ಮನೆ Latest News ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ವಿರುದ್ಧ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಾಗ್ದಾಳಿ

ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ವಿರುದ್ಧ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಾಗ್ದಾಳಿ

0

ಬೆಂಗಳೂರು; ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ವಿರುದ್ಧ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಪ್ರತಿವರ್ಷ ಇಲ್ಲಿ ಪಟಾಕಿ ಹಂಚಿಕೆ ಮಾಡುತ್ತಿದ್ದೇವೆ. ಪ್ರತಿ ವರ್ಷ ಅಣ್ಣ ಪಟಾಕಿ ಕೊಡುತ್ತಾನೆ ಅಂತಾ ಕಾಯುತ್ತಿರುತ್ತಾರೆ. ಮೊನ್ನೆ ಜೆಪಿ ಪಾರ್ಕ್ ನಲ್ಲಿ ಡಿಸಿಎಂ ಭೇಟಿ ವೇಳೆ ಶಾಸಕನಿಗೆ ಆಹ್ವಾನ ಇಲ್ಲದೇ ಬೆಳಗ್ಗೆಯೇ ಕುಸುಮಾ ಡಿ.ಕೆ. ರವಿ ಅವರನ್ನು ಕರೆದುಕೊಂಡು ಇವರೇ ಶಾಸಕರು, ಸಮಸ್ಯೆಗಳನ್ನು ಇವರಿಗೆ ಹೇಳಿ ಎಂದು ತೊಂದರೆ ಕೊಟ್ಟರು. ಪೊಲೀಸರನ್ನು ಕೇಳಿದಾಗ ಬೆಳಗ್ಗೆಯಿಂದ ಡಿ.ಕೆ. ಸುರೇಶ್, ಕುಸುಮಾ, ಹನುಮಂತರಾಯಪ್ಪ ಅವರು ಪೋನ್ ಮಾಡಿ ಸೀಜ್ ಮಾಡಲು ಹೇಳಿದ್ದಾರೆ ಅಂತಾ ಹೇಳಿದರು. ಪೊಲೀಸರು ಬರುವವರೆಗೂ ನೀವು ಕಚೇರಿ ಒಳಗೆ ಹೋಗುವಂತಿಲ್ಲ ಎಂದು ಪೊಲೀಸರು ಹೇಳಿದರು. ಕಚೇರಿ ಪರಿಶೀಲನೆ ಮಾಡಬೇಕು ಎಂದು ಪೊಲೀಸರು ಹೇಳಿದರು. ಆ ಕುಸುಮಾನಿಗೆ ಶಾಸಕಿ ಆಗಬೇಕು ಎಂಬ ಹುಚ್ಚು ಹಿಡಿದಿದೆ. ಇತ್ತೀಚೆಗಂತೂ ನಾನು ಗೊಬ್ಬರ ಅಂತೆ, ಗೊಬ್ಬರದ ಹುಳ ಅಂತೆ ಇದನ್ನೇ ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸೌಮ್ಯರೆಡ್ಡಿ ಸೋತಿದ್ದರೂ ಒಂದು ದಿನವೂ ಹೋಗಿ ಶಾಸಕರಿಗೆ ತೊಂದರೆ ಕೊಟ್ಟಿಲ್ಲ. ತಮ್ಮ ತಂದೆಯ ಪ್ರಭಾವ ಬಳಸಿ ಸೌಮ್ಯರೆಡ್ಡಿ ಶಾಸಕರಿಗೆ ತೊಂದರೆ ಕೊಟ್ಟಿಲ್ಲ. ಸೌಮ್ಯರೆಡ್ಡಿಯನ್ನು ನೋಡಿ ಕಲಿಯಿರಿ. ಇಂದಿರಾಗಾಂಧಿ ಹೆಣ್ಣು, ನಾನು ಹೆಣ್ಣು ಅಂತೀರಿ. ನೀವು ಇಂದಿರಾ ಗಾಂಧಿ ಆಗ್ತೀರಾ  ನಾನು ನೀವು ಹೆಣ್ಣು ಅಲ್ಲ ಅಂತಾ ನಾನು ಹೇಳಿದ್ನಾ?. ಡಿ.ಕೆ. ರವಿ ಸತ್ತಾಗ ವಿಧಾನಸೌಧದಲ್ಲಿ ತಲೆ ಚಚ್ಚಿಕೊಂಡು ಅಪ್ಪ, ಮಗಳು ಗೋಳಾಡಿದರು. ನಂತರ ಕೆ.ಜೆ. ಜಾರ್ಜ್ ರಾಜೀನಾಮೆ ಕೊಡಿಸಿದರು. ಅಂದು ಸಿದ್ದರಾಮಯ್ಯನವರ ಜೊತೆಗೆ ನಾನೇ ಇದ್ದೆ . ಪೋಸ್ಟ್ ‌ಮಾರ್ಟಂ ರಿಪೋರ್ಟ್ ಬಂದ ಬಳಿಕ ರಿಪೋರ್ಟ್ ತಿರುಚಿದರು ಅಂತಾ . ನಂತರ ಕಾಂಗ್ರೆಸ್ ಪಕ್ಷದಲ್ಲಿ ಅಪ್ಪ ಚೇರ್ ಮನ್, ಮಗಳು ಈಗ ಶಾಸಕಿ ಆಗಲು ಓಡಾಡುತ್ತಿದ್ದಾರೆ. ಇಂದಿರಾಗಾಂಧಿ ಮಟ್ಟಕ್ಕೆ ಬೆಳೆಯಲು ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.