ಬೆಂಗಳೂರು: ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಿದರು.
ಈ ವೇಳೆ ಮಾತನಾಡಿದ ಅವರು ಬೆಳಗಾವಿ ಯಲ್ಲಿ ಅಧಿವೇಶನ ನಡೀತಿದೆ. ಆದ್ರೆ ಕಳೆದ ಬುಧವಾರ ಗಂಭೀರ ವಿಚಾರ ಕಲಾಪದಲ್ಲಿ ಚರ್ಚೆ ಆಯ್ತು. ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಗಳಿಗೆ ಮಸೂದೆ ಮಂಡನೆಯಾಯ್ತು. ಇದರ ಬಗ್ಗೆ ಮಾತಾಡೋಕೆ ಬಂದಿದ್ದೇನೆ. ಇದನ್ನ ಜಾರಿಗೊಳಿಸಬೇಕು ಎಂದು ನಿರ್ಣಯ ಮಾಡಿದೆ, ಒಂದು ಹೆಜ್ಜೆ ಇಟ್ಟಿದ್ದಾರೆ.ದ್ವೇಷ ಭಾಷಣ ಬಿಲ್ ನಲ್ಲಿರೋದು ಓದಿದ್ದೇನೆ, ಮಾಹಿತಿ ಕಲೆ ಹಾಕಿದ್ದೇನೆ ಎಂದಿದ್ದಾರೆ.
ಇದರಲ್ಲಿ ಕೆಲ ಅಂಶಗಳನ್ನು ನೋಡಿದ್ರೆ ನೇರವಾಗಿಯೇ ಪ್ರತಿಪಕ್ಷ ಗಳಿಗೆ, ಮಾಧ್ಯಮ ದವರಿಗೆ, ಜಾಲತಾಣ ಸೇರಿ ಎಲ್ಲದರ ಮೇಲೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ತುಂಬಾ ಡೀಪಾಗಿ ಹೋಗಿದ್ದಾರೆ. ನಮಗೆ ಫ್ರೀಡಂ ಆಫ್ ಸ್ಪೀಚ್ ಅಂತ ಇದೆ. ಫಂಡಾಮೆಂಟ್ ರೈಟ್ಸ್ ಕೂಡ ಇದೆ. ಆದ್ರೆ ಸರ್ಕಾರವೇ ಜಡ್ಜ್ ಮೆಂಟ್ ಮಾಡುವ ರೀತಿ ಮಾಡಿದ್ದಾರೆ.ನಾನ್ ಬೇಲೇಬಲ್ ಅಂತ ವಾರೆಂಟ್ ಇಶ್ಯೂ ಮಾಡ್ತಾರೆ. ಇದೇ ಸರ್ಕಾರದಲ್ಲಿ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದರು. ಮಾಧ್ಯಮದವರು ಈ ಸುದ್ದಿ ಕೊಟ್ಟಿದ್ದರು. ಹಾಗಾದ್ರೆ ಇದು ಕೂಡ ತಪ್ಪಾ?ವರದಿ ಮಾಡೋದು ತಪ್ಪಾ? .ಈ ವಿಚಾರವನ್ನ ದ್ವೇಷ ಭಾಷಣ ಮಸೂದೆ ಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.
ಈ ಎಲ್ಲಾ ಅಂಶಗಳನ್ನು ನೋಡುತ್ತಿದ್ರೆ, ೭೫ ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ನೆನಪಿಗೆ ಬರ್ತಿದೆ. ಅಧಿಕಾರಕ್ಕಾಗಿ ಎಮರ್ಜೆನ್ಸಿ ಘೋಷಣೆ ಮಾಡಿದೆ. ಪ್ರತಿಪಕ್ಷ ದವರನ್ನೂ ಕಟ್ಟಿಹಾಕೋ ಕೆಲಸ ಮಾಡಿದರು. ಎಮರ್ಜೆನ್ಸಿ ಕಾಲದಲ್ಲಿ ಜೆಪಿ ಸೇರಿ ಹಲವರನ್ನ ಬಂಧಿಸುತ್ತಾರೆ. ಇದನ್ನೆಲ್ಲಾ ನೋಡಿದಾಗ ಎಮರ್ಜೆನ್ಸಿ ರೀತಿಯಲ್ಲೇ ನಡೀತಿದ್ಯಾ?. ಇದೊಂದು ಹೊಸ ರೀತಿ ಅಧ್ಯಾಯ ಬಂದಿದೆ, ಎಮರ್ಜೆನ್ಸಿ ೨.೦ ಜಾರಿಯಾಗಿದೆ. ಮಾಧ್ಯಮ ಕೂಡ ಒಂದು ಅಂಗ, ಸರ್ಕಾರ ಎಡವಿರುವಾಗ ಅದನ್ನ ತಿದ್ದುವ ಶಕ್ತಿ ಮಾಧ್ಯಮಕ್ಕಿದೆ. ಮಾಧ್ಯಮ ವನ್ನೂ ಕಟ್ಟಿಹಾಕೋ ಕೆಲಸ ಇದು. ಈ ಬಿಲ್ ಜಾರಿಯಾದ್ರೆ ಸುದ್ದಿಗೋಷ್ಟಿ ಮಾಡೋದು ತಪ್ಪು, ನೀವು ಪ್ರಶ್ನೆ ಕೇಳೋದು ಕೂ ಭಯ ಆಗುತ್ತದೆ. ನಾವು ಮಾತಾಡಿದ್ರೂ ನಾಲ್ಕು ದಿನ ನಮ್ಮ ನ್ನೂ ಒಳಗೆ ಕಳಿಸ್ತಾರೆ ಏನೋ. ಇದು ಪ್ರಜಾಪ್ರಭುತ್ವ ದ ಕೊಲೆ ಮಾಡೋದಕ್ಕೆ ಹೋಗ್ತಿದೆ ರಾಜ್ಯ ಸರ್ಕಾರ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಬಿಲ್ ಜಾರಿ ಮಾಡೋದಕ್ಕೆ ಹೊರಟಿದ್ದಕ್ಕೆ ನಾವು ವಿರೋಧಿಸುತ್ತೇವೆ. ಸದನದೊಳಗೆ ಜೆಡಿಎಸ್ ಬಿಜೆಪಿ ವಿರೋಧಿಸುತ್ತೇವೆ. ಕಾನೂನಾತ್ಮಕ ವಾಗಿ ಹೋರಾಟ ಮಾಡುತ್ತೇವೆ, ಹೆಜ್ಜೆ ಇಡುತ್ತೇವೆ. ನಮ್ಮನ್ನ ಕಟ್ಟಿಹಾಕೋಕೆ ಹೊರಟಿದ್ದಾರೆ. ಬಿಲ್ ನ ಡ್ರಾಫ್ಟ್ ನೋಡಿದ್ರೆ ಹೊರಗಿನವರಿಗೆ ಕೊಟ್ಟು ಮಾಡಿಸಿದ್ದಾರೆ ಅನ್ಸುತ್ತೆ. ಇದೆಲ್ಲಾ ಗೃಹ ಸಚಿವರಿಗೆ ಗೊತ್ತಿಲ್ಲ ಅನ್ಸುತ್ತೆ. ಅವರಿಗೆ ಸಾಕಷ್ಟು ವಿಷ್ಯ ಗೊತ್ತಿಲ್ಲ. ಮಿನಿಸ್ಟರ್ ಆಫ್ ಕ್ಯಾಬಿನೆಟ್ ಅಂತ ಇದ್ದಾರೆ.. ಇದೆಲ್ಲಾ ಅವರೇ ಮಾಡಿಸಿದ್ದಾರೆ. ದೇಶದಲ್ಲಿ ದೊಡ್ಡ ಯಾತ್ರೆ ಮಾಡಿದ್ದ ವ್ಯಕ್ತಿಗೆ ಇದೆ ಬಗ್ಗೆ ಮಾಹಿತಿ ಇಲ್ವಾ?. ಈ ಬಿಲ್ ಬಗ್ಗೆ ಅವರಿಗೆ ಜ್ಞಾನ ಇಲ್ವಾ?. ಇದು ಪಾಲಿಟಿಕಲ್ ಪಾರ್ಟಿ ಜೊತೆ ಮಿಡಿಯಾ ಗಳನ್ನು ಟಾರ್ಗೆಟ್ ಮಾಡಿದ್ದಾರೆ ಎಂದಿದ್ದಾರೆ.
ರಾಜ್ಯ ಸರ್ಕಾರ ದ ಪತನದ ದಿನಗಳು ಹತ್ತಿರವಾಗ್ತಿದೆ. ಎಲ್ಲವನ್ನೂ ತಿಳಿಸಿ ಹೇಳೋದಕ್ಕೆ ಆಗಲ್ಲ. ನನಗೆ ಬಂದ ಮಾಹಿತಿ ನಾನು ಹೇಳಿದ್ದೀನಿ. ಉತ್ತರ ಕರ್ನಾಟಕ ಭಾಗದ ರೈತರ ನೋವಿಗೆ ಸ್ಪಂದಿಸಬೇಕು. ಮೆಕ್ಕೆಜೋಳ, ಕಬ್ಬು ಸಮಸ್ಯೆ ಇದೆ. ಅತಿವೃಷ್ಟಿ ಆಗಿದೆ, ಮಳೆಯಾಗಿ ಬೆಳೆ ಹಾನಿಯಾಗಿದೆ. ಇದನ್ನ ಯಾವ ರೀತಿ ಸರ್ಕಾರ ಸರಿಪಡಿಸಬೇಕು. ಆದ್ರೆ ಕಾಟಾಚಾರಕ್ಕೆ ಅಧಿವೇಶನ ನಡೀತಿದೆ. ಇದು ಆರೋಗ್ಯ ಕರ ಬೆಳವಣಿಗೆ ಅಲ್ಲ. ಕಾಂಗ್ರೆಸ್ ನಲ್ಲಿ ಬ್ರೇಕ್ ಪಾಸ್ಟ್ ಆಗಿದೆ, ಲಂಚ್ ಮೀಟಿಂಗ್ ಆಗಿದೆ. ಈಗ ಡಿನ್ನರ್ ಮೀಟಿಂಗ್ ಆಗ್ತಿದೆ. ಜನರ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ.ಯಾರು ಸಿಎಂ ಕುರ್ಚಿಯಲ್ಲಿ ಕೂರಬೇಕು ಎಂದು ಚರ್ಚೆ ನಡೀತಿದೆ. ಮ್ಯೂಸಿಕಲ್ ಚೇರ್ ರೀತಿ ನಡೀತಿದೆ. ಯಾರು ಸಹಿ ಹಾಕೋಕೆ ಹೇಳಿದ್ದಾರೆ ಗೊತ್ತಿಲ್ಲ. ಎರಡೂವರೆ ವರ್ಷ ಕಾಲ ಹರಣ ಮಾಡಿದ್ದಾರೆ.ಕೊಟ್ಟ ಭರವಸೆ ಎಷ್ಟು ಈಡೇರಿಸಿದ್ದಾರೆ ಎಂದಿದ್ದಾರೆ.
ಸಿಎಂ ಕುರ್ಚಿ ಚರ್ಚೆ ನಡೀತಿದೆ ಅಷ್ಟೇ. ೪೭ ಕೋಟಿ ಹೆಲಿಕಾಪ್ಟರ್ ಬಿಲ್ ಆಗಿದೆ. ರಸ್ತೆಯಲ್ಲಿ ಓಡಾಡ್ರೆ ಗುಂಡಿ ಎಷ್ಟು ಇದ್ದಾವೆ ಅನ್ನೋದು ಗೊತ್ತಾಗುತ್ತಿತ್ತು. ಯತೀಂದ್ರ ಹೇಳಿಕೆ ಬಗ್ಗೆ ಇನ್ವಾಲ್ಮೆಂಟ್ ಬಗ್ಗೆ ಮಾತಾಡಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಅಸಹಾಯಕತೆ ನೋಡೋಕೆ ಆಗ್ತಿಲ್ಲ. ಅವರೇ ಹೈಕಮಾಂಡ್ ಜೊತೆ ಮಾತಾಡುತ್ತೇವೆ ಅಂತಾರೆ, ಅವರು ಏನು?. ಯತೀಂದ್ರ ಯಾಕೆ ಆ ರೀತಿ ಹೇಳ್ತಿದ್ದಾರೆ ಅನ್ನೋದು ಗೊತ್ತಿಲ್ಲ. ಅರ್ಥಿಕ ಪರಿಸ್ಥಿತಿ ಏನಾಗಿದೆ ಕರ್ನಾಟಕದ್ದು. ಜನರ ಬಗ್ಗೆ ಕಾಳಜಿ ಇಲ್ಲ, ಕುರ್ಚಿ ಕಮಟ್ಮೆಂಟ್ ಅಷ್ಟೇ. ಮಾತು ಎತ್ತಿದ್ರೆ ಕೇಂದ್ರದತ್ತ ಬೊಟ್ಟು ಮಾಡ್ತಾರೆ .ಸುಮ್ನೆ ಕೇಂದ್ರದ ಕಡೆ ಬೊಟ್ಟು ತೋರಿಸೋದು ಬೇಡ. ಕುಮಾರಸ್ವಾಮಿ ಅವರು ಕೆಲಸ ಮಾಡ್ತಿದ್ದಾರೆ.ಗುಂಡಿ ಮುಚ್ಚೋದಕ್ಕೆ ಆಯ್ತಾ?. ಗುಂಡಿ ಮುಚ್ಚುವುದಕ್ಕೂ ಹಣ ಕೇಳೋಕೆ ಹೋಗೋಣ.ಕರ್ತವ್ಯ ತೋಪದ ಬಗ್ಗೆ ಮಾತಾಡಿ ಎಂದಿದ್ದಾರೆ.
ಜೆಡಿಎಸ್ ಬಿಜೆಪಿ ಗೊಂದಲ ವಿಚಾರದ ಬಗ್ಗೆ ಮಾತನಾಡಿ ಯಾವ ಗೊಂದಲ ಏನೂ ಇಲ್ಲ.ಕುಮಾರಸ್ವಾಮಿ ಅವರು, ಅಶೋಕ್ ನೇತೃತ್ವದಲ್ಲಿ ಸಭೆ ಆಯ್ತು. ನಾವೂ ಕೂಡ ರಾಯಚೂರಲ್ಲಿ ಹೋರಾಟ ಮಾಡಿದ್ದೇನೆ. ಎನ್ ಡಿಎ ಮೈತ್ರಿ ಅಷ್ಟೇ, ಆದ್ರೆ ಪ್ರತಿಯೊಂದು ಹೋರಾಟದಲ್ಲಿ ಭಾಗಿಯಾಗುತ್ತೇವೆ ಎಂದು ಅಗ್ರಿಮೆಂಟ್ ಹಾಕಿಲ್ಲ ಎಂದು ತಿಳಿಸಿದ್ದಾರೆ.










