ಮನೆ Latest News ಬೆಂಗಳೂರಿನ ಗುಂಡಿ ಸಮಸ್ಯೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗ್ತಿದೆ: ನಿಖಿಲ್ ಕುಮಾರಸ್ವಾಮಿ‌ ಹೇಳಿಕೆ

ಬೆಂಗಳೂರಿನ ಗುಂಡಿ ಸಮಸ್ಯೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗ್ತಿದೆ: ನಿಖಿಲ್ ಕುಮಾರಸ್ವಾಮಿ‌ ಹೇಳಿಕೆ

0

ಬೆಂಗಳೂರಿನ ಗುಂಡಿ ಸಮಸ್ಯೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗ್ತಿದೆ: ನಿಖಿಲ್ ಕುಮಾರಸ್ವಾಮಿ‌ ಹೇಳಿದ್ದಾರೆ.

ಕುಮಾರಸ್ವಾಮಿ ಅವರ ನಿವಾಸದಲ್ಲಿ ನಿಖಿಲ್ ಕುಮಾರಸ್ವಾಮಿ‌ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಬೆಂಗಳೂರು ನಗರಕ್ಕೆ ದೊಡ್ಡ ಇತಿಹಾಸವಿದೆ. ವಿಶ್ವದೆಲ್ಲೆಡೆ ಹೆಸರುವಾಸಿಯಾಗಿರುವ ನಗರ. ರಸ್ತೆಗುಂಡಿ ವಿಚಾರ ಅತಿರೇಖಕ್ಕೆ ಹೋಗಿ ಮುಟ್ಟಿದೆ. ಬೆಂಗಳೂರು ಜನತೆ ತಾಳ್ಮೆಯಿಂದ ಇಲ್ಲಿಯವರೆಗೆ ವರ್ತನೆ ಮಾಡಿದ್ದಾರೆ. ಡಿಸಿಎಂ ಇದುವರೆಗೆ ಎರಡು ಬಾರಿ ಗಡುವು ಕೊಟ್ಟಿದ್ದಾರೆ. ಟ್ರಾಪಿಕ್ ಸಮಸ್ಯೆಯ ಜೊತೆಗೆ 13 ಸಾವಿರ ಗುಂಡಿಗಳಿವೆ.ರಾಷ್ಟ್ರೀಯ ಮಾಧ್ಯಮಗಳಲ್ಲೂ ಹೆಚ್ಚು ಸುದ್ದಿಯಾಗುತ್ತಿದೆ ಎಂದಿದ್ದಾರೆ.

ಬ್ಲಾಕ್ ಬಕ್ ಸಿಇಒ ಕೂಡ ರಸ್ತೆ ಗುಂಡಿಗಳ ಅವ್ಯವಸ್ಥೆ ಬಗ್ಗೆ ಹೇಳಿಕೊಂಡಿದ್ದಾರೆ. ಕಂಪೆನಿ ಶಿಫ್ಟ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಸ್ಟಾರ್ಟ್ ಅಪ್ ಕಂಪೆನಿಗಳು ಬೆಂಗಳೂರನ್ನು ಆಯ್ಕೆ ಮಾಡುಕೊಳ್ಳುತ್ತವೆ. ಬೇಸಿಕ್ ಸೌಲಭ್ಯಗಳನ್ನು ಬೆಂಗಳೂರಿನಲ್ಲಿ ಕೊಡೊದಕ್ಕೂ ಆಗುತ್ತಿಲ್ಲ. ಮೂರು ವರ್ಷದಿಂದ ಗುಂಡಿಯನ್ನು ಮುಚ್ಚುವ ಕೆಲಸ ಸರಕಾರದಿಂದ ಆಗಿಲ್ಲ. ಮೊದಲನೇ ಗಡುವು ಎಲ್ಲಿಗೆ ಹೋಯ್ತೋ ಗೊತ್ತಿಲ್ಲ. ಕಂಪೆನಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿತ್ತು. ಆದ್ರೆ ಬ್ಲಾಕ್ ಮೇಲ್ ಮಾಡಬಾರದು ಅಂತಾ ಡಿಸಿಎಂ ಹೇಳಿದ್ದಾರೆ. ಇದನ್ನು ನೋಡಿ ಪಕ್ಕದ ರಾಜ್ಯವರು ಕಂಪನಿಗಳಿಗೆ ಆಹ್ವಾನ ಕೊಡ್ತಿದ್ದಾರೆ ಎಂದು ಹೇಳಿದ್ದಾರೆ.

ಒಂದು ವೇಳೆ ಕಂಪೆನಿಗಳು ಬೇರೆ ರಾಜ್ಯಕ್ಕೆ ಹೋದರೆ. ರಾಜ್ಯದ ಬರುವ ತೆರಿಗೆ ನಿಂತು ಹೋಗಲಿದೆ. ಇವರನ್ನು ಯಾವ ರೀತಿ ಉಳಿಸಿಕೊಳ್ಳಬೇಕು ಎಂಬ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಪ್ರತಿದಿನ ಐದುವರೆ ಯಿಂದ 6 ಟನ್ ಸಾಲಿಡ್ ವೇಸ್ಟ್ ಉತ್ಪಾದನೆಯಾಗುತ್ತೆ. ಸರಿಯಾಗಿ ಕಸ ಎತ್ತುತ್ತಿಲ್ಲ, ಕೊಳೆತು ನಾರುತ್ತಿದೆ. ಮೀಸಲಿಟ್ಟ ಹಣ ಎಲ್ಲಿಹೋಯ್ತು, ಜನ ಪ್ರಶ್ನೆ ಮಾಡುತ್ತಿದ್ದಾರೆ.

ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನೀರು,ಹಾಲು, ರಿಜಿಸ್ಟ್ರೇಷನ್ ಚಾರ್ಜ್ ಆಗಿದೆ. ಮೆಟ್ರೋ ದರ ಹೆಚ್ಚಳವಾಗಿದೆ. ಬೆಂಗಳೂರು ಜನರ ಮೇಲೆ ಹೆಚ್ಚು ತೆರಿಗೆ ಹಾಕುತ್ತಿದ್ದಿರಿ. ಆದರೆ ಬೆಂಗಳೂರಿನ ಜನರೆಗ ಮೂಲಭೂತ ಸೌಕರ್ಯ ಕಲ್ಪಿಸುತ್ತಿಲ್ಲ.ಕಂಪೆನಿಗಳು ಹೊರಗೆ ಹೋದರೆ ಭವಿಷ್ಯಕ್ಕೆ ಮಾರಕ ಎಂದು ತಿಳಿಸಿದ್ದಾರೆ.ಬೆಂಗಳೂರು  ನೀರಿನಿಂದ ವೆನಿಸ್ ನಗರದ ರೀತಿ ಆಗಿದೆ. ಮೋಹನ್ ದಾಸ್ ಪೈ, ಮಜುಂದಾರ್ ಶಾ ಪ್ರಾಮಿನೆಂಟ್ ಆಗಿ ಕೇಳ್ತಿದ್ದಾರೆ. ಅವ್ರ ಸ್ವಂತಕ್ಕೆ ಕೇಳುತ್ತಿಲ್ಲ, ಸಾರ್ವಜನಿಕರ ಪರವಾಗಿ ಕೇಳುತ್ತಿದ್ದಾರೆ. ಡಿಸಿಎಂ ಬೆಳಗ್ಗೆ ಎದ್ದು ಸದಾಶಿವನಗರದಲ್ಲಿ ಮೀಡಿಯಾಗೆ ಮಾತಾಡ್ತಾರೆ. ಡಿಸಿಎಂ ಎಲ್ಲರಿಗೂ ಏಕವಚನದಲ್ಲಿ ಮಾತನಾಡುತ್ತಾರೆ. ಮುಂದೆ ಪಿಆರ್ ಹೇಳಿದಂತೆ ಕೇಳುತ್ತಾರೆ. ಹಳೆ ಬೈಕ್ ಹತ್ತೋದು, ಕಲರ್ ಕಲರ್ ಶಾಲ್ ಹಾಕೊಂಡ್. ಫ್ಲೈಓವರ್ ನಲ್ಲಿ ಬೈಕ್ ಓಡಿಸಿಕೊಂಡು ಹೋಗೊದು.ಅಲ್ಲಿಗೆ ಪಿಆರ್ ಕೆಲಸ ಮುಗಿತು.ಕುಮಾರಸ್ವಾಮಿ ಅವ್ರ ಕೊಡುಗೆ ಏನು ಅಂತಾ ಹೇಳಿದ್ದಾರೆ. ನಾಲ್ಕುವರೆ ಸಾವಿರ ಎಲೆಕ್ಟಿಕ್ ಬಸ್ ಗಳನ್ನು ಕುಮಾರಣ್ಣ ಕೊಟ್ಟಿದ್ದಾರೆ. ಆದರೆ ಸರಕಾರ ಸೌಜನ್ಯತೆಯಿಂದ ಕೃತಜ್ಞತೆಯನ್ನು ಸಲ್ಲಿಸಿಲ್ಲ. ಐಟಿಬಿಟಿಗೆ ಅಡಿಗಲ್ಲು ಹಾಕಿದವರು ದೇವೇಗೌಡರು. ಮೊದಲ ಫ್ಲೈಓವರ್ ಕೊಟ್ಟಿದ್ದು ದೇವೇಗೌಡರು ಎಂದಿದ್ದಾರೆ.