ಬೆಂಗಳೂರು; ರಾಜಕೀಯ ದ್ವೇಷದಿಂದ ಸುಧಾಕರ್ ಮೇಲೆ ಎಫ್ ಐಆರ್ ಆಗಿದೆ ವಿಧಾನ ಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಗುತ್ತಿಗೆ ಡ್ರೈವರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ರಾಜಕೀಯ ಧ್ವೇಷದಿಂದ ಸುಧಾಕರ್ ಮೇಲೆ ಎಫ್ ಐಆರ್ ಆಗಿದೆ. ಎ1 ಆರೋಪಿಯನ್ನಾಗಿ ಮಾಡಿದ್ದಾರೆ. ಆತ್ಮಹತ್ಯೆಗೆ ಒತ್ತಡ ಹೇರಿರಬೇಕು ಅಂತಾ ಇದೆ. ಸುಧಾಕರ್ ಅವರನ್ನು ಭೇಟಿ ಮಾಡಿಲ್ಲ, ನೋಡಿಯೇ ಇಲ್ಲ. ಎಸ್ಸಿ ,ಎಸ್ಟಿ ಕೇಸ್ ಕೊಟ್ಟಿದ್ದಾರೆ. ಹೇಗೆ ಅಟ್ರಾಸಿಟಿ ಕೇಸ್ ದಾಖಲಿಸಲು ಸಾಧ್ಯ. ವಿರೋಧ ಪಕ್ಷಗಳ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ. ಬೈರತಿ ಬಸವರಾಜ್ ಅವರನ್ನು ಟಾರ್ಗೆಟ್ ಮಾಡಲಾಗಿದೆ. ಬಿಜೆಪಿಯವ್ರೆ ಇಮಿಡಿಯಟ್ ಅರೆಸ್ಟ್..!. ಕೊಡಗಲ್ಲೂ ಕಾಂಗ್ರೆಸ್ ಶಾಸಕರ ಮೇಲೆ ಆರೋಪ ಬಂತು. ಕೇಸ್ ಹೋಗಲಿ ಎಫ್ ಐ ಆರ್ ಆಗಲಿಲ್ಲ. ಕಾನೂನು ಎಲ್ಲರಿಗೂ ಒಂದೆ ಇರಬೇಕು ಎಂದಿದ್ದಾರೆ.
ಆನ್ ಲೈನ್ ಬೆಟ್ಟಿಂಗ್ ಆಡಿದ್ದಾನೆ ಎಂದಿದ್ದಾನೆ. ಸಾಲ ಮಾಡಿದ್ದೇನೆ ಎಂದು ಬರೆದಿದ್ದಾನೆ. ಸುಧಾಕರ್ ಮೇಲೆ ಹೇಗೆ ಮಾಡುತ್ತೀರಿ. ಇದು ಅಪರಾಧ, ಇದು ನಿಮಗೆ ತಿರುಗುಬಾಣ ಆಗುತ್ತೆ. ಎರಡು ವರ್ಷದ ಬಳಿಕ ನಿಮಗೆ ತಿರುಗುಬಾಣ ಆಗುತ್ತೆ ಬರೆದಿಟ್ಟುಕೊಳ್ಳಿ. ಇದು ಒಳ್ಳೆಯ ಪರಂಪರೆ ಅಲ್ಲ, ಆಂಧ್ರದ ಪರಂಪರೆ ಕರ್ನಾಟಕಕ್ಕೆ ತರುತ್ತಿದ್ದಾರೆ ಎಂದು ಹೇಳಿದ್ದಾರೆ.
ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ ವಿಪಕ್ಷ ನಾಯಕರನ್ನ ಟಾರ್ಗೆಟ್ ಮಾಡ್ತಿದ್ದಾರೆ ಸತ್ತ ವ್ಯಕ್ತಿ ಆನ್ ಲೈನ್ ಗೇಮ್ ಆಡ್ತಿದ್ದ ಆತನ ಸಾವಿಗೆ ಅದು ಒಂದು ಕಾರಣ ಇರಬಹುದು. ಸುಧಾಕರ್ ಈಗ ಅಧಿಕಾರದಲ್ಲಿ ಇಲ್ಲ. ಕೆಲಸ ಕೊಡಿಸಲು ಸಾಧ್ಯವಿಲ್ಲ . ಅವರ ಹೆಸರೇಲಿ ಯಾರೋ ದುಡ್ಡು ತಗೊಂಡ್ರೆ ಅವರು ಹೇಗೆ ಆರೋಪಿ ಆಗ್ತಾರೆ. ಸಿ,ಟಿ ರವಿ,ರವಿಕುಮಾರ್,ಮುನಿರತ್ನ ಆಯಿತು ಈಗ ಸುಧಾಕರ್ . ಟಾರ್ಗೆಟ್ ಪಾಲಿಟಿಕ್ಸ್ ಇದು- ನಾವು ಕೋರ್ಟ್ ಗೆ ಹೋದ್ರೆ ನಿಮಗೆ ಕಪಾಳ ಮೋಕ್ಷ ಗ್ಯಾರಂಟಿ ಆಗುತ್ತೆ.ಮಂಥರ್ ಗೌಡ, ಪೊನ್ನಣ್ಣ ಪ್ರಿಯಾಂಕ್ ಖರ್ಗೆ ಹೆಸರುಗಳು ನೇರವಾಗಿ ಹೇಳಿದ್ರು . ಪ್ರಿಯಾಂಕ್ ಖರ್ಗೆ ಎರಡು ಮೂರು ಬಾರಿ ಭೇಟಿ ಆಗಿದ್ರು. ಅವರ ಮೇಲೆ ಎಫ್ಐಆರ್ ಇಲ್ಲ . ಸುಧಾಕರ್ ಹಾಗೂ ಬಸವರಾಜ ಮೇಲೆ ಎಫ್ಐಆರ್ . ಈ ಟಾರ್ಗೆಟ್ ಪಾಲಿಟಿಕ್ಸ್ ಬಹಳ ದಿನ ನಡೆಯಲ್ಲ ಎಂದಿದ್ದಾರೆ.ನೀವು ಎಷ್ಟು ಟಾರ್ಗೆಟ್ ಮಾಡ್ತಿರೋ..ಅಷ್ಟು ಬಲಿಷ್ಟವಾಗ್ತೀವಿ ಎಂದು ಹೇಳಿದ್ದಾರೆ,