ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಒಟ್ಟು 17 ಜನ ಪರಪ್ಪನ ಅಗ್ರಹಾರ ಸೇರಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇನ್ನೂ ಕೂಡ ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಅನೇಕ ಅಚ್ಚರಿಯ ವಿಚಾರಗಳು ಬಯಲಾಗಿವೆ.
ಕಳೆದ ಫೆಬ್ರವರಿಯಿಂದ ರೇಣುಕಾಸ್ವಾಮಿ ಪವಿತ್ರ ಗೌಡ ಅವರಿಗೆ ನಿರಂತರವಾಗಿ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ.ಆದರೆ ಆತನ ಯಾವುದೇ ಮೆಸೇಜ್ ಗೂ ಕೂಡ ಪವಿತ್ರ ಗೌಡ ಉತ್ತರಿಸಿರಲಿಲ್ಲ.ಆದರೂ ಆತ ಅಶ್ಲೀಲ ಮೆಸೇಜ್ ಕಳುಹಿಸೋದನ್ನು ಬಿಟ್ಟಿರಲಿಲ್ಲ. ನಿರಂತರವಾಗಿ ಮೆಸೇಜ್ ಮಾಡುತ್ತಲೇ ಇದ್ದ. ಸುಮಾರು 200ಕ್ಕೂ ಹೆಚ್ಚು ಮೆಸೇಜ್ ಗಳನ್ನು ಕಳುಹಿಸಿದ್ದಾನೆ. ಪವಿತ್ರ ಗೌಡ ಆತನನ್ನು ಬ್ಲಾಕ್ ಮಾಡಿದ್ರೆ ಆತ ಇನ್ನೊಂದು ಅಕೌಂಟ್ ಕ್ರಿಯೇಟ್ ಮಾಡಿ ಅದರಿಂದ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಕೊನೆಗೆ ಈತನ ಕಾಟ ತಾಳಲಾರದೇ ಪವಿತ್ರ ಗೌಡ ತಮ್ಮ ಮನೆಯ ಕೆಲಸದವನಾದ ಪವನ್ ಗೆ ಹೇಳಿದ್ದಾಳೆ. ಪವನ್ ಪವಿತ್ರ ಗೌಡ ಹೆಸರಲ್ಲಿ ನಕಲಿ ಖಾತೆ ತೆರೆದು ಆತನ ಜೊತೆ ಚಾಟ್ ಮಾಡುತ್ತಾ ಆತನ ಹೆಸರು, ಊರು ಎಲ್ಲಾ ತಿಳಿದುಕೊಂಡು ಆತನ ಫೋಟೋವನ್ನು ಕಳುಹಿಸುವಂತೆ ಹೇಳಿದ್ದಾನೆ. ಆ ಬಳಿಕ ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಬಳಿ ಎಲ್ಲಾ ವಿಚಾರವನ್ನು ತಿಳಿಸಿ ಆತನ ಮೂಲಕ ರೇಣುಕಾಸ್ವಾಮಿಯನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯಲ್ಲಿರು ಶೆಡ್ ಕರೆಸಿ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು.
ಒಂದು ಗಂಟೆಗೂ ಹೆಚ್ಚು ಕಾಲ ರೇಣುಕಾಸ್ವಾಮಿಗೆ ಚಿತ್ರಹಿಂಸೆ
ಇನ್ನು ಪಟ್ಟಣಗೆರೆಯ ಕಾರ್ ಶೆಡ್ ಗೆ ಜೂನ್ 8 ರಂದು ರೇಣುಕಾಸ್ವಾಮಿಯನ್ನು ಕರೆ ತಂದ ಬಳಿಕ ಆತನಿಗೆ ಡಿ ಗ್ಯಾಂಗ್ 1 ಗಂಟೆಗೂ ಅಧಿಕ ಕಾಲ ಬೇರೆ ಬೇರೆ ರೀತಿಯಲ್ಲಿ ಚಿತ್ರಹಿಂಸೆ ನೀಡಿದೆ ಎನ್ನಲಾಗಿದೆ. ಮೊದಲಿಗ ರೇಣುಕಾಸ್ವಾಮಿ ಫೋನ್ ನನ್ನು ದರ್ಶನ್ ಪವನ್ ಕೈಗೆ ಕೊಟ್ಟು ಪವಿತ್ರಾಗೆ ರೇಣುಕಾಸ್ವಾಮಿ ಕಳುಹಿಸಿದ ಮೆಸೇಜ್ ಗಳನ್ನು ಒಂದೊಂದೇ ಓದುವಂತೆ ಹೇಳಿ ಪ್ರತಿ ಮೆಸೇಜ್ ಗೂ ಡಿ ಗ್ಯಾಂಗ್ ಹಲ್ಲೆ ಮಾಡಿದೆ ಎನ್ನಲಾಗಿದೆ. ಅಲ್ಲದೇ ಪವಿತ್ರ ಗೌಡ ಕೂಡ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಡಿ ಬಾಸ್ ಹೇಗೆ ಸಮಯ ಕಳೆಯುತ್ತಿದ್ದಾರೆ?
ಇಂದಿಗೆ ದರ್ಶನ್ ಜೈಲು ಸೇರಿ 7 ದಿನಗಳಾಯ್ತು. ಜೈಲು ಸೇರಿದಾಗಿನಿಂದಲೂ ನಟ ದರ್ಶನ್ ಅವರು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.ದರ್ಶನ್ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 6106 ನ್ನು ಕೊಡಲಾಗಿದ್ದು ಅವರನ್ನು ಪರಪ್ಪನ ಅಗ್ರಹಾರದಲ್ಲಿರುವ ಮೂರನೇ ವಿಶೇಷ ಬ್ಯಾರಕ್ ನಲ್ಲಿ ಇರಿಸಲಾಗಿದೆ. ದರ್ಶನ್ ಜೈಲಿನಲ್ಲಿ ತಮ್ಮ ಬ್ಯಾರಕ್ ನಲ್ಲಿರುವ ಇತರೆ ಕೈದಿಗಳ ಜೊತೆಯೂ ಮಾತನಾಡುತ್ತಿಲ್ಲವಂತೆ. ಹಾಗಾದ್ರೆ ದರ್ಶನ್ ಜೈಲಿನಲ್ಲಿ ಏನ್ ಮಾಡ್ತಿದ್ದಾರೆ? ಹೇಗೆ ಸಮಯ ಕಳೆಯುತ್ತಿದ್ದಾರೆ ಅನ್ನೋ ಕುತೂಹಲ ಅವರ ಅಭಿಮಾನಿಗಳಿಗೆ ಮೂಡೋದು ಸಹಜ.
ಅಂದ್ಹಾಗೆ ದರ್ಶನ್ ಜೈಲಿನಲ್ಲಿ ಯಾರ ಭೇಟಿಗೂ ಒಪ್ಪುತ್ತಿಲ್ಲ, ಯಾರೊಂದಿಗೂ ಮಾತನಾಡ್ತಿಲ್ಲ. ಮೊನ್ನೆ ಪತ್ನಿ ಹಾಗೂ ಮಗ ಅವರನ್ನು ಭೇಟಿಯಾಗಲು ತೆರಳಿದ್ದ ವೇಳೆ ಮಗನನ್ನು ತಬ್ಬಿಕೊಂಡು ಡಿ ಬಾಸ್ ಕಣ್ಣೀರು ಹಾಕಿದ್ದರು. ಪತ್ನಿ ಮುಂದೆಯೂ ತೀವ್ರ ಭಾವುಕರಾಗಿದ್ದರುಯ. ಇನ್ನು ಸ್ನೇಹಿತ ವಿನೋದ್ ಪ್ರಭಾಕರ್ ಅವರ ಬಳಿಯೂ ಟೈಗರ್ ಅಂತಾ ಕರೆದದ್ದು ಬಿಟ್ಟರೆ ಬೇರೇನೂ ಮಾತನಾಡಿರಲಿಲ್ಲ. ದರ್ಶನ್ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ತುಂಬಾನೇ ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಅಪ್ಪಿ ತಪ್ಪಿಯೂ ದರ್ಶನ್ ನ್ಯೂಸ್ ಚಾನೆಲ್ ನೋಡ್ತಿಲ್ಲವತೆ. ಜೈಲಿನಲ್ಲಿ ಒಂದೊಂದು ಕ್ಷಣ ಕಳೆಯಲೂ ದರ್ಶನ್ ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ.