ಮನೆ Latest News ಹಾಸನದಲ್ಲಿ 10 ಮಂದಿಯ ಪಾಲಿಗೆ ಅಂತಿಮಯಾತ್ರೆ ಗಣೇಶ ಮೆರವಣಿಗೆ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮಾಜಿ ಪ್ರಧಾನಿ...

ಹಾಸನದಲ್ಲಿ 10 ಮಂದಿಯ ಪಾಲಿಗೆ ಅಂತಿಮಯಾತ್ರೆ ಗಣೇಶ ಮೆರವಣಿಗೆ ಗಾಯಾಳುಗಳ ಆರೋಗ್ಯ ವಿಚಾರಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ; ಜೆಡಿಎಸ್​ನಿಂದ ತಲಾ 1 ಲಕ್ಷ ರೂ. ಪರಿಹಾರ ಘೋಷಣೆ

0

ಹಾಸನದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಘೋರ ದುರಂತ ಸಂಭವಿಸಿದ್ದು ದುರಂತಕ್ಕೆ 10 ಮಂದಿ ಬಲಿಯಾಗಿದ್ದಾರೆ.ಇನ್ನು ಗಾಯಾಳುಗಳು ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಶನಿವಾರ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಈ ವೇಳೆ ಮಾತನಾಡಿದ ಅವರು  ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಜೆಡಿಎಸ್ ಪಕ್ಷದ ವತಿಯಿಂದ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಡ ಘೋಷಣೆ ಮಾಡಿದರು. ಗಂಭೀರವಾಗಿ ಗಾಯಗೊಂಡವರಿಗೆ 25 ಸಾವಿರ ರೂ., ಸ್ವಲ್ಪ ಪ್ರಮಾಣದಲ್ಲಿ ಗಾಯಗೊಂಡವರಿಗೆ 20 ಸಾವಿರ ರೂ., ಚಿಕ್ಕಪುಟ್ಟ ಗಾಯಗೊಂಡವರಿಗೆ ತಲಾ 15 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಿಸಿದರು. ಸರ್ಕಾರ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ ದೇವೇಗೌಡ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡುತ್ತೇನೆ ಎಂದರು.

ಮೊಸಳೆಹೊಸಳ್ಳಿ ತಾಯಿ ಹುಟ್ಟಿದ ಊರು ಆ ಊರಿನ ಮಗ ನಾನು .ನಮ್ಮದು ಸಣ್ಣ ರಾಜಕೀಯ ಪಕ್ಷ .ನನಗೆ ಸೆಂಟಿಮೆಂಟ್ ಇದೆ ಅದಕ್ಕೆ ಬಂದಿದ್ದೇನೆ. 25 ಸಾವಿರ 20 ಸಾವಿರ  15 ಸಾವಿರ ಒಟ್ಟು 3 ಲಕ್ಷ 5 ಸಾವುರ ಆಗುತ್ತೆ ವೈದ್ಯರು ಮಾಹಿತಿ ಪಡೆದು ನೀಡಲಾಗುವುದು. ಪರಿಹಾರ ಹೆಚ್ಚು ಮಾಡಬೇಕು ಅಂತ ವಿನಂತಿ ಮಾಡುತ್ತೇನೆ ಎಂದು ತಿಳಿಸಿದರು.

ದುಡಿಯುವ ಮಕ್ಕಳು ತೀರಿ ಹೋಗಿದ್ದಾರೆ ವಯಸ್ಸಾದ ತಂದೆ ತಾಯಿ ಇದ್ದಾರೆ ಅವರು ಜೀವನ ಮಾಡಲು ಕಷ್ಟ ಆಗುತ್ತೆ.10 ಲಕ್ಷ ಕೊಡಿ ಎಂದು ಸಿದ್ದರಾಮಯ್ಯ ಮನವಿ ಮಾಡ್ತೀನಿ. ಇದು ನನ್ನ ತಾಯಿ ಊರು ಮಮತೆ ಇದೆ. ಮೃತ ಕುಟುಂಬ ಕ್ಕೆ ಪಕ್ಷದ ವತಿಯಿಂದ 1 ಲಕ್ಷ ರೂಪಾಯಿ ಕೊಡ್ತೀನಿ.ಮುಚ್ಚು ಮರೆ ಇಲ್ಲದೆ ಹೇಗೆ ಪರಿಹಾರ ಕೊಡುತ್ತಾರೆ ಬೇರೆ ರಾಜ್ಯದಲ್ಲಿ ದೇ ಹಾಗೆ ನಾನು ಇಲ್ಲಿ ರಾಜಕೀಯ ಮಾಡೋಲ್ಲ ಆ ಸ್ಥಾನ ದಲ್ಲಿ ಇದ್ದು ಕೆಲಸ ಮಾಡುವ್ವಾರು ದಯಮಾಡಿ 10 ಲಕ್ಷ ಹೆಚ್ಚು ಮಾಡಬೇಕು. ಈ ಪ್ರಕರಣ ದಲ್ಲಿ ರಾಜಕೀಯ ಮಾಡೋಲ್ಲ ರಾಜಕೀಯ ಮಾಡೋಕ್ ಮುಂದೆ ಸಮಯ ಇದೆ.ಗಣೇಶ ಉತ್ಸವ ನಮ್ಮ ಹುಡುಗರು ಆನಂದ ವಾಗಿ ಮಾಡುತ್ತಿದ್ದಾರೆ ರಾಷ್ಟ್ರೀಯ ಹೆದ್ದಾರಿ ಇದೆ ಪೊಲೀಸರು ಸ್ವಲ್ಪ ಎಚ್ಚರ ವಹಿಸಬೇಕಾಗಿತ್ತು ಎಂದರು.

ಇವತ್ತು ನಾನು ಇಲ್ಲೇ ಇರ್ತೀನಿ.. ನಾಳೆ ಕೆಲವು ಕಡೆ ಹೋಗಬಹುದು. ದೇವೇಗೌಡ ಗೆ 93 ವರ್ಷ ನಡಿತಿದೆ. ರಾಜಕೀಯ ದಲ್ಲಿ ಭ್ರಮೆ ಇಲ್ಲ .ಕೆಲಸ ಮಾಡುವ ಶಕ್ತಿ ಎಲ್ಲಿ ತನಕ ಇದಿಯೋ, ಅಲ್ಲಿವರೆಗೂ ಹೋರಾಟ ಮಾಡ್ತೀನಿ. ನಾಳೆ ಪ್ರೆಸ್ ಮೀಟ್ ಮಾಡಿ ಕೆಲವು ವಿಷಯ ಹೇಳುತ್ತೇನೆ. ರಾಜಕೀಯ ದಿಂದ ನಿವೃತ್ತಿ ಆಗ್ತೀನಿ ಅಂತ ಹೇಳಿಲ್ಲ. ಮೊನ್ನೆ ಹೋಗಿ NDA  ಮೀಟಿಂಗ್ ಕುಳಿತಿದ್ದೆ. ರಾಜಕೀಯ ದಲ್ಲಿ ನನ್ನ ಕೆಲಸ ಮುಗಿದಿಲ್ಲ ಇನ್ನು ಸ್ವಲ್ಪ ಇದೆ. ಪ್ರಧಾನಿ ಬಂದು ನನ್ನ ಕೈ ಕುಳಿಕಿದ್ದಾರೆ. ಅವರ ಭಾಷಣ ದಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ರೇವಣ್ಣ ಪೊಲೀಸ್ ವೈಫಲ್ಯ ಇರೋದನ್ನ ಗಮನಕ್ಕೆ ತಂದಿದ್ದಾನೆ. ಬ್ಯಾರಿ ಕೇಡ್ ಹಾಕಿದ್ರೆ ದೊಡ್ಡ ಪ್ರಕರಣ ಆಗತ್ತ ಇರಲಿಲ್ಲ ಅವ್ನು ಯಾರು ಸರ್ಕಲ್ ಇನ್ಸ್ಪೆಕ್ಟರ್ 500 ಮೀಟರ್ ದೂರ ಬ್ಯಾರಿ ಕೆಡ್ ಹಾಕಬೇಕಿತ್ತು. ಮೃತ ಪಟ್ಟ ವಿದ್ಯಾರ್ಥಿ ಗಳ ಕತೆ ಒಬ್ಬೊಬ್ಬರದ್ದು ಒಂದು ಇದೆ. ಸ್ಪೀಡ್ ಕಂಟ್ರೋಲ್ ಮಾಡೋಕ್ ಆಗಿಲ್ಲ. ಇವತ್ತು ಆ ಜಾಗ ದಲ್ಲಿ 100 ಹೆಣ ಬೀಳೋದು . ರಾಷ್ಟ್ರೀಯ ಹೆದ್ದಾರಿ 250 ಅಡಿ ಬಿಡಬೇಕು ಹೆದ್ದಾರಿ ಬಾರ್ ತೆರೆಯಲು ಅವಕಾಶ ಕೊಟ್ಟಿದ್ದಾರೆ.. ಸಿದ್ದರಾಮಯ್ಯ ಹಾಗೂ ಹೋಮ್ ಮಿನಿಸ್ಟರ್ ಬಂದು ನೋಡಲಿ ಎಂದು ಆಗ್ರಹಿಸಿದರು.