ಮನೆ Latest News ರಿಯಲ್ ಆಗಿ ಜೈಲು ಸೇರಿದ ರೀಲ್ ಸ್ಟಾರ್ , ಶೋಕಿವಾಲಾ ಅರುಣ್ ಕಟಾರೆ

ರಿಯಲ್ ಆಗಿ ಜೈಲು ಸೇರಿದ ರೀಲ್ ಸ್ಟಾರ್ , ಶೋಕಿವಾಲಾ ಅರುಣ್ ಕಟಾರೆ

0

ಬೆಂಗಳೂರು : ಸುಮ್ನೆ ಇರಲಾರದವನು ಇರುವೆ ಬಿಟ್ಕೊಂಡ ಅನ್ನೋ ಮಾತು ಅಕ್ಷರಶಃ ಈತನಿಗೇ ಹೇಳಿದಂತಿದೆ. ಸುಮ್ನೆ ಯಾವುದೋ ಉಪಯೋಗಕ್ಕೆ ಬರೋ ರೀಲ್ಸ್ ಮಾಡ್ಕೊಂಡು ಸಮಾಜಕ್ಕೆ ಒಂದ್ ನಾಲ್ಕು ಒಳ್ಳೆ ಮೆಸೇಜ್ ಕೊಡ್ತಿದ್ರೆ ಆತ ನಿಜಕ್ಕೂ ರಿಯಲ್ ಹೀರೋ ಆಗ್ತಿದ್ದ. ಆದರೆ ಅದು ಬಿಟ್ಟು ನಕಲಿ ಚಿನ್ನ ಹಾಕ್ಕೊಂಡು, ಬಾಡಿಗೆ ಕಾರುಗಳಲ್ಲಿ ಸುತ್ತ್ಕೊಂಡು, ಅಕ್ಕ ಅಕ್ಕ ಹುಡ್ಗೀರನ ಇಟ್ಕೊಂಡು ನಾನೇ ಜಗತ್ತಿನ ಅತ್ಯಂತ ಶ್ರೀಮಂತ ಅನ್ನೋ ರೇಂಜಿಗೆ ಪೋಸ್ ಕೊಡ್ತಿದ್ದ ಆ ಶೋಕಿವಾಲಾ ಇದೀಗ ಅರೆಸ್ಟ್ ಆಗಿದ್ದಾನೆ.

ಯೆಸ್… ನಿಮ್ಗೆ ಈಗಾಗಲೇ ನಾನು ಯಾರ ಬಗ್ಗೆ ಹೇಳ್ತಿದ್ದೀನಿ ಅನ್ನೋದು ಗೊತ್ತಾಗಿರುತ್ತೆ. ನಾನು ಹೇಳ್ತಿರೋದು ಇನ್ಸ್ಟಾಗ್ರಾಂ ನಲ್ಲಿ ತನ್ನ ಶೋಕಿ ರೀಲ್ಸ್ ಮೂಲಕವೇ ಮಿಲಿಯನ್ ಗಟ್ಟಲೇ ವ್ಯೂವ್ಸ್ ಗಿಟ್ಟಿಸಿಕೊಂಡು ಬಿಲ್ಡ್ಪ್ ಕೊಡುತ್ತಿದ್ದ ಅರುಣ್ ಕಟಾರೆ ಬಗ್ಗೆ. ಇದೇ ಅರುಣ್ ಕಟಾರೆ ಇದೀಗ ಶೋಕಿ ಮಾಡಲು ಹೋಗಿ ಅರೆಸ್ಟ್ ಆಗಿದ್ದಾನೆ.

ತನ್ನ ಹಿಂದೆ ಮುಂದೆ ಎಕೆ 47  ಹಿಡಿದುಕೊಂಡಿರುವ ಗನ್ ಮ್ಯಾನ್ ಗಳು. ಐಷಾರಾಮಿ ಕಾರುಗಳು, ಸುತ್ತಮುತ್ತ ಹುಡುಗಿಯರು, ಕೆ ಜಿ ಗಟ್ಟಲೇ ನಕಲಿ ಚಿನ್ನ ಹಾಕ್ಕೊಂಡು ಹವಾ ಎಬ್ಬಿಸಲು ಹೋದ ಅರುಣ್ ನನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಜೂನ್‌ 28ರಂದು  ಈ ಅರುಣ್ ಕಟಾರೆ ತಾನೊಬ್ಬ ಡಾನ್ ಅನ್ನೋ ರೀತಿ ಚೊಕ್ಕನಹಳ್ಳಿ ಸಮೀಪದ ರಸ್ತೆಯಲ್ಲಿ ಐಷಾರಾಮಿ ಕಾರಿನಿಂದ ಗನ್ ಮ್ಯಾನ್ ಗಳ ಸಮೇತ ಕೆಳಗೆ ಇಳಿದಿದ್ದ. ಕಾರಿನಿಂದ ಇಳಿಯುತ್ತಿದ್ದಂತೆ ಆತನ ಜೊತೆಗಿದ್ದ ಬಾಡಿ ಗಾರ್ಡ್ಸ್ ಎಕೆ-47 ಗನ್‌ಗಳನ್ನು ಹಿಡ್ಕೊಂಡು ಫಾಲೋ ಮಾಡುವ ವೀಡಿಯೋವನ್ನು ಸೆರೆ ಹಿಡಿಸಿ ಅರುಣ್  ರೆ ತನ್ನ ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್‌ನಲ್ಲಿ ರೀಲ್ಸ್‌ ಅಪ್‌ಲೋಡ್‌ ಮಾಡಿ ಜಗತ್ತನ್ನೇ ಗೆದ್ದಂತೆ ಬೀಗಿದ್ದ.

ಇದೇ ದಿನ ಪಿಎಸ್‌ಐ ಡಿಕೆ ಮಂಜುನಾಥ್‌ ಠಾಣಾ ವ್ಯಾಪ್ತಿಯ ಗಸ್ತು ಕರ್ತವ್ಯದ ಪ್ರಯುಕ್ತ ಚೊಕ್ಕನಹಳ್ಳಿಗೆ ತೆರಳಿದ್ದರು.ಆಗ ಸಾರ್ವಜನಿಕರು ಅರುಣ್ ಕಟಾರೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆತನ ಅವತಾರದ ಬಗ್ಗೆ ಹೇಳಿದ್ದರು.ಅದರಂತೆ  ಸ್ವಯಂಪ್ರೇರಿತ ಕೇಸ್‌ ದಾಖಲಿಸಿಕೊಂಡ ಪಿಎಸ್‌ಐ ಮಂಜುನಾಥ್‌ ಮತ್ತು ತಂಡ ಜೆಪಿ ನಗರದಲ್ಲಿ ನೆಲೆಸಿದ್ದ ಆರೋಪಿ ಅರುಣ್‌ನನ್ನು ಬಂಧಿಸಿದೆ. ಅಲ್ಲದೇ ವಿಚಾರಣೆ ವೇಳೆ ಆತನ ಬಳಿ ಇದ್ದ ಎಲ್ಲಾ ವಸ್ತುಗಳು ನಕಲಿ ಅನ್ನೋದನ್ನು ಬಾಯ್ಬಿಟ್ಟಿದ್ದಾನೆ. ಅಲ್ಲದೇ ಕಾರುಗಳನ್ನು ಬಾಡಿಗೆ ಪಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿದ್ದ ಸ್ವಲ್ಪ ಆದಾಯದಿಂದ ಈ ರೀತಿ ಶೋಕಿ ಮಾಡುತ್ತಿದ್ದೆ ಅನ್ನೋದನ್ನು ಅರುಣ್ ಒಪ್ಪಿಕೊಂಡಿದ್ದಾನೆ. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.