ಮನೆ Latest News ಸಿಎಂ – ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಅಲ್ಲ, ಅದು ಬ್ರೇಕ್ ಮೀಟಿಂಗ್ : ವಿಪಕ್ಷ...

ಸಿಎಂ – ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಅಲ್ಲ, ಅದು ಬ್ರೇಕ್ ಮೀಟಿಂಗ್ : ವಿಪಕ್ಷ ನಾಯಕ ಆರ್ ಅಶೋಕ್ ಲೇವಡಿ

0

ಬೆಂಗಳೂರು; ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರದ್ದು ಬ್ರೇಕ್ ಫಾಸ್ಟ್ ಮೀಟಿಂಗ್ ಅಲ್ಲ, ಅದು ಬ್ರೇಕ್ ಮೀಟಿಂಗ್ ಎಂದು: ವಿಪಕ್ಷ ನಾಯಕ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಸಿಎಂ – ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಅಲ್ಲ. ಇಡ್ಲಿ ದೋಸೆ ಉಪ್ಪಿಟ್ಟು ಏನಿಲ್ಲ. ಬರಿ ಜಗಳ ಬಿಟ್ರೆ ಏನು ಅಗಲ್ಲ. ಸಿಎಂ ಪದವಿ ಬಿಡಲು ಸಿದ್ದರಾಮಯ್ಯ ರೆಡಿ ಇಲ್ಲ. ಎರಡೂವರೆ ವರ್ಷ ನನಗೆ ಎಂದು ಡಿಸಿಎಂ ಹೇಳ್ತಿದಾರೆ. ಕಾಂಗ್ರೆಸ್ ಹೈಕಮಾಂಡ್ ಗೆ ಧಮ್ ಇದ್ರೆ ಅನೌನ್ಸ್ ಮಾಡಲಿ. ಎರಡೂವರೆ ವರ್ಷ ಅಧಿಕಾರ ಹಂಚಿಕೆ ಮಾತುಕತೆ ಆಗಿದೆ ಎಂದು ಹೇಳಲಿ. ವೀಕ್ ಹೈಕಮಾಂಡ್ ಅದು. ಕಳೆದ ನವೆಂಬರ್ ಇಂದ ಇದೇ ಡ್ರಾಮಾ ಎಂದಿದ್ದಾರೆ.

ರಾಹುಲ್ ಗಾಂಧಿ ಸೋನಿಯಾಗಾಂಧಿ ಫಾರಿನ್ ಗೆ ಹೋದ್ರು. ಜವಾಬ್ದಾರಿ ಇಲ್ಲದ ವೀಕ್ ಹೈಕಮಾಂಡ್ . ಸರ್ಕಾರ ಬಂದಾಗಿಂದ ಯಾವುದೇ ಡೆವಲಪ್ಮೆಂಟ್ ಇಲ್ಲ.ರಸ್ತೆ ಹಳ್ಳ ಬಿದ್ದಿದೆ, ಜೈಲು ವೈನ್ ಫ್ಯಾಕ್ಟರಿ ಆಗಿದೆ. ಹೈಕಮಾಂಡ್ ವೀಕ್ ಆಗಿರುವ ಕಾರಣ ಇವರು ಸವಾರಿ ಮಾಡ್ತಿದಾರೆ .ಬ್ರೇಕ್ ಆಗೋ ಮೀಟಿಂಗ್ ಮಾಡ್ತಿದಾರೆ ಈಗ . ಜೆಡಿಎಸ್ – ಬಿಜೆಪಿ ಸಮನ್ವಯ ಸಮಿತಿ ಮಾಡ್ತಿದ್ದೇವೆ .ಅಧಿವೇಶನದಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ. ಅನುದಾನದ ಕೊರತೆ ಇದೆ. ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡ್ತಿದ್ದೇವೆ .ಅಧಿವೇಶನದಲ್ಲಿ ಹೋರಾಟ ಮಾಡೋಕೆ ಸಿದ್ದತೆ ಮಾಡ್ತಿದ್ದೇವೆ . ವಿಜಯೇಂದ್ರ ಕುಟುಂಬದಲ್ಲಿ ಕಾರ್ಯಕ್ರಮ ಇರುವ ಕಾರಣ ಬರ್ತಿಲ್ಲ. ಫೋನ್ ನಲ್ಲಿ ಸಭೆಯಲ್ಲಿ ಪಾಲ್ಗೊಳ್ತಾರೆ. ಡಿಕೆಶಿ ಅವರಿಗೆ ಒದ್ದು ಕಿತ್ತುಕೊಳ್ಳುವ ಶಕ್ತಿ ಇದ್ದಂತೆ ಕಾಣ್ತಿಲ್ಲ. ದೇವರ ಮೊರೆ ಹೋಗ್ತಿದಾರೆ. ಶಾಸಕರು ಗ್ರೂಪ್ ಆಗಿ ರೆಸಾರ್ಟ್ ಗೆ ಹೋಗ್ತಿದಾರೆ ಎಂದು ಹೇಳಿದ್ದಾರೆ.

ಡಿಕೆಶಿ ಸಿಎಂ ಮಾಡೋ ಗ್ರೂಪ್, ಸಿದ್ದರಾಮಯ್ಯ ರನ್ನ ಇಳಿಸೋ ಗ್ರೂಪ್. ಸಿದ್ದರಾಮಯ್ಯ ಎಲ್ಲ ಪಾರ್ಟಿ ನೋಡಿರೋರು.ಸಿಎಂ ಕುರ್ಚಿ ಬಿಟ್ಟು ಕೊಡೋದು ಕಷ್ಟ.ಮಾತು ತಪ್ಪಿದವರು ಅಂತ ಸಿಎಂ- ಡಿಸಿಎಂ ನಡುವೆ ಟ್ವಿಟ್ ವಾರ್ ನಡಿತಾ ಇದೆ. ಡೆಲ್ಲಿಗೆ ಈ ಮೀಟಿಂಗ್ ಶಿಫ್ಟ್ ಆಗಲಿದೆ. ಇವರು ತೊಲಗಲಿ ಎಂದು ಜನರೇ ಹೇಳ್ತಿದಾರೆ ಎಂದಿದ್ದಾರೆ.