ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ ಅವರ ದ್ವಂದ್ವ ಮಾತುಗಳು ಈಗಲೂ ಮುಂದುವರೆದಿದೆ. 1991 ರಲ್ಲಿ ಕೊಪ್ಪಳ ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋತ್ರು. ತಮ್ಮನ್ನು ಮೋಸದಿಂದ ಸೋಲಿಸಿದ್ರು ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಆಗಲೇ ಆ ಆರೋಪ ಮಾಡಿ ಕೇಸೂ ಹಾಕಿದ್ರು. ಸಿದ್ದರಾಮಯ್ಯ ಅವರನ್ನು ಆಗ ಮತಕಳ್ಳತನ ಮಾಡಿ ಸೋಲಿಸಿದ್ದು ಕಾಂಗ್ರೆಸ್. ಈಗ ಅದೇ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಇದ್ದಾರೆ. ಕಾಂಗ್ರೆಸ್ ಮತಗಳ್ಳತನ ಮಾಡಿದೆ ಅನ್ನೋ ಹೇಳಿಕೆ ಕೊಟ್ಟಿದ್ದಾರೆ. ಈಗ ಬಿಹಾರದಲ್ಲಿ ಮತ ಅಧಿಕಾರ ಯಾತ್ರೆಯಲ್ಲಿ ಯಾವ ಮುಖ ಇಟ್ಕೊಂಡು ಹೋಗಿದ್ದಾರೆ?.ಸತ್ಯ ಹರಿಶ್ಚಂದ್ರ ಥರ ಸಿದ್ದರಾಮಯ್ಯ ಮಾತಾಡ್ತಾರೆ, ಈಗ ಏನ್ ಹೇಳ್ತಾರೆ?.ಕಾಂಗ್ರೆಸ್ ನ ವೋಟ್ ಚೋರಿಯಿಂದ ಸೋತೆ ಅನ್ನೋ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ಸಿದ್ದರಾಮಯ್ಯ ಕೊಡಬೇಕು ಎಂದಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಈಗ ಏನು ಕ್ರಮ ತಗೊಳ್ಳುತ್ತೆ ಕಾಂಗ್ರೆಸ್ ಹೈಕಮಾಂಡ್?. ರಾಜಣ್ಣ ವಿರುದ್ಧ ಕ್ರಮ ತಗೊಂಡ್ರು, ಸಿದ್ದರಾಮಯ್ಯ ವಿರುದ್ಧ ತಗೋತಾರಾ?. ಡಿಕೆಶಿಗೆ ಆರೆಸೆಸ್ ಗೀತೆ ಹಾಡಿದ್ರು ಅಂತ ಕ್ಷಮೆ ಕೇಳಿ ಅಂತ ಹೈಕಮಾಂಡ್ ಹೇಳ್ತು, ಡಿಕೆಶಿ ಕ್ಷಮೆ ಕೇಳಿದ್ರು. ಅದೇ ರೀತಿ ರಾಜಣ್ಣಗೂ ಕ್ಷಮೆ ಕೇಳಿ ಅಂತ ಹೇಳಬಹುದಿತ್ತು ಅಲ್ವಾ?.ಡಿಕೆಶಿ, ಸಿದ್ದರಾಮಯ್ಯಗೆ ಒಂದು ನೀತಿ ರಾಜಣ್ಣ ಗೆ ಒಂದು ನೀತಿ, ಈ ಮೂಲಕ ಕಾಂಗ್ರೆಸ್ ನ ದ್ವಿಮುಖ ನೀತಿ ಹೊರಗೆ ಬಂದಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಜತೆ ಬಿಹಾರಕ್ಕೆ ಅವರ ಆಪ್ತರು ಹೋಗ್ತಿದ್ದಾರೆ. ಡಿಕೆಶಿಯವರು ಬಿಹಾರಕ್ಕೆ ಒಬ್ಬರೇ ಹೋಗಿದ್ರು. ಡಿಕೆಶಿ ಕಾಂಗ್ರೆಸ್ ನಲ್ಲಿ ಒಬ್ಬಂಟಿಯಾಗ್ತಿದ್ದಾರೆ. ಡಿಕೆಶಿಯನ್ನು ಒಬ್ಬಂಟಿ ಮಾಡುವ ಪ್ರಯತ್ನಗಳು ಕಾಂಗ್ರೆಸ್ನಲ್ಲಿ ನಡೀತಿದೆ ಎಂದಿದ್ದಾರೆ. ಬಾನು ಮುಷ್ತಾಕ್ ವಿಚಾರದ ಬಗ್ಗೆ ಮಾತನಾಡಿದ ಅವರು ದಸರಾ ಉದ್ಘಾಟನಾ ಪೂಜೆ ವೇಳೆ ಗೋಪೂಜೆ ಮಾಡ್ತಾರೆ. ಆದ್ರೆ ಬಾನು ಮುಷ್ತಾಕ್ ಗೋಮಾಂಸ ತಿನ್ನೋರು. ಗೋಮಾಂಸ ತಿನ್ನುವ ಬಾನು ಮುಷ್ತಾಕ್ ಹೇಗೆ ಗೋಪೂಜೆ ಮಾಡ್ತಾರೆ?.ಇದು ಅಪಚಾರ ಆಗೋದಿಲ್ವಾ?. ಪ್ರತಿಯೊಂದನ್ನೂ ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ನಡೆಸುವ ದಸರಾದಲ್ಲಿ ಬಾನು ಮುಷ್ತಾಕ್ ಸಂಪ್ರದಾಯ ಪಾಲಿಸ್ತಾರಾ?. ಬಾನು ಮುಷ್ತಾಕ್ ವಿರುದ್ಧ ಮುಸ್ಲಿಮರಲ್ಲೂ ಅಪಸ್ವರ ಬಂದಿದೆ. ಮೂರ್ತಿ ಪೂಜೆ ಮಾಡೋದಿಕ್ಕೆ ಮುಸ್ಲಿಮರ ಅಭ್ಯಂತರ ಇದೆ. ಸಚಿವ ಜಮೀರ್ ಇದರ ಬಗ್ಗೆ ಸ್ಪಷ್ಟೀಕರಣ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಬಾನು ಮುಷ್ತಾಕ್ ಆಯ್ಕೆ ಮೂಲಕ ಕಾಂಗ್ರೆಸ್ ಕೋಮು ಸೌಹಾರ್ದ ಹಾಳು ಮಾಡ್ತಿದೆ. ಬಾನು ಮುಷ್ತಾಕ್ ಮೂಲಕ ದಸರಾ ಉದ್ಘಾಟಿಸಿ ಹಿಂದೂಗಳಿಗೆ ಮಂಗಳಾರತಿ ಮಾಡಲು ಸರ್ಕಾರ ಹೊರಟಿದೆ. ದಸರಾ ಉಳಿಸಿ, ಚಾಮುಂಡಿ ಉಳಿಸಿ ಅಂತ ನಾವು ಹೋರಾಟ ಮಾಡ್ತೇವೆ. ಇದರ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸ್ತೇವೆ ಎಂದು ತಿಳಿಸಿದ್ದಾರೆ.
ದ್ರೌಪದಿ ಮುರ್ಮು ವಿಚಾರದಲ್ಲಿ ಸಂತೋಷ್ ಲಾಡ್ ಹೇಳಿಕೆಗೆ ಅಶೋಕ್ ಕಿಡಿಕಾರಿದ್ದು ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಮಾತಾಡಿದ್ದೀರಿ. ನೀವು ವಿಧಾನಸೌಧಕ್ಕೆ ಕರೆದಿದ್ರಾ?. ಸಂಸತ್ ಉದ್ಘಾಟನೆಗೆ ಯಾರನ್ನು ಕರೆಯಬೇಕು ಅನ್ನೋದು ಕ್ಯಾಬಿನೆಟ್ ತೀರ್ಮಾನ. ರಾಷ್ಟ್ರಪತಿಗಳಿಗೆ ನಮ್ಮ ಬಿಜೆಪಿ ಸರ್ಕಾರ ಗೌರವ ಕೊಟ್ಟಿದೆ. ಒಬ್ಬ ಎಸ್ಟಿ ಮಹಿಳೆಯನ್ನು ಗುರುತಿಸಿ ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ಕಾಂಗ್ರೆಸ್ ಇದ್ದಾಗ ಈ ಕೆಲಸ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ದಸರಾ ಒಂದು ಸಾಂಸ್ಕೃತಿಕ ಉತ್ಸವ ಅಲ್ಲ, ಅದು ನಾಡದೇವಿಯ ಹಬ್ಬ. ಆಯುಧ ಪೂಜೆ ಅಂತ ಇದೆ, ಆಯುಧ ನಮಾಜ್ ಅಂತ ಇಲ್ಲ. ಇದನ್ನು ಸರ್ಕಾರ ಗಮನಿಸಲಿ ಪೂಜೆ ಅಂತ ಇದೆ, ನಮಾಜ್ ಅಂತ ಇಲ್ಲ. ಸಿದ್ದರಾಮಯ್ಯ ವೋಟ್ ಪಾಲಿಟಿಕ್ಸ್ ಗಾಗಿ ನಾಡ ದೇವತೆ ಹಬ್ಬವನ್ನು ವೋಟಿನ ಡಬ್ಬಾ ಮಾಡಿದ್ದಾರೆ. ದಸರಾ ಸಾಂಸ್ಕೃತಿಕ ಉತ್ಸವ ಅಲ್ಲ. ನಾಡ ಹಬ್ಬ ಅದು, ವಿಜಯದಶಮಿ ಅದು. ಆಯುಧ ಪೂಜೆ ಅದು ನಮಾಜ್ ಅಲ್ಲ.ಹಿಂದೂಗಳನ್ನ ಅವರ ಪಾಡಿಗೆ ಬಿಡಿ. ಅವರವರ ಧರ್ಮದ ಹಬ್ಬ ಅವರವರು ಮಾಡಲಿ. ಸಿದ್ದರಾಮಯ್ಯ ನಾಡದೇವತೆ ಹಬ್ಬವನ್ನ ವೋಟಿನ ಡಬ್ಬ ಮಾಡಿದಾರೆ ಎಂದಿದ್ದಾರೆ.










