ಬೆಂಗಳೂರು; ಕಾಂಗ್ರೆಸ್ ಎಂಎಲ್ ಸಿ ಐವಾನ್ ಡಿಸೋಜ ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಇದೇ 22 ರಿಂದ ಜಾತಿ ಜನಗಣತಿ ಸಮೀಕ್ಷೆ ನಡೀತಿದೆ. ಸಮೀಕ್ಷೆಗೆ 60 ಪ್ರಶ್ನಾವಳಿಗಳನ್ನು ಸಿದ್ಧಪಡಿಸಲಾಗಿದೆ. ಎಲ್ಲ ಸಮುದಾಯದವರೂ ಸಮೀಕ್ಷೆಗೆ ಸಹಕಾರ ಕೊಡಬೇಕು. ಎಲ್ಲ ಕಡೆಯೂ ಮನೆಗಳಿಗೆ ಸ್ಟಿಕ್ಕರ್ ಅಂಟಿಸಲಾಗಿದೆ. ಅಧಿಕಾರಿಗಳೂ ಸಮೀಕ್ಷೆ ಸಂಬಂಧ ಮಾಹಿತಿಗಳನ್ನು ಕೊಟ್ಟಿದ್ದಾರೆ. ಸಾಮಾಜಿಕ, ಆರ್ಥಿಕ ಸಮೀಕ್ಷೆ ಯಶಸ್ಸಾಗುವ ನಿರೀಕ್ಷೆ ಇದೆ. ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಅಧ್ಯಯನ ಮಾಡಿ ಸರ್ಕಾರ ನೀತಿ ನಿರೂಪಣೆ, ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳಲಿದ್ದಾರೆ ಎಂದರು. ಎಲ್ಲ ವರ್ಗಗಳಿಗೂ ಈ ಸಮೀಕ್ಷೆ ಮೂಲಕ ನ್ಯಾಯ ಸಿಗುವ ನಿರೀಕ್ಷೆಯಿದೆ. ಆದ್ರೆ ಬಿಜೆಪಿಯವ್ರು ಜಾತಿ ಜನಗಣತಿ ಸಮೀಕ್ಷೆಯನ್ನು ರಾಜಕೀಯಕರಣ ಮಾಡ್ತಿದ್ದಾರೆ, ಗೊಂದಲ ಮೂಡಿಸ್ತಿದ್ದಾರೆ. ಇದರಲ್ಲಿ ರಾಜಕೀಯ ಮಾಡುವುದೇನೂ ಇಲ್ಲ ಎಂದು ತಿಳಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸ್ವಾಯತ್ತ ಸಂಸ್ಥೆ. ಕ್ರೈಸ್ತ ಸಮುದಾಯದ ಬಗ್ಗೆಯೂ ಸಾಕಷ್ಟು ಚರ್ಚೆ ಆಗ್ತಿದೆ.47 ಜಾತಿಗಳು ಕ್ರಿಶ್ಚಿಯನ್ ಹೆಸರಿನ ಜತೆ ಇದೆ ಅಂದಿದ್ದಾರೆ. ಇದು ಮತಾಂತರಕ್ಕೆ ಕುಮ್ಮಕ್ಕು ಅಂತ ಬಿಜೆಪಿ ಆರೋಪ ಮಾಡಿದ್ದಾರೆ.ಇದು ಸತ್ಯಕ್ಕೆ ದೂರವಾದ ಆರೋಪ ಎಂದ ಅವರು ಕ್ರೈಸ್ತರು 3ಬಿ ಪ್ರವರ್ಗಕ್ಕೆ ಬರ್ತಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಕ್ರೈಸ್ತರ ವಿಚಾರದಲ್ಲಿ ರಾಜಕೀಯ ಆರೋಪ ಸರಿಯಲ್ಲ. ಮತಾತಂತರ ಆರೋಪ ನಮ್ಮ ಸಮುದಾಯದ ಮೇಲೆ ಮಾಡಲಾಗ್ತಿದೆ. ಇದು ಸರಿಯಲ್ಲ ಎಂದರು.
ಇನ್ನು ಐವಾನ್ ಡಿಸೋಜ ಅವರುಹಿಂದುಳಿದ ವರ್ಗಗಳ ಆಯೋಗದ 47 ಹೊಸ ಜಾತಿಗಳ ಬಗ್ಗೆ ಸೂಕ್ತ ಸ್ಪಷ್ಟೀಕರಣ ಕೊಡಲಿಲ್ಲ. ಕ್ರೈಸ್ತರು ತಮ್ಮ ಧರ್ಮವನ್ನು ಕ್ರೈಸ್ತರು ಅಂತನೇ ಬರೆಸಬೇಕು ಎಂದು ಐವಾನ್ ಡಿಸೋಜ ತಿಳಿಸಿದರು.ಮತಾತಂತರಗೊಂಡ ಹಿಂದೂ ಉಪಜಾತಿಗಳು ಏನು ಬರೆಸಬೇಕು ಅನ್ನೋ ಪ್ರಶ್ನೆಗೆ ಅದು ಅವರಿಗೆ ಬಿಟ್ಟಿದ್ದು ಅಂದರು.











