ್ಲಿ ಸರಿಯಲ್ಲ ಎಂದ ಅಸಮಾಧಾನ ಹೊರ ಹಾಕಿದ್ದಾರೆ. ಆಗ ಡಿಕೆಶಿ  ನಾನು ಇಲ್ಲದೆ ಹೋದಾಗ ಏನೇನೂ ನಡೆದಿದೆ ಗೊತ್ತು ಎಂದಿದ್ದಾರೆ. ಆಗ ಸ್ಪೀಕರ್ ಕೊನೆಗೆ ಬೆಂಗಳೂರು ಬಿಟ್ಟು ಬೇರೆ ಮಾತುಗಳನ್ನು ಕಡತದಿಂದ ತೆಗೆಯುವಂತೆ ಸೂಚಿಸಿದ್ದಾರೆ.