ಮನೆ Latest News ಧಮ್ಕಿ ಹಾಕೋದು ಡಿ ಕೆ ಶಿವಕುಮಾರ್ ಗೆ ರಕ್ತಗತವಾಗಿ ಬಂದಿದೆ; ವಿಪಕ್ಷ ನಾಯಕ ಆರ್...

ಧಮ್ಕಿ ಹಾಕೋದು ಡಿ ಕೆ ಶಿವಕುಮಾರ್ ಗೆ ರಕ್ತಗತವಾಗಿ ಬಂದಿದೆ; ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

0

ಬೆಂಗಳೂರು: ಧಮ್ಕಿ ಹಾಕೋದು ಡಿ ಕೆ ಶಿವಕುಮಾರ್ ಗೆ ರಕ್ತಗತವಾಗಿ ಬಂದಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಡಿ ಕೆ ಶಿವಕುಮಾರ್ ಅವರಿದೆ ತಿರುಗೇಟು ಕೊಟ್ಟಿದ್ದಾರೆ.

ರಾಮಮೂರ್ತಿ ಆಯ್ತು, ತೇಜಸ್ವಿ ಸೂರ್ಯ, ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಗೆ  ಧಮ್ಕಿ ಹಾಕಿದ್ದಾರೆ ಎಂದ ಅವರು ಕೊರೆಯೋಕೆ ಅದು ಕನಕಪುರ ಬಂಡೆ ಅಲ್ಲ ಬೆಂಗಳೂರಿನ ಬಂಡೆ ಅಂತ ನಾವು ಹೇಳ್ತಿದ್ದೇವೆ ಎಂದು ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರು ಪರಿಸರ ಪ್ರೇಮಿಗಳ ಮಾರ್ನಿಮೆಂಟ್. ಸಸ್ಯಕಾಶಿಗೆ ರಾಜ್ಯ ಸರ್ಕಾರ ಗುಂಡಿ ತೋಡೋ ಕೆಲಸ ಮಾಡ್ತಾ ಇದೆ. ಇದಕ್ಕೆ ವಿರೋಧವಾಗಿ ಬಿಜೆಪಿಯವರು‌ ಸೇರಿದ್ದೇವೆ. ಸಾಕಷ್ಟು ಜನ ವಾಕರ್ಸ್ ಬಂದಿದ್ದಾರೆ. ಸೈಲೆಂಟ್ ಆಗಿ ಪ್ರತಿಭಟನೆ ಮಾಡ್ತಾ ಇದ್ದೇವೆ. ಸುರಂಗ ಯೋಜನೆಯಿಂದ ಬೆಂಗಳೂರಿನ‌ ಪರಿಸರ ಹಾಳಾಗುತ್ತೆ. ಬೆಂಗಳೂರಿನ ಜನರು ನಿದ್ದೆಗೆಡುವ ಆಗಿದೆ. ಇದು ಟ್ವಿನ್ ಟನಲ್ ರಸ್ತೆ ಅಲ್ಲ ಇದು.. ವಿಐಪಿ ಕಾರಿಡಾರ್ ಆಗುತ್ತೆ . 90% ಜನ ಮಧ್ಯಮ ವರ್ಗದವರು ಹಾಗೂ ಬಡವರು.  ಬೈಕ್, ಸೈಕಲ್ ‌ಗೆ ಎಂಟ್ರಿ ಇಲ್ಲ . ಕೇವಲ ಕಾರಿಗೆ ಮಾತ್ರ ಎಂಟ್ರಿ ಅದಿಕ್ಜೆ ಇದು ವಿಐಪಿ ರೋಡ್. 8 ಸಾವಿರ ಕೋಟಿಗೆ ಟೆಂಟರ್ ಕರೆದಿದ್ದಾರೆ. 4 ಸಾವಿರ ಕೋಟಿ ಪೇಮೆಂಟ್ ಕೊಡಬೇಕು. ಈಗ ಸಾಲ ಮಾಡಲು ಹೊರಟಿದ್ದಾರೆ. ಅದಕ್ಕೆ ಬಡ್ಡಿ ಎಲ್ಲಿಂದ ಕೊಡ್ತೀರಾ ಎಂದು ಪ್ರಶ್ನಿಸಿದ್ದಾರೆ.

ಆರ್ಥಿಕ ಪರಿಸ್ಥಿತಿಯನ್ನ ಪಾತಾಳಕ್ಕೆ ತಳ್ಳುವ ಯೋಜನೆ. ಭೂಮಿಯ ಆಳದಲ್ಲಿ ಮಾಡಲು ಹೊರಟ್ಟಿದ್ದಾರೆ. 3000 ದಶಲಕ್ಷ ವರ್ಷದ ಶಿಲೆಗಳಿವೆ. ಕೆಂಪೇಗೌಡರು ಬೆಂಗಳೂರಿಗೆ ಕೊಟ್ಟ ಕೊಡುಗೆ ಇದು. ಶಿಲೆ ಮೇಲೆ ಬೆಂಗಳೂರು ಕಟ್ಟಿದ್ದಾರೆ.. ಭೂಕಂಪ ಆಗಲ್ಲ ಇಲ್ಲಿ. ಸೌಖ್ಯವಾಗಿ ಇರಲಿ ಅಂತ ಕಟ್ಟಿದ ಬೆಂಗಳೂರಲ್ಲಿ ಸುರಂಗ ತೆಗೆಯೋಕೆ ಹೋಗಿದ್ದಾರೆ. ಪರ್ಮಿಷನ್ ತೆಗೆದುಕೊಂಡಿಲ್ಲ. ಲಾಲ್‌ಬಾಗ್‌ನಲ್ಲಿ ಕಾನೂನಿನ ಬಗ್ಗೆ ಬೋರ್ಡ್ ಇದೆ. ರಾಜ್ಯ ಸರ್ಕಾರ ನೆ ಬೋರ್ಡ್ ಹಾಕಿ ಕೊಲೆ ಮಾಡಲು ಹೊರಟಿದೆ. ನೂನಿಗೆ ಕಿಮ್ಮತ್ತಿಲ್ವಾ. 18 ಕಿ.ಮೀ ಟನಲ್ ರೋಡ್ ಮಾಟಿದ್ರೆ ಟ್ರಾಫಿಕ್ ಕಡಿಮೆ ಆಗುತ್ತೆ ಅಂದ್ರೆ ಮಾಡಿ. ನಾವು ಬೆಂಬಲ ಕೊಡ್ತೀವಿ ಎಂದಿದ್ದಾರೆ.

ಸಂಪೂರ್ಣವಾಗಿ ಆಗುತ್ತೆ ಅಂದ್ರೆ ಹೇಳಿ ನಾವು ಸಪೋರ್ಟ್ ಮಾಡ್ತೀವಿ.70% ಟೂ ವೀಲ್ಹರ್ ಇರೋದು.ಕೇವಲ 10% ಜನರಿಗೆ ಮಾಡ್ತಾ ಇದ್ದೀರಾ.  ಟನಲ್ ರೋಡ್ ಮುಂಚೆ ಇರೋ ಗುಂಡಿಗಳನ್ನ‌ ಮುಚ್ಚಿ. ಕಣ್ಣಿಗೆ ಕಾಣುವ ರಸ್ತೆ ಬಿಟ್ಟು.. ಕಾಣದ ಟನಲ್ ರೋಡ್ ಮಾಡಲು ಹೊರಟ್ಟಿದ್ದೀರಾ. ನಿನ್ನೆ ಕೇಳುದ್ರೆ ಡಿ ಕೆ ಶಿವಕುಮಾರ್ ಅವರನ್ನ ಕೇಳಿ ಅಂತ ಹೇಳ್ತಾರೆ. ಶಿಫ್ಟಿಂಗ್‌ ಆ ನಿಮ್ಮಿಬ್ಬರದು. ನವೆಂಬರ್ ಕ್ರಾಂತಿನಾ. ಸಿಎಂ ಹೇಳಿದ ಮೇಲೆ ಗುಂಡಿ ಮುಚ್ತಾರೆ ಅಂತ ಜನ ಅಂದುಕೊಂಡ್ರು. ಆದ್ರೆ ಸಿಎಂ ಮಾತಿಗೆ ಕಾರ್ಪೋರೇಷನ್ ಅವರು ಬೆಲೆ ಕೊಟ್ಟಿಲ್ಲ. 18 ತಿಂಗಳಲ್ಲಿ ಮುಗಿಸ್ತೀವಿ ಅಂತಾರೆ. ಆದ್ರೆ 4 ವರ್ಷ ಕಡಿಮೆ ಯಾವ ಪ್ರಾಜೆಕ್ಟ್ ಮುಗಿದಿಲ್ಲ. ಈಜಿಪುರ ಫ್ಲೈಓವರ್ ಇನ್ನೂ ಆಗ್ತಾ ಇದೆ. ಭೂಮಿ ಮೇಲಿರುವ ರೋಡ್‌ನೇ ಮಾಡಿಲ್ಲ.. ಭೂಮಿ‌ ಒಳಗೆ ಮಾಡಲು ಹೊರಟ್ಟಿದ್ದಾರೆ. ಟನಲ್ ರೋಡ್ ಅಲ್ಲಿ ಟ್ರಾವೆಲ್ ಮಾಡುದ್ರೆ 16-20 ಸಾವಿರ ತಿಂಗಳಿಗೆ ಖರ್ಚು ಮಾಡ್ಬೇಕು. ಅಷ್ಟು ಖರ್ಚು ಮಾಡಿದ್ರೆ ಬೆಜ್ ಕಾರಿಗೆ ಇಎಂಐ ಕಟ್ಟಬೋದು. ಉತ್ತರದಲ್ಲಿ ಸ್ಯಾಂಕಿ, ದಕ್ಷಿಣದಲ್ಲಿ ಲಾಲ್‌ಬಾಗ್‌‌ನಲ್ಲಿ ಮಾಡ್ತಾರೆ. ಸ್ಯಾಂಕಿ ಟ್ಯಾಂಕ್ ಬಳಿ ರೋಡ್ ಮಾಡಲು ಆಗಿಲ್ಲ..ಕೋರ್ಟ್‌ನಲ್ಲಿ ಕೇಸ್ ಇದೆ .ರೋಡ್ ಮಾಡಲು ಹೋದಾಗ ಕಾಂಗ್ರೆಸ್ ಅವರೇ ಹೋರಾಟ ಮಾಡಿದ್ರು. ಈಗ ಔಟ್‌ಲೆಟ್ ಕೊಟ್ಟಿದ್ದಾರೆ ನಿಮಗೆ ಮಾನ ಮರ್ಯಾದೆ ಇದ್ಯಾ ಎಂದು ಪ್ರಶ್ನಿಸಿದ್ದಾರೆ.

ಒಂದು ಕಿ.ಮೀಗೆ 1285 ಕೋಟಿ ಖರ್ಚು. ಸ್ಯಾಟ್ ಲೈಟ್ ಗಿಂತ ಕಾಸ್ಲ್ಟಿ ಇದು. ದುಬಾರಿ ಇರುವ ಯೋಜನೆ. ಡಿ ಕೆ ಶಿವಕುಮಾರ್ ಅವರು ಸಲಹೆ ಕೊಡಿ ಅಂದಿದ್ದಾರೆ. ನಾನು ಸಲಹೆ ಕೊಡ್ತಾ ಇದ್ದೀನಿ. ಇದೇ ಹಣದಲ್ಲಿ 5 ಕಿ.ಮೀ ಉದ್ದ ಮೆಟ್ರೋ ಮಾಡ್ಬಹುದು .ಹೆಚ್ಚು ಜನರು ಹೋಗಬಹುದು. ಮೆಟ್ರೋದಲ್ಲಿ ಕಮಿಷನ್ ಸಿಗಲ್ಲ.. ಇಲ್ಲಿ ಸಿಗುತ್ತೆ ಅಷ್ಟೇ ವ್ಯತ್ಯಾಸ. ಎಲ್ಲೆಲ್ಲಿ ಮೆಟ್ರೋ ಲೈನ್ ಇದೆ.. ಅಲ್ಲಿ ಟ್ರಾಫಿಕ್ ಕಡಿಮೆ ಆಗಿದೆ. ನಾವು ಸಲಹೆ ಕೊಡ್ತಾ ಇದ್ದೇವೆ. ಕಾರ್ಪೋರೇಷನ್ ಸಾಲದಲ್ಲಿದೆ. ಎಲ್ಲಾ ಜಾಗವನ್ನ ಅಡವಿಟ್ಟು ಲೋನ್ ತೆಗೆದುಕೊಳ್ಳುತ್ತಿದ್ದಾರೆ. ಅಡ್ವರ್ಟೈಸ್‌ಮೆಂಟ್ ಅಲ್ಲೆ ಇದೆ. ಇವರು ಸಾಲ ಮಾಡಿ ಬಿಟ್ಟು ಹೋಗಿದ್ರು. ಉಡ್ಕಾ ಲೋನ್ ನಾವು ತೀರಿಸಿದ್ದೇವೆ ಎಂದ ಅವರು ಮೊದಲು ಬೆಂಗಳೂರಿನಲ್ಲಿರುವ ಗುಂಡಿ ಮುಚ್ಚಿ ನಂತರ ಚಂದ್ರಲೋಕಕ್ಕೆ ಟನಲ್ ಮಾಡಿ ಎಂದು ವ್ಯಂಗ್ಯ ಮಾಡಿದ್ದಾರೆ.