ಬೆಂಗಳೂರು: ಧಾನಸೌಧಕ್ಕೆ ಇಂಡಿ ಕ್ಷೇತ್ರದ ವ್ಯಕ್ತಿ 6 ಲಕ್ಷ ಹಣ ತಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ನಾನು ಸದನದಲ್ಲಿ ಕುಳಿತಿದ್ದೆ , ಈ ತರ ಆಗಿದೆ ಅಂತ ನನ್ನ ಪಿಎ ಚೀಟಿ ಕೊಟ್ಟು ಕಳಿಸಿದ್ರು. ನಾನು ಇದ್ರ ಬಗ್ಗೆ ತಿಳಿದುಕೊಳ್ಳಲು ಡಿಸಿಪಿ ಚೇಂಬರ್ ಗೆ ಬಂದಿದ್ದೆ. ಒಬ್ಬ ವ್ಯಕ್ತಿ ಬಂದಿದ್ದ ಅಂತ ಅಧಿಕಾರಿಗಳು ಹೇಳಿದ್ರು.
ನಿಮಗೆ ಗೊತ್ತಿರುವ ರೀತಿಯಲ್ಲೇ MLA ಗಳನ್ನ ನೋಡಲು ನೂರಾರು ಜನ ಬರ್ತಾ ಇರ್ತಾರೆ. ನಾನು ಇರೋ ಕಡೆ ಬರ್ತಾ ಇರ್ತಾರೆ. ಅಧಿಕಾರಿಗಳಿಗೆ ತನಿಖೆ ಮಾಡಿ ಅಂತ ಹೇಳಿದ್ದೇನೆ. ಏನೋ ಆಸ್ಪತ್ರೆ ವಿಚಾರಕ್ಕೆ ಬಂದಿದ್ದ ಅಂತ ಹೇಳಿದ್ರು. ಸಾರ್ವಜನಿಕ ಬದುಕಲ್ಲಿ ನಾನು ಹೇಗೆ ಇದ್ದೇನೆ ಅಂತ ಇಲ್ಲಿ ಇರುವವರು ನೋಡಿದ್ದಾರೆ. ಜೊತೆಗೆ ಕ್ಷೇತ್ರದ ಜನರಿಗೂ ನಾನು ಏನು ಅಂತ ಗೊತ್ತಿದೆ. ಹಣ ತೆಗೆದುಕೊಂಡು ಬಂದಿದ್ದ ಹುಡುಗ ನನಗೆ ಗೊತ್ತಿಲ್ಲ. ಆದ್ರೆ ನಮ್ಮ ಕ್ಷೇತ್ರದ ಹುಡುಗನೇ ಅವನು. ಅದಕ್ಕೆ ಸ್ಪೆಷಲ್ ತನಿಖೆ ಮಾಡಲು ಹೇಳಿದ್ದೇನೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಗಡೆ ಬರಲಿ. ಎಂದಿದ್ದಾರೆ.
ನಿಮ್ಮ ಕಾರಿನಲ್ಲೇ ಬಂದಿದ್ರು ಅನ್ನೊ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ನನ್ನ ಜೊತೆಗೆ ಬಸವರಾಜ್ ಕುಮ್ಸಿಗೆ ಅಂತ ನಮ್ಮ ಕ್ಷೇತ್ರವರು ಇರ್ತಾರೆ. ಅವರ ಜೊತೆ ಬಂದಿದ್ದ ಅನ್ನೋ ಮಾಹಿತಿ ಬಂತು. ನಾನು ಬಸವರಾಜ್ ಜೊತೆಯಲ್ಲೂ ಮಾತನಾಡಿದೆ, ಯಾರು ಬಂದಿದ್ರು ಅಂತ . ಆಸ್ಪತ್ರೆಯಲ್ಲಿ ಅವರ ಭಾವ ಇದ್ದಾರೆ ಅವರ ಚಿಕಿತ್ಸೆಗೆ ಬಂದಿದ್ದಾನೆ ಅಂದ್ರು. ಬಹಳ ಅಮಾಯಕ ಹುಡುಗ ಇದ್ದಾನೆ ಅಂತ ಹೇಳಿದ್ರು. ಆದ್ರು ಅಧಿಕಾರಿಗಳಿಗೆ ತನಿಖೆ ಮಾಡಿ ಅಂತ ಹೇಳಿದ್ದೇನೆ. ನನ್ನ ಬಳಿ ಅವರು ಯಾವುದೇ ಸಹಾಯ ಪಡೆಯಲು ಬಂದಿಲ್ಲ. ನನ್ನ ಬಳಿ ಪತ್ರವನ್ನು ಕೇಳಿಲ್ಲ.ವಿಧಾನಸೌಧ ಇದು , ಶಕ್ತಿ ಕೇಂದ್ರ ಇಲ್ಲಿಗೆ ಯಾರಾದ್ರೂ ಬರಬೇಕು ಅಂದ್ರೆ ಕರೆಕ್ಟ್ ಆಗಿ ಇರಬೇಕು ಎಂದು ತಿಳಿಸಿದ್ದಾರೆ.
ಇತ್ತೀಚಿನ ಇವು ಪೊಲಿಟಿಕಲ್ Motivated ಇದಾವೆ. ಅದಕ್ಕೆ ಸ್ಪೆಷಲ್ ತನಿಖೆ ಮಾಡುವಂತೆ ಮನವಿ ಮಾಡಿದ್ದೇನೆ.ಆದ್ರಲ್ಲೂ ಈ ವಿಚಾರವಾಗಿ ಯಾರು motivate ಮಾಡಿದ್ದಾರೆ ಅನ್ನೋದು ಬೇಕು. ರಾಜಕಾರಣದಲ್ಲಿ ಇದೆಲ್ಲ ನಡಿತಾ ಇರುತ್ತೆ. ಈಗಿನ ವಾತಾವರಣ ಹಾಗೆ ಇದೆ. ನಾನು 40 ವರ್ಷ ರಾಜಕಾರಣ ಮಾಡಿದ್ದೇನೆ. ಈ ರೀತಿಯ ವಿಚಾರಗಳಿಗೆ ಅವಕಾಶ ಕೊಡಬಾರದು ಅನ್ನೋದು ನನ್ನ ಅಭಿಪ್ರಾಯ ಎಂದಿದ್ದಾರೆ.











