ಮನೆ Latest News ಕೋರ್ಟ್ ಸಹ ಹೇಳಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಯಾರಿಗೂ ಒತ್ತಾಯ ಇಲ್ಲ: ಸಚಿವ ಎಂ ಬಿ ಪಾಟೀಲ...

ಕೋರ್ಟ್ ಸಹ ಹೇಳಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಯಾರಿಗೂ ಒತ್ತಾಯ ಇಲ್ಲ: ಸಚಿವ ಎಂ ಬಿ ಪಾಟೀಲ ಹೇಳಿಕೆ

0

ಬೆಂಗಳೂರು:  ಕೋರ್ಟ್ ಸಹ ಹೇಳಿದೆ . ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಯಾರಿಗೂ ಒತ್ತಾಯ ಇಲ್ಲ ಎಂದು ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಸಮೀಕ್ಷೆಗೆ ಮುಂದೂಡಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಎಷ್ಟು ಪ್ರಮಾಣದಲ್ಲಿ ಸಮೀಕ್ಷೆ ಆನ್ನೋದ್ರ ಮೇಲೆ ಹಿಂದುಳಿದ ಆಯೋಗ ತೀರ್ಮಾನ ತಗೆದುಕೊಳ್ಳುತ್ತಿದೆ. ಸಮೀಕ್ಷೆಗೆ ಇನ್ನೂ ಸಮಯ ಬೇಕಾದ್ರೆ ಅವರು ತಗೆದುಕೊಳ್ಳಬಹುದು. ಕೋರ್ಟ್ ಸಹ ಹೇಳಿದೆ. ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಯಾರಿಗೂ ಒತ್ತಾಯ ಇಲ್ಲ. ಪ್ರಶ್ನೆಗಳಿಗೆ ಉತ್ತರ ಕೊಡುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದಿದ್ದಾರೆ.

ಸಮೀಕ್ಷೆದಾರರ ಮೇಲೆ ಕೇಂದ್ರ ಸಚಿವ ಸೋಮಣ್ಣ ಸಿಟ್ಟು ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಅವರಿಗೆ ಬಿಟ್ಟಿದ್ದು, ಮತದಾನವೇ ಕಡ್ಡಾಯ ಇಲ್ಲ. ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಸ್ವಾತಂತ್ರ್ಯ ಅವರಿಗೆ ಬಿಟ್ಟಿದೆ. ಸರ್ವೆಗೆ ಡಿಸಿಎಂ ಡಿಕೆಶಿ ತಕರಾರು ಬಗ್ಗೆ ನನಗೆ ಗೊತ್ತಿಲ್ಲ. ಆದ್ರೆ ಅವರೇ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ಕರೆ ನೀಡಿದ್ದಾರೆ. ನಮ್ಮ ಸರ್ಕಾರ ಬಸವಣ್ಣನವರನ್ನ ಸಾಂಸ್ಕೃತಿಕ ನಾಯಕ ಅಂತಾ ಘೋಷಣೆ ಮಾಡಿ ವರ್ಷವಾಯ್ತು. ಆ ಹಿನ್ನಲೆಯಲ್ಲಿ ಇಂದು ಎಲ್ಲ ಮಠಾಧೀಶರು ಮುಖ್ಯಮಂತ್ರಿಗಳು ಸನ್ಮಾನ ಮಾಡಿದ್ದಾರೆ. ಬಸವಣ್ಣನವರ ಪರವಾಗಿ ಮುಖ್ಯಮಂತ್ರಿಗಳು ಅನೇಕ ಕಾರ್ಯಕ್ರಮಗಳನ್ನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ದ್ದರಾಮಯ್ಯ ಬದಲಾಗಿದ್ದಾರೆ ಅಂತಾ ರಾಜಣ್ಣ ಹೇಳಿಕೆ ಬಗ್ಗೆ ಮಾತನಾಡಿದ ಅವರು ರಾಜಣ್ಣ ಹಿರಿಯರು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಅನ್ನೋದು ಗೊತ್ತಿಲ್ಲ. 2013 ರ ಸಿದ್ದರಾಮಯ್ಯ ಅಲ್ಲ ಅವರು ಹುಟ್ಟಿನಿಂದ ಹೇಗೆ ಇದ್ದಾರೋ ಈಗಲೂ ಹಾಗೆ ಇದ್ದಾರೆ. ಸಿಎಂ ಸಿದ್ದರಾಮಯ್ಯ ಯಾವಗಲೂ ಬದಲಾಗಿಲ್ಲ. ಬದಲಾಗೋದು ಇಲ್ಲ ಎಂದರು. ಎರಡೂವರೆ ನಾನೇ ಸಿಎಂ ಆಗಿ ಮುಂದುವರೆಯುವುದಾಗಿ ಸಿದ್ದರಾಮಯ್ಯ ಸ್ಪಷ್ಟನೆ ವಿಚಾರದ ಬಗ್ಗೆ ಮಾತನಾಡಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಫೈನಲ್ ಅಂತಾ ಅವರೇ ಹೇಳಿದ್ದಾರೆ. ಹೈಕಮಾಂಡ್ ನಮ್ಮಲ್ಲಿ ಸುಪ್ರೀಂ. ಹೈಕಮಾಂಡ್ ಗಿಂತ ಯಾರು ಸುಪ್ರೀಂ ಇಲ್ಲ. ಸಿದ್ದರಾಮಯ್ಯ. ಡಿಕೆಶಿ. ಎಂಬಿ ಪಾಟೀಲರಿಗೂ ಹೈಕಮಾಂಡ್ ಸುಪ್ರೀಂ. ಖರ್ಗೆ ಅವರು ಎಐಸಿಸಿ ಅಧ್ಯಕ್ಷರು. ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರು ಕಾಲ ಕಾಲಕ್ಕೆ ಏನ್ ನಿರ್ಣಯ ಮಾಡ್ತಾರೋ ಅದೇ ಅಂತಿಮ. ಸಿದ್ದರಾಮಯ್ಯ ಅವರು ಮುಂದಿನ ಎರಡೂವರೆ ವರ್ಷ ಸಿಎಂ ಆಗಿ ಇರತೇನಿ ಅಂತಾ ಹೇಳಿದ್ದಾರೆ. ಅವರು ಮುಂದಿನ ಎರಡೂವರೆ ವರ್ಷ ಮುಂದುವರಿಯುತ್ತಾರೆ.ಸಿದ್ದರಾಮಯ್ಯ ಅವರು ಹೇಳಲಿ ಬಿಡಲಿ ನಮಗೆ ಹೈಕಮಾಂಡ್ ಫೈನಲ್ ಎಂದಿದ್ದಾರೆ.