ಮನೆ Latest News ಸಸ್ಯಕಾಶಿ ಲಾಲ್ ಬಾಗ್ ನಲ್ಲಿ 218ನೇ ಆವೃತ್ತಿಯ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ಸಸ್ಯಕಾಶಿ ಲಾಲ್ ಬಾಗ್ ನಲ್ಲಿ 218ನೇ ಆವೃತ್ತಿಯ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು; ಸಸ್ಯಕಾಶಿ ಲಾಲ್ ಬಾಗ್ ನಲ್ಲಿ 218ನೇ ಆವೃತ್ತಿಯ ಫಲಪುಷ್ಪ ಪ್ರದರ್ಶನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ಬಾರಿ ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವಿಷಯಾಧಾರಿತ ಫ್ಲವರ್ ಶೋ ಏರ್ಪಡಿಸಿಲಾಗಿದೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ತೋಟಗಾರಿಕೆ ಇಲಾಖೆಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಉದಯ್ ಗರುಡಾಚಾರ್ ವಚನಾನಂದ ಸ್ವಾಮೀಜಿ, ಪ್ರಸನ್ನಾನಂದಪುರಿ ಸ್ವಾಮೀಜಿ ಭಾಗಿಯಾಗಿದ್ದರು. ಆದರೆ ತೋಟಗಾರಿಕೆ ಇಲಾಖೆ ಕಾರ್ಯಕ್ರಮಕ್ಕೆ ತೋಟಗಾರಿಕೆ ಇಲಾಖೆಯ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ಅವರೇ ಗೈರಾಗಿದ್ದರು.

ಉದ್ಘಾಟನೆ ಬಳಿಕ  ಬರಿಗಾಲಿನಲ್ಲಿ‌ ಸಿಎಂ ಸಿದ್ದರಾಮಯ್ಯ ಫ್ಲವರ್ ಶೋ ವೀಕ್ಷಣೆ ಮಾಡಿದರು. ಧರಿಸಿದ್ದ ಶೂ ಕಳಚಿ, ಸಿಎಂ ಫ್ಲವರ್ ಶೋ ವೀಕ್ಷಣೆ ಮಾಡಿದರು. ಹೂಗಳಿಂದ ನಿ‌ರ್ಮಾಣವಾಗಿರುವ ಕೋಟೆ ಮುಂದೆ ಸಿಎಂ ಫೋಟೋ‌ಗೆ ಪೋಸ್ ಕೊಟ್ರು. ಇಲಾಖೆ‌ಯ ಹಿರಿಯ ಅಧಿಕಾರಿಗಳೊಂದಿಗೆ‌ ಫೋಟೋಗೆ ಸಿಎಂ ಪೋಸ್ ನೀಡಿದ್ರು.

ಬಳಿಕ ಮಾತನಾಡಿದ ಸಿಎಂ ಈ ವರ್ಷದ 218ನೇ ಫ್ಲವರ್ ಶೋ ಉದ್ಘಾಟಿಸಿದೆ. ಇದು ಕಿತ್ತೂರು ರಾಣಿ ಚನ್ನಮ್ಮ, ರಾಯಣ್ಣರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ. ಚನ್ನಮ್ಮ ಬ್ರಿಟೀಷರ ವಿರುದ್ಧ ಎರಡು ಯುದ್ಧ ಮಾಡಿದ್ರು.ಮೊದಲ‌ ಯುದ್ದದಲ್ಲಿ ಜಯ ಸಿಕ್ತು. ನಂತರ ಎರಡನೇ ಯುದ್ಧದಲ್ಲಿ ರಾಣಿ ಚನ್ನಮ್ಮ ಸೆರೆ ಆಯ್ತು. ಚನ್ನಮ್ಮ ಬಲಗೈ ಬಂಡನೇ ರಾಯಣ್ಣ. ರಾಯಣ್ಣ ವೀರಾವೇಶದಿಂದ ಹೋರಾಟ ಮಾಡಿದವರು. ರಾಯಣ್ಣನಿಗೆ ನ್ಯಾಯಾಲಯದಲ್ಲಿ‌ಗಲ್ಲು ಶಿಕ್ಷೆ ಆಯ್ತು. 1931 ರಲ್ಲಿ ಗಲ್ಲು ಶಿಕ್ಷೆ ಆಯ್ತು. ಸ್ವಾತಂತ್ರ್ಯ ದಿನಚರಣೆ ದಿನ ಆಯ್ತು. ರಾಯಣ್ಣ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ರು ಎಂದರು.

ತೋಟಗಾರಿಕೆ ಇಲಾಖೆ ಚನ್ನಮ್ಮ, ರಾಯಣ್ಣನಿಗೆ ಗೌರವ ಸಲ್ಲಿಸಿದೆ. 200 ಆಯ್ತು ಅವರು ಹೋಗಿ. ರಾಯಣ್ಣ ಹಿಂದುಳಿದ ಜಾತಿಗೆ ಸೇರಿದವರು. ಅನೇಕ‌ ಜನ ಚನ್ನಮ್ಮ ಆಸ್ಥಾನದಲ್ಲಿದ್ದರು. ಎಲ್ಲ ಜಾತಿಯವರು ಚನ್ನಮ್ಮ ಸೈನ್ಯದಲ್ಲಿದ್ದರು. ಜಾತ್ಯಾತೀತವಾಗಿ ಚನ್ನಮ್ಮ ಎಲ್ಲರನ್ನೂ ಬಳಸಿಕೊಂಡ್ರು. ಚನ್ನಮ್ಮ ಜಯಂತಿಯನ್ನ ಆಚರಣೆ ತೀರ್ಮಾನ ಮಾಡಿದ್ದೆವು. 110 ಎಕರೆ ಜಾಗವನ್ನ ರಾಯಣ್ಣ ಗಲ್ಲಿಗೇರಿಸಿದ ಜಾಗದಲ್ಲಿ ಪ್ರಾಧಿಕಾರ ಮಾಡ್ತಿದ್ದೇವೆ. ಸರ್ಕಾರದಿಂದ ಜಯಂತೋತ್ಸವ ಮಾಡ್ತಿದ್ದೇವೆ.ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನ ಸ್ಮರಿಸಿಕೊಳ್ಳಬೇಕು ಎಂದು ತಿಳಿಸಿದ್ರು.

ಬಳಿಕ ಇಂಡಿಯಾ ಕೂಟದಲ್ಲಿ ಭಾಗಿಯಾಗ್ತಿದ್ದೇನೆ. ಊಟಕ್ಕೆ‌ ಕರೆದಿದ್ದಾರೆ, ಭಾಗಿ ಆಗ್ತೇನೆ.ದೆಹಲಿಗೆ ಹೋಗ್ತಿದ್ದೇನೆ ಎಂದು ಹೊರಟರು. ಈ ವೇಳೆ ನಾಳೆ ಕಾಂಗ್ರೆಸ್ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿ ನಾಳೆ ಪ್ರತಿಭಟನೆ ಇದೆ.ಯಾಕೆ ಗೊತ್ತ ಈ ಬಿಜೆಪಿಯವರು ಮತಗಳ್ಳತನ ಮಾಡಿದ್ದಾರೆ. ಹೀಗಾಗಿ ನಾಳೆ ಪ್ರತಿಭಟನೆ ಮಾಡ್ತಿದ್ದೇವೆ ಎಂದರು. ಧರ್ಮಸ್ಥಳ ಗಲಾಟೆ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಆಗುತ್ತೆ.ಕಾನೂನು ಎಲ್ಲರಿಗೆ ಒಂದೇ ಎಂದ ಅವರು ಚಿಕ್ಕಬಳ್ಳಾಪುರದಲ್ಲಿ ಚಾಲಕ ಆತ್ಮಹತ್ಯೆ ಬಗ್ಗೆ ಕೇಳಿದ್ದಕ್ಕೆ ಮಾಹಿತಿ ಗೊತ್ತಿಲ್ಲ, ವಿಚಾರ ಮಾಡ್ತೀನಿ ಎಂದು ತೆರಳಿದ್ರು.