ಬೆಂಗಳೂರು: ಉಚ್ಚ ನ್ಯಾಯಾಲಯದ ಚೀಫ್ ಜಸ್ಟಿಸ್ ಮೇಲೆ ಚಪ್ಪಲಿ ಎಸೆದಿದ್ದನ್ನು ಖಂಡಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಈ ಪ್ರತಿಕ್ರಿಯಿಸಿದ ಅವರು ಕೆಲವು ಪ್ರಗತಿಪರ ವಿಚಾರಧಾರೆ ಇರುವವರು ಖಂಡನೆ ಮಾಡಿದ್ದಾರೆ.
ಸಾರ್ವಜನಿಕವಾಗಿ ಇದಕ್ಕೆ ಖಂಡನೆ ಮಾಡಬೇಕಾಗಿತ್ತು.ಆದರೆ ಖಂಡನೆ ದೊಡ್ಡ ಮಟ್ಟಕ್ಕೆ ಆಗಲಿಲ್ಲ ಎಂದಿದ್ದಾರೆ.
ತಾವೆಲ್ಲರೂ ಕೂಡ ಪತ್ರಿಕೆಯಲ್ಲಿ ಓದಿದ್ದೀರಿ ಟಿವಿಯಲ್ಲಿ ನೋಡಿದ್ದೀರಿ. ದೇಶದ ಉಚ್ಚ ನ್ಯಾಯಾಲಯ ಚೀಫ್ ಜಸ್ಟಿಸ್ ಮೇಲೆ ಒಬ್ಬ ವಕೀಲ ಎಂದು ಹೇಳಿಕೊಳ್ಳುವ ವ್ಯಕ್ತಿ, ಧರ್ಮದ ಹೆಸರಲ್ಲಿ ಅವರ ಮೇಲೆ ಚಪ್ಪಲಿ ಎಸೆದಿದ್ದಾನೆ. ಇದನ್ನು ವೈಯುಕ್ತಿಕವಾಗಿಯೂ ಖಂಡಿಸುತ್ತೇನೆ.ನನಗೆ ಆಶ್ಚರ್ಯ ಅನಿಸುವುದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ೭೮ ವರ್ಷ ಆಯ್ತು. ೭೮ ವರ್ಷದಲ್ಲಿ ಹೈಕೋರ್ಟ್ ನಲ್ಲಿ ಸುಪ್ರಿಂ ಕೋರ್ಟ್ ನಲ್ಲಿ ಸಿಜೆಐ ಗೆ ಅವಮಾನ ಮಾಡುವ ಕೆಲಸ ಮಾನಸಿಕವಾಗಿ ಧರ್ಮದ ಹೆಸರಿನ ಮೇಲೆ ಮಾಡಿದ್ದಾರೆ ಎಂದಿದ್ದಾರೆ.
ಧರ್ಮದ ಹೆಸರಲ್ಲಿ ವಿಶೇಷ ವಿಚಾರಧಾರೆ ಇಟ್ಟುಕೊಂಡು ಸಮಾಜ ಹಾಳು ಮಾಡಲು ಹೊರಟಿದ್ದಾರೆ.ಅಂಥವರ ವಿರುದ್ದ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಬಹಳ ದು:ಖದಿಂದ ಹೇಳ್ತಿದ್ದೇನೆ ಯಾವ ತರದ ರಿಯಾಕ್ಷನ್ ವಕೀಲರಿಂದ ರಾಜಕೀಯ ಪಕ್ಷಗಳಿಂದ ದೊಡ್ಡದಾಗಿ ಬರಲಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.










