ಮನೆ Latest News ಯಾರೋ ಹುಡುಗರು ವಾಟ್ಸಾಪ್ ನಲ್ಲಿ ಕಿತ್ತಾಡಿಕೊಂಡಿದ್ದಕ್ಕೆ ಕಲಬುರ್ಗಿ ಚಲೋ ಮಾಡ್ತಾರೆ ಬಿಜೆಪಿಯವರು: ಸಚಿವ ಪ್ರಿಯಾಂಕ್ ಖರ್ಗೆ...

ಯಾರೋ ಹುಡುಗರು ವಾಟ್ಸಾಪ್ ನಲ್ಲಿ ಕಿತ್ತಾಡಿಕೊಂಡಿದ್ದಕ್ಕೆ ಕಲಬುರ್ಗಿ ಚಲೋ ಮಾಡ್ತಾರೆ ಬಿಜೆಪಿಯವರು: ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ

0

ಬೆಂಗಳೂರು; ಯಾರೋ ಹುಡುಗರು ವಾಟ್ಸಾಪ್ ನಲ್ಲಿ ಕಿತ್ತಾಡಿಕೊಂಡಿದ್ದಕ್ಕೆ ಕಲಬುರ್ಗಿ ಚಲೋ ಮಾಡ್ತಾರೆ ಬಿಜೆಪಿಯವರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ಮಾನ್ಯ ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಹಾಗೂ ವಿಜಯೇಂದ್ರ ಬಹಳ ದೊಡ್ಡ ಮಟ್ಟದಲ್ಲಿ ಹಿಂದೆ ಕಲಬುರ್ಗಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ರು. ಹಿಂದೆ ಆಡಳಿತ ಇದ್ದಾಗ ಒಮ್ಮೆಯೂ ಆ ಕಡೆ ಬಿಜೆಪಿ ತಿರುಗಿ ನೋಡಿಲ್ಲ. ಹಿಂದೆ ಸಚಿನ್ ಪಾಂಚಾಳ್ ಅಂತ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ. ಅಲ್ಲಿ ಎಲ್ಲಿ ಕೂಡ ನನ್ನ ಹೆಸರು ಇರಲಿಲ್ಲ. ಆದರೂ ರಿಪಬ್ಲಿಕ್ ಆಫ್ ಕಲಬುರ್ಗಿ ಅಂತ ಮಾತನಾಡಿದ್ರು. ಆದರೂ ಆಗ ನನ್ನ ರಾಜೀನಾಮೆ ಕೇಳಿದ್ರು ಬಿಜೆಪಿಯವರು. ಅದೇ ನೈತಿಕತೆ ಬಿಜೆಪಿ ಈಗ ತೋರಿಸುತ್ತಾರಾ?. ಪ್ರಿಯಾಂಕ್ ಖರ್ಗೆ ಡ್ರಗ್ ರ್ಯಾಕೆಟ್ ನಡೆಸ್ತಾರೆ ಅಂತ ಮತ್ತೊಂದು ಆರೋಪ. ಈಗ ಸುಧಾಕರ್ ಹೆಸರು ಕೇಳಿ ಬಂದಿದೆಯಲ್ಲ ನಿಮ್ಮ ಉತ್ತರ ಏನು ಇದಕ್ಕೆ??. ಯಾರೋ ಹುಡುಗರು ವಾಟ್ಸಪ್ ನಲ್ಲಿ ಕಿತ್ತಾಡಿಕೊಂಡಿದ್ದಕ್ಕೆ ಕಲಬುರ್ಗಿ ಚಲೋ ಮಾಡ್ತಾರೆ ಬಿಜೆಪಿಯವರು. ಈಗ ಬಿಜೆಪಿಯವರು ಚಿಕ್ಕಬಳ್ಳಾಪುರ ಚಲೋ ಮಾಡ್ತೀರಾ?. ಬೇಕಿದ್ದರೆ ಚಿಕ್ಕಬಳ್ಳಾಪುರ ದಲ್ಲಿ ಟೀ ಕಾಫಿ ಎಳನೀರು ವ್ಯವಸ್ಥೆ ಮಾಡ್ತೇನೆ.ಚಿಕ್ಕಬಳ್ಳಾಪುರ ಚಲೋ ಮಾಡುವ ನೈತಿಕತೆ ಬಿಜೆಪಿಗೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ಸಿಟ್ಟಿಂಗ್ ಎಂಪಿ ಸುಧಾಕರ್ ಮೇಲೆ ಒಂದಲ್ಲ ಎರಡಲ್ಲ ಮೂರು ಮೂರು ಬಾರಿ ಆರೋಪ ಕೇಳಿ ಬಂದಿದೆ. ಪ್ರಧಾನಿ ಮೋದಿ ಯೆಲ್ಲೋ ಲೈನ್ ಉದ್ಘಾಟನೆಗೆ ಬಂದಾಗ, ಕೆಲವು ಚಿಕ್ಕ ಹುಡುಗರ ತರದ ಸಂಸದರಿದ್ದಾರಲ್ಲ ಅವರು ಕೇಳ್ತಾರಾ ಈ ವಿಷಯವನ್ನು. ಇದೇ ಸಾವು ಬೇರೆ ಕಡೆ ಆಗಿದ್ದರೆ ಮೋದಿ ತಮ್ಮ ಭಾಷಣದಲ್ಲೇ ಹೇಳಿ ಬಿಡುತ್ತಿದ್ದರು. ನಮ್ಮ ಸರ್ಕಾರ ಇದನ್ನೂ ಲಾಜಿಕಲ್ ಎಂಡ್ ಗೆ ಕೊಂಡೊಯ್ಯುತ್ತದೆ. ಬಿಜೆಪಿಯವರಿಂದ ನಿಮ್ಮಿಂದ ಅನ್ಯಾಯ ಆಗಿದೆ.ಹಿಂದೆ ಮಾತನಾಡಿದ ಹಾಗೆ ಈಗಲೂ ಮಾತಾಡುವ ದಮ್ಮು ತಾಕತ್ತು ಅಶೋಕ್ ಗೆ ಛಲವಾದಿ ನಾರಾಯಣ ಸ್ವಾಮಿಗೆ ಇದೆಯಾ? ಸವಾಲು ಹಾಕಿದ್ದಾರೆ.

ಯೆಲ್ಲೋ ಲೈನ್ ಮೆಟ್ರೋ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದೆಲ್ಲ ಮೋದಿಗೆ ಕ್ರೆಡಿಟ್ ಹೋಗಬೇಕು ಅಂತ ಕೆಲವು ಸಂಸದರು ಹೇಳ್ತಾರೆ. ಪುಕ್ಸಟ್ಟೆ ಪ್ರಚಾರ ತೆಗೆದುಕೊಳ್ಳುವುದನ್ನು ಬಿಜೆಪಿ ನೋಡಿ ಕಲಿಬೇಕು. ಬಿಜೆಪಿಯವರು ಯಾವ ಮಟ್ಟಕ್ಕೆ ಹೋಗಿದ್ದಾರೆ ಅಂದ್ರೆ ನಾರ್ಮಲ್ ಆಗಿ ಗಂಡು ಮಕ್ಕಳು ಹುಟ್ಟಿದರೂ ಅವರೇ ಕ್ರೆಡಿಟ್ ತಗೋತಾರೆ. ಬಿಜೆಪಿಯವರು ಚರ್ಚೆ ಮಾಡೋಕೆ ಬಂದರೆ ನಾವು ರೆಡಿ. ಗಾಳಿಯಲ್ಲಿ ಗುಂಡು ಹಾರಿಸಬೇಡಿ, ಅಂಕಿ ಅಂಶಗಳ ಮುಂದೆ ಇಟ್ಟು ಬನ್ನಿ.ಬಿಜೆಪಿಯವರ ಪೌರುಷ ಕ್ಯಾಮರಾ ಮುಂದೆ ಎಂದು ವ್ಯಂಗ್ಯ ಮಾಡಿದ್ದಾರೆ.

ಚುನಾವಣಾ ಆಯೋಗ ರಾಹುಲ್ ಗಾಂಧಿಗೆ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿ ಐದು ರೀತಿಯಲ್ಲಿ ಅಕ್ರಮ ನಡೆದಿದೆ ಎಂದು ರಾಹುಲ್ ಆರೋಪ ಮಾಡಿದ್ದಾರೆ. ನಾಳೆ ಬೆಂಗಳೂರಿಗೆ ರಾಹುಲ್ ಗಾಂಧಿ ಬರ್ತಾರೆ.ಪ್ರತಿಭಟನೆ ಮುಗಿದ ಮೇಲೆ ದಾಖಲೆ ಸಮೇತ ದೂರು ಕೋಡುತ್ತೇವೆ. ನಾವು ಬಿಜೆಪಿ ತರಹ ದಾಖಲೆ ಇಲ್ಲದೆ ಮಾತನಾಡಲ್ಲ. ೫೦ ಸಾವಿರದಷ್ಟು ದಾಖಲೆಗಳು ನಮ್ಮ ಬಳಿ ಇವೆ. ನಾಳೆಯವರೆಗೂ ಕಾಯಲಿ ಎಲ್ಲ ದಾಖಲೆ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.