ಬೆಂಗಳೂರು; ಕಾರಾಗೃಹನ ಅಧಿಕಾರಿಗಳ ಕೈಗೆ ಕೊಟ್ಟ ಮೇಲೆ ಅದನ್ನು ಸರಿಯಾಗಿ ನಿಭಾಯಿಸುವುದು ಅವರ ಜವಾಬ್ದಾರಿ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಕಾರಾಗೃಹದಲ್ಲಿ ಅನೇಕ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ವರದಿ ಆಗಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಮುಂದೆ ಹೇಳಿದ್ದೇವೆ. ಸರ್ಕಾರ ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಯಾರ್ಯಾರು ಸಂಬಂಧಪಟ್ಟ ಅಧಿಕಾರಿಗಳಿದ್ದಾರೆ. ಯಾವ ಯಾವ ಕಾರಾಗೃಹದಲ್ಲಿ ಕಾರ್ಗ್ರೋದ ಮುಖ್ಯಸ್ಥರಿದ್ದಾರೆ ಎಂದಿದ್ದಾರೆ.
ಫೋನ್, ಗಾಂಜಾ, ಲಿಕ್ಕರ್ ಒಳಗಡೆ ಹೋಗುತ್ತದೆ. ಒಳಗಡೆ ಬೇರೆ ಬೇರೆ ಚಟುವಟಿಕೆ ಆಗುತ್ತದೆ ಅಂದರೆ ಅದಕ್ಕೆ ಹೊಣೆ ಯಾರು ಕಾರಗೃಹ ಮುಖ್ಯಸ್ಥರೇ ಆಗಬೇಕು. ಇವತ್ತು ಅದಕ್ಕೆ ನಾನು ಸಭೆ ಕರೆದಿದ್ದೇನೆ. ಅಧಿಕಾರಿಗಳು ಏನು ಮಾಹಿತಿ ಕೊಡುತ್ತಾರೆ ಮತ್ತು ನಮಗೂ ಬಂದಿರುವ ಮಾಹಿತಿಯನ್ನು ಪರಿಶೀಲನೆ ಮಾಡುತ್ತೇವೆ. ಮುಂದೆ ಇದಕ್ಕೆ ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ . ಮುಖ್ಯಮಂತ್ರಿಗಳು ಹೇಳಿದ್ದಾರೆ ಇದನ್ನ ಗಂಭೀರವಾಗಿ ಪರಿಗಣಿಸಬೇಕು.ಸಂಬಂಧ ಪಟ್ಟ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಸಭೆಯ ನಂತರ ಇದರ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಅವರಿಗೆ ಏನಾದರೂ ಒಂದು ಸುದ್ದಿ ಸಿಗಬೇಕು. ಬಿಜೆಪಿ ಅವರಿಗೆ ಅವಕಾಶ ಸಿಗಬೇಕು ಅಷ್ಟೇ. ಆದ್ರೆ ಆಡಳಿತದಲ್ಲಿ ನಾವು ಏನು ಮಾಡಬೇಕು ಅದನ್ನ ಮಾಡ್ತೇವೆ ಎಂದಿದ್ದಾರೆ.ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ನಮಾಜ್ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಅವರು ಅದರ ಬಗ್ಗೆ ನಂಗೆ ಮಾಹಿತಿ ಇಲ್ಲ. ವಿಚಾರಿಸುತ್ತೇನೆ ಎಂದಿದ್ದಾರೆ.
ಬಾಗಲಕೋಟೆಯಲ್ಲಿ ಮುಂದುವರೆದ ರೈತರ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಒಂದು ವರ್ಗ 3500 ಕೊಡಲೇಬೇಕು ಅಂತಿದ್ದಾರೆ. ಇಡೀ ರೈತ ಸಮುದಾಯ ಕೂಡ ಒಪಿದ್ದಾರೆ. ಕೆಲವರು ಮಾತ್ರ ಒಪ್ಪುತ್ತಿಲ್ಲ. ಎಲ್ಲರೂ ಒಪ್ಪಿಕೊಂಡಾಗ ಅವರು ಒಪ್ಪಬೇಕಲ್ವ?. ಅವರು ಒಪ್ಪಿಕೊಂಡರೆ ಒಳ್ಳೆದು ಆಗುತ್ತೆ ಎಂದ ಅವರು ಎನ್ ಐ ಎ ಕಾರಗೃಹ ಇಲಾಖೆಗೆ ಪತ್ರ ಬರೆದಿರೋ ವಿಚಾರದ ಬಗ್ಗೆ ಮಾತನಾಡಿದ ಅವರು ಅದನ್ನ ಕೂಡ ಚರ್ಚೆ ಮಾಡ್ತೇನೆ. ಯಾಕೆಂದ್ರೆ ಅವರು ಒಬ್ಸರ್ವೇಷನ್ ಮಾಡಿ ಎವಿಡೆನ್ಸ್ ಇಟ್ಟುಕೊಂಡು ಮಾಡಿರುತ್ತಾರೆ. ಅದರ ಬಗ್ಗೆಯೂ ಇವತ್ತು ಚರ್ಚೆ ಮಾಡ್ತೇನೆ ಎಂದು ತಿಳಿಸಿದ್ದಾರೆ.









