ಬೆಂಗಳೂರು; ಮಂತ್ರಿ ಮಂಡಲ ರಚನೆ, ಸಿಎಂ ಮುಂದುವರೆಯೋ ವಿಚಾರ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ.
ಮಂತ್ರಿ ಮಂಡಲ ರಚನೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನೀವು ಕೇಳುವ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ. ಮಂತ್ರಿ ಮಂಡಲ ರಚನೆ, ಸಿಎಂ ಮುಂದುವರೆಯೋ ವಿಚಾರ ಹೈ ಕಮಾಂಡ್ ಗೆ ಬಿಟ್ಟಿದ್ದು. ಸಿಎಂ ಪವರ್ ಶೇರ್ ಮಾಡ್ಕೊಳ್ತೀವಿ ಅಂದಿದ್ದಾರಾ? .ಹೈ ಕಮಾಂಡ್ ಹೇಳಿದ್ರೆ ಐದು ವರ್ಷ ನಾನೇ ಇರ್ತೀನಿ ಎಂದಿದ್ದಾರೆ ಇದರಲ್ಲಿ ತಪ್ಪೇನು. ಏನು ಆಗಬೇಕು ಆಗಬಾರದು ಅಂತ ಹೇಳೋದೆ ಹೈ ಕಮಾಂಡ್. ಉಳಿದಂತೆ ಎಲ್ಲವೂ ಅಂತೆ ಕಂತೆಗಳು ಚರ್ಚೆ ಅಷ್ಟೆ. ಅದಕ್ಕೆ ಉತ್ತರ ಇಲ್ಲವೇ ಇಲ್ಲ, ನಾನೂ ಸಮರ್ಥನೂ ಅಲ್ಲ. ಅಧಿಕಾರ ಒಪ್ಪಂದ ಆಗಿದ್ರೆ ಯಾವತ್ತೋ ಏನೊ ಆಗಿಬಿಡೋದು. ಇದಕ್ಕೆ ರೆಕ್ಕೆ ಪುಕ್ಕ ಏನೂ ಇಲ್ಲ, ಹಾಕೋಕೆ ನೋಡ್ತಾ ಇದ್ದೀರಾ ಬರ್ತಾ ಇಲ್ಲ. ಹೈ ಕಮಾಂಡ್ ಬಿಹಾರ್ ಚುನಾವಣೆ ಬ್ಯುಸಿಯಲ್ಲಿ ಇದೆ ಎಂದಿದ್ದಾರೆ.
ಸಿಎಂ ಮಾಡುವಲ್ಲಿ ದಲಿತ ಅದು ಇದು ಇಲ್ಲ. ಯಾರ್ಯಾರು ಸಮರ್ಥರು ಇದ್ದಾರೆ ಅವರು ಆಗ್ತಾರೆ. ಆಡಳಿತದ ಅನುಭವ ಇದ್ದವರಿಗೆ ಹೈ ಕಮಾಂಡ್ ತೀರ್ಮನಾ ಮಾಡುತ್ತದೆ. ಸಮದಾಯ ಸಹಜವಾಗಿ ಒತ್ತಾಯ ಮಾಡುತ್ತದೆ. ಎಲ್ಲರೂ ಆದರೂ ನಮಗೂ ಅವಕಾಶ ಸಿಗಲಿ ಅನ್ನೋದ್ರಲ್ಲಿ ತಪ್ಪಿಲ್ಲ. ಬೇರೆ ಬೇರೆ ರಾಜ್ಯದಲ್ಲಿ ದಲಿತರಿಗೆ ಕಾಂಗ್ರೆಸ್ ಪಾರ್ಟಿ ಸಿಎಂ ಮಾಡಿದೆ. ರಾಹುಲ್ ಗಾಂಧಿ ಕಮಿಟೆಡ್ ಲೀಡರ್, ಮಲ್ಲಿಕಾರ್ಜುನ ಖರ್ಗೆ ಅನುಭವಿ ರಾಜಕಾರಣಿ. ಸಂದರ್ಭ ಬಂದಾಗ ಪಾರ್ಟಿ ತೀರ್ಮಾನ ಮಾಡುತ್ತದೆ. ರಾಜಕೀಯಕ್ಕೆ ನಿವೃತ್ತಿ ಇಲ್ವಲ್ಲ. ಕೊನೆವರೆಗೂ ಜನರ ಪರವಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಕಾಂಗ್ರೆಸ್ ಗೆ ಅನಿವಾರ್ಯ ಎಂಬ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಯಾರು ಯಾರಿಗೂ ಅನಿವಾರ್ಯ ಅಲ್ಲ. ಪ್ರಜಾಪ್ರಭುತ್ವದ ಆಧಾರ ಸಂಸ್ಥೆ ನೀವು. ಎಲ್ಲರು ಸೇರಿನೇ ಸಂಸ್ಥೆ ಕಟ್ಟೋದು. ಇವರಿದ್ರೆ ಆಗುತ್ತೆ ಆಗಲ್ಲ ಅಂತ ಇರಲ್ಲ. ಇವೆಲ್ಲ ಅಂಧಾಭಿಮಾನದ ವಿಚಾರ. ನಾನು ಹೊಗಳು ಭಟ್ಟ ಆಗಲ್ಲ. ಹೊಗಳುಭಟ್ಟಂಗಿತನ ಸರ್ವಾಧಿಕಾರ ಸೃಷ್ಟಿ ಮಾಡುತ್ತದೆ ಎಂದ ಅವರು ದಲಿತ ಸಮಾವೇಶ ವಿಚಾರದ ಬಗ್ಗೆ ಮಾತನಾಡಿ ಸಮಾವೇಶಗಳು ನಡೀತಾನೇ ಇರ್ತಾವೆ. ಶಾಸ್ತ್ರ ನೋಡಿಕೊಂಡು ಮಾಡೋದಿಲ್ಲ. ಮೈಸೂರು ಬೌದ್ಧ ಸಮಾವೇಶ ಮಾಡಿದ್ವಿ. ಯಾರನ್ನಾದ್ರೂ ಕೇಳಿ ಮಾಡಿದ್ವಾ ಎಲ್ಲರೂ ಹೋಗಿದ್ದೆವು. ಅದೇ ತರ ಸಮಾವೇಶ ಮಾಡ್ತಾರೆ. ದಲಿತ ಸಮಾವೇಶ ನ್ಯಾಷನಲ್ ಸಮಾವೇಶ. ದಲಿತ ಸಮಸ್ಯೆ ನ್ಯಾಷನಲ್ ಸಮಸ್ಯೆ.ಅದನ್ನ ಸಂದೇಶ ಕೊಡಬೇಕು ಅನ್ನೋದು ಸಂಘಟನೆಗಳ ಕನಸು. ಇದು ರಾಜಕೀಯ ಪೂರಕ ಸಮಾವೇಶಗಳಲ್ಲ ಎಂದಿದ್ದಾರೆ.
ದಲಿತ ಸಂಘಟನೆಗಳಿಂದ ಸಿಎಂ ಆಗಬೇಕು ಎಂಬ ಆಗ್ರಹ ವಿಚಾರದ ಬಗ್ಗೆ ಮಾತನಾಡಿ ಇದರ ಬಗ್ಗೆ ಹೈ ಕಮಾಂಡ್ ಗಮನಿಸುತ್ತದೆ. ಸದ್ಯ ಅವರು ಬಿಹಾರ್ ಚುನಾವಣೆಯಲ್ಲಿ ಬ್ಯುಸಿ ಇದ್ದಾರೆ. ಸಮಾವೇಶ ದಲಿತರ ಮೂಲಭೂತ ಹಕ್ಕು. ಅದನ್ನ ಮೊಟಕು ಗೊಳಿಸಲು ಸಾಧ್ಯವಿಲ್ಲ. ಇದು ಫಂಡಮೆಂಟಲ್ ರೈಟ್ಸ್. ಪವರ್ ಶೇರಿಂಗ್ ನಲ್ಲಿ ದಲಿತ ನಾಯಕರ ನಿಲುವು. ನಮಗೆ ಕೊಡಿ ಅನ್ನೋತರ ಸನ್ನಿವೇಶ ಸೃಷ್ಟಿಯಾಗಿಲ್ಲ. ಆ ಸನ್ನಿವೇಶ ಬಂದಾಗ ಎಲ್ಲಿ ಏನು ಮಾತನಾಡಬೇಕೋ ಮಾತಾಡ್ತಿನಿ. ಆ ಪ್ರಸ್ತಾಪ ಬಂದಾಗ ಏನು ಹೇಳಬೇಕೋ ಹೇಳ್ತೀವಿ. ಹೈ ಕಮಾಂಡ್ ಈಗ ಗಮನ ಹರಿಸಿಲ್ಲ. ಗಮನ ಹರಿಸಿದಾಗ ಆಗ ನೋಡೋಣ. ಕ್ಯಾಬಿನೆಟ್ ವಿಚಾರ ಆಗಿರಬಹುದು ಅಥವಾ ಬೇರೆ ಆಗಿರಬಹುದು. ಎಲ್ಲಾ ವಿಚಾರದ ಉತ್ತರ ಇರೋದು ಹೈ ಕಮಾಂಡ್ ಬಳಿ ಮಾತ್ರ ಎಂದಿದ್ದಾರೆ.










