ಬೆಂಗಳೂರು; ದೆಹಲಿ ಬಾಂಬ್ ಸ್ಫೋಟ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಿಯಾಂಕ ಖರ್ಗೆ ಹೇಳಿಕೆಗೆ ವಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಮೋದಿ ಅವರು ಸಭೆ ಮಾಡಿದ್ದಾರೆ. ಯಾರೇ ಉಗ್ರರು ಇದ್ದರು ಹೆಡೆಮುರಿ ಕಟ್ಟೋಕೆ ಸೂಚನೆ ನೀಡಿದ್ದಾರೆ. ಈಗಾಗಲೇ ಯಾರು ಇದ್ದಾರೆ ಅವರ ಮೇಲೆ ಈಗಾಗಲೇ ಕ್ರಮ ತೆಗೆದುಕೊಳ್ತಿದ್ದಾರೆ. ಪರಪ್ಪನ ಅಗ್ರಹಾರದ ಮೊಬೈಲ್, ಇಂಟರ್ ನೆಟ್ ಫೋನ್ ಎಲ್ಲವೂ ಸಿಕ್ಕಿದೆ.
ಗೃಹ ಸಚಿವರು ಈ ವಿಡಿಯೋ ಲೀಕ್ ಮಾಡಿದವರು ಯಾರು ಅಂತ ಕಂಡು ಹಿಡಿಯೋಕೆ ಸ್ಪೆಷಲ್ ತನಿಖೆ ಮಾಡಿದ್ತಾ ಇದ್ದಾರೆ.ಕೇಂದ್ರ ಸರ್ಕಾರ ದೇಶ ವಿರೋಧ ಪೋಸ್ಟರ್ ಅಂಟಿಸಿದ ಕಾರಣದಿಂದ ಸ್ಪೋಟದ ವಸ್ತು ಸೀಜ್ ಮಾಡಿದೆ. ರಾಜ್ಯ ಸರ್ಕಾರ ಕೇಂದ್ರದ ರೀತಿ ಕಠಿಣ ಕ್ರಮ ತೆಗೆದುಕೊಳ್ಳಬೇಕು.ಪಾಕಿಸ್ತಾನ ಜಿಂದಾಬಾದ್ ಕೂಗೋರು, ಕುಕ್ಕರ್ ಬ್ಲ್ಯಾಸ್ಟ್ ಮಾಡಿರೋರು ಬಗ್ಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಡಿಜೆ-ಕೆಜೆ ಹಳ್ಳಿ ಕೇಸ್ ವಾಸಪ್ ತೆಗೆದರು. ಇನ್ನು ಮುಂದೆ ನೋಡಿಕೊಂಡು ಕೇಸ್ ತೆಗೆಯಲಿ.ಈ ಸರ್ಕಾರ ಎರಡು ವರ್ಷ ಇರುತ್ತದೆ. ಅಮೇಲೆ ಬೇರೆ ಸರಕಾರ ಬರುತ್ತದೆ. ಇವೆಲ್ಲ ಶಾಶ್ವತ ಅಲ್ಲ. ಪ್ರಿಯಾಂಕ್ ಖರ್ಗೆ ಕೇಂದ್ರ ಹೋಂ ಮಿನಿಸ್ಟರ್ ಅವರನ್ನ ದುರ್ಬಲ ಅಂತಾರೆ. ಮರಿ ಖರ್ಗೆ ಅವರೇ ಮಲ್ಲಿಕಾರ್ಜುನ ಖರ್ಗೆ ಅವರು ಗೃಹ ಸಚಿವರು ಆಗಿದ್ದಾಗ ಕಂಬಾಲ ಪಲ್ಲಿಯಲ್ಲಿ ದಲಿತರನ್ನ ಸಜೀವ ದಹನ ಮಾಡಿದ್ರು. ಅ ಕೇಸ್ ಏನಾಯ್ತು. ಅಪರಾಧ ಮಾಡಿದ ಎಲ್ಲರೂ ನಿರಪರಾಧಿ ಅಂತ ಆಯ್ತು. ಅಂದು ಗೃಹ ಸಚಿವರಾಗಿದ್ದು ನಿಮ್ಮ ತಂದೆ. ಅವತ್ತು ಹೋಂ ಮಿನಿಸ್ಟರ್ ಆಗಿ ಫೇಲ್ ಆದ್ರು.ನೀವು ಅಮಿತ್ ಶಾ ಬಗ್ಗೆ ಮಾತಾಡೋದಾ? .ಅಮಿತ್ ಶಾ ಉಗ್ರರಿಗೆ ಗುಂಡು ಹೊಡೆಯೋ ಕೆಲಸ ಮಾಡ್ತಿದ್ದಾರೆ.ನೀವು ಏನು ಮಾಡಿದ್ರಿ? ಅವರ ಪತ ಮಾತಾಡೋ ಕೆಲಸ ಮಾಡಿದ್ರಿ. ಅಮಿತ್ ಶಾ ಅವರ ಬಗ್ಗೆ ಮಾತಾಡೋ ಬಗ್ಗೆ ಎಚ್ಚರವಾಗಿ ಪ್ರಿಯಾಂಕ್ ಖರ್ಗೆ ಮಾತಾಡಲಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ದ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬಿಹಾರ ಚುನಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ದೇಶದ ಪ್ರತಿಷ್ಠಿತ ಚುನಾವಣೆ ಬಿಹಾರ ಚುನಾವಣೆ.ಮತದಾರರ ಆಶಯ ಮತ ಪೆಟ್ಟಿಗೆಯಲ್ಲಿ ಸೀಲ್ ಆಗಿದೆ. ಮೊದಲ ಬಾರಿಗೆ ನಕ್ಸಲ್ ಇರೋ ಕ್ಷೇತ್ರದಲ್ಲೂ ಶಾಂತಿಯುತ ಮತದಾನ ಆಗಿದೆ. ಅಮಿತ್ ಶಾ ಗೃಹ ಮಂತ್ರಿ ಆದ ಮೇಲೆ ನಕ್ಸಲರನ್ನ ಮಟ್ಟ ಹಾಕೋ ಕೆಲಸ ಮಾಡಿದ್ದಾರೆ..ಎಕ್ಸಿಟ್ ಪೋಲ್ ನಲ್ಲಿ 12 ಕ್ಕೂ ಹೆಚ್ಚು ರಿಪೋರ್ಟ್ ನಲ್ಲಿ NDA ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಘಟ್ ಬಂಧನ್ ಒಂದರಲ್ಲೂ ಮುಂದೆ ಬಂದಿಲ್ಲ. 14ನೇ ತಾರೀಖು ರಾಹುಲ್ ಗಾಂಧಿ ಫಸ್ಟ್ ರಿಯಾಕ್ಷನ್ ಓಟ್ ಜೋರಿ ಆಗಿದೆ. ಎರಡನೇ ರಿಯಾಕ್ಷನ್ ಓಟ್ ಮಿಷನ್ ಸರಿಯಿಲ್ಲ ಅಂತ ಹೇಳ್ತಾರೆ. ರಾಹುಲ್ ಗಾಂಧಿ ನಾಯಕತ್ವ ಬಂದ ಮೇಲೆ ಸೋಲಿನ ಸೆಂಚುರಿ ಬಂದಿದೆ.
ರಾಜ್ಯಗಳ, ದೇಶದ ಚುನಾವಣೆಯಲ್ಲಿ ಐರನ್ ಲೆಗ್ ತರಹ ಸೋಲು ಕಂಡಿದ್ದಾರೆ. ರಾಹುಲ್ ಕಾಲು ಇಟ್ಟ ಕಡೆ ಸೋಲು. ಈಗ ವಿದೇಶ ಪ್ರವಾಸಕ್ಕೆ ಹೋಗ್ತಾರಂತೆ. ಜವಾಬ್ದಾರಿ ಇರೋ ವಿಪಕ್ಷ ನಾಯಕ ಅಲ್ಲ. ರಾಹುಲ್ ಗಾಂಧಿ.ಸಂಸತ್ ನಲ್ಲಿ ಅವರ ಹಾವ-ಭಾವ, ಪಾಕಿಸ್ತಾನದ ಬಗ್ಗೆ ಸಾಫ್ಟ್ ಆಗಿರೋದು ನೋಡಿದ್ದೇವೆ. ರಿಯಲ್ ಪೋಲ್ ನಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಬರಲಿದೆ. ಎಕ್ಸಿಟ್ ಪೋಲ್ ಟ್ರೈಲರ್ ಇದ್ದ ಹಾಗೆ.14 ರಂದು NDA ಗೆಲ್ಲುತ್ತೆ. ಕಾಂಗ್ರೆಸ್ ದೇಶದಲ್ಲಿ ಕಾಣೆ ಆಗೋ ಪಾರ್ಟಿ ಆಗುತ್ತದೆ ಎಂದಿದ್ದಾರೆ.










