ಮನೆ Latest News ಹೈಕಮಾಂಡ್ ಹೇಳಿದಾಗ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೆ; ಡಿಸಿಎಂ ಮನೆಯಲ್ಲಿ ಬ್ರೇಕ್ ಫಾಸ್ಟ್ ಬಳಿಕ ಸಿಎಂ...

ಹೈಕಮಾಂಡ್ ಹೇಳಿದಾಗ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೆ; ಡಿಸಿಎಂ ಮನೆಯಲ್ಲಿ ಬ್ರೇಕ್ ಫಾಸ್ಟ್ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿಕೆ

0

ಬೆಂಗಳೂರು: ಹೈಕಮಾಂಡ್ ಯಾವಾಗ ತೀರ್ಮಾನ ಮಾಡುತ್ತದೋ ಆಗ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಮೊನ್ನೆಯೇ ನಮ್ಮ ಮನೆಗೆ ಬನ್ನಿ ಎಂದರು. ಡಿ ಕೆ ಶಿವಕುಮಾರ್ ಅವರು ನಮ್ಮ ಮನೆಗೆ ಬಂದಿದ್ದರು.ಆಗಲೇ ಅವರು ನಮ್ಮ ಮನೆಗೆ ಬನ್ನಿ ಅಂದರು. ಸೋ ನಾನು ಬರುತ್ತೇನೆ ಎಂದಿದ್ದೆ. ಡಿ ಕೆ ಅವರು ಹೇಳಿದ್ದಕ್ಕೆ ಬಂದೆ. ಹಾಗಾಗಿ ಇವತ್ತು ಡಿಕೆ ಶಿವಕುಮಾರ್ ಅವರ ಮನೆಗೆ ಬಂದು ಉಪಹಾರ ಮಾಡಿದ್ದೇವೆ. ಪಾರ್ಟಿ ವಿಚಾರಗಳನ್ನ ಚರ್ಚೆ ಮಾಡಿದ್ದೇವೆ. ಬಹಳ ಮುಖ್ಯವಾಗಿ ಅಧಿವೇಶನ ಶುರುವಾಗುತ್ತದೆ. ಎರಡು ವಾರ ಅಧಿವೇಶನ ನಡೀತದೆ. ರಣನೀತಿ ಏನು ಇರಬೇಕು ಅನ್ನೋದರ ಬಗ್ಗೆ ಚರ್ಚೆ ಮಾಡಿದ್ದೇವೆ. ನೋ ಕಾನ್ಫಿಡೆನ್ಸ್ ‌ಮೋಷನ್ ಮೂವ್ ಮಾಡುತ್ತೇವೆ ಎಂದಿದ್ದಾರೆ. ಅದೆಲ್ಲವನ್ನೂ ಸರ್ಕಾರ ಎದುರಿಸುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ತೀರ್ಮಾನದ ಮೇಲೆ‌ ನಿರ್ಣಯ ಆಗಲಿದ್ದು, ಇಲ್ಲಿಯವರೆಗೂ ಏನೂ ಮಾತುಕತೆ ಆಗಿಲ್ಲ ಮತ್ತು ಇನ್ನೂ ನಮಗೆ ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ, ನಾಳೆ ಮಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ನಾನು ಮತ್ತು ಕೆ.ಸಿ. ವೇಣುಗೋಪಾಲ್ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದೇವೆ ಎಂದೂ ಸಿಎಂ ಹೇಳಿದ್ದಾರೆ.ಇನ್ನು ಬ್ರೇಕ್ ಫಾಸ್ಟ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಇಬ್ಬರೂ ಒಂದೇ ಬ್ರ್ಯಾಂಡ್ ನ ವಾಚ್ ಧರಿಸಿದ್ದು ಗಮನ ಸೆಳೆದಿದ್ದು, ಸಿದ್ದರಾಮಯ್ಯ ಅವರಿಗೆ ಡಿ.ಕೆ. ಶಿವಕುಮಾರ್ ತಮ್ಮ ಮನೆಯನ್ನು ಪೂರ್ತಿ  ತೋರಿಸಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ ಪಕ್ಷದ , ಸರ್ಕಾರದ ವಿಚಾರ , ಅಸೆಂಬ್ಲಿ ವಿಚಾರ ಮಾತಾಡಿದ್ದೇವೆ. ಶಾಸಕರಿಗೆ ಸಂದೇಶ ನೀಡಿದ್ದೇವೆ, ಯಾವ ರೀತಿ ಹೋರಾಟ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ನಮ್ಮದು ಒಂದೇ ಧ್ವನಿ ಇದೆ. ಸರ್ವ ಪಕ್ಷ ಸಭೆ ಮಾಡಬೇಕು ಎಂದಿದ್ದೇವೆ. ಯಾರು ಬೇರೆ ಏನೂ ಇರಲಿಲ್ಲ. ಎಲ್ಲ ಶಾಸಕರು ಎಲ್ಲರು ಒಗ್ಗಟ್ಟಾಗಿದ್ದೇವೆ. ವಿರೋಧ ಪಕ್ಷ ದವರು ಖಾಲಿ ಡಬ್ಬಾ. 8 ರಂದೇ ದೆಹಲಿಗೆ ಹೋಗಬೇಕು ಅಂತ ಚಿಂತೆ ಇದೆ. ವಿರೋಧ ಪಕ್ಷ ದವನ್ನೂ ಕರೆದುಕೊಂಡು ಹೋಗಬೇಕು.ಯಾವ ಮನಸ್ತಾಪ ಇಲ್ಲ. ನಾವು ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.