ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಿಢೀರ್ ಕೆ.ಆರ್.ಮಾರ್ಕೆಟ್ ರಸ್ತೆಯಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಮಾಡಿದರು. ಈ ವೇಳೆ ಸಿಎಂಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ ಸಾಥ್ ನೀಡಿದರು.
ವಿಕ್ಟೋರಿಯಾ ಆಸ್ಪತ್ರೆಯ ಹೊರ ರೋಗಿಗಳ ವಿಭಾಗಗಕ್ಕೆ ಭೇಟಿ ನೀಡಿದ ಸಿಎಂ ರೋಗಿಗಳ ಸಮಸ್ಯೆ ಆಲಿಸಿದರು. ಈ ವೇಳೆ ಮಹಿಳಾ ರೋಗಿಗಳು ಅಳುತ್ತಲೇ ಸಿಎಂ ಮುಂದೆ ಸಮಸ್ಯೆ ಹೇಳಿಕೊಂಡ್ರು. ಏನು ತಿಂಡಿ, ಊಟ ಕೊಡ್ತಾರೆ?. ಚಿಕಿತ್ಸೆ ಸರಿಯಾಗಿ ಕೊಡ್ತಿದ್ದಾರಾ? ಎಂಬ ಮಾಹಿತಿಯನ್ನು ಸಿಎಂ ಪಡ್ಕೊಂಡ್ರು. ಇನ್ನು ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ವಾರ್ಡ್, ಸ್ಪೆಷಲ್ ವಾರ್ಡ್ ಸಿಎಂ ಭೇಟಿ ನೀಡಿದರು.
ಸ್ಪೆಷಲ್ ವಾರ್ಡ್ ಗೆ ಭೇಟಿ ಕೊಟ್ಟ ಸಿಎಂ ದಾವಣಗೆಯ ಮಹಿಳೆಯೊಬ್ಬರ ಬಳಿ ಆಪರೇಷನ್ ಆಗಿದ್ಯಾ ಎಂದರು. ಕನ್ನಡ ಮಾಲೂಂ ಹೇ ಎಂದು ಕೇಳಿದ್ದಾರೆ. ಎಷ್ಟು ದಿನದಿಂದ ಇದ್ದೀರಾ? ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರಾ?. ಡಾಕ್ಟರ್ ಚೆನ್ನಾಗಿ ನೋಡಿಕೊಳ್ತಿದ್ದಾರಾ?. ಅಡ್ಮಿಟ್ ಆಗುವಾಗ ತೊಂದರೆ ಆಯ್ತಾ? ಎಂದು ಸಿಎಂ ಕೇಳಿದ್ದಾರೆ. ಆಗ ಮಹಿಳೆ ಚೆನ್ನಾಗಿ ನೋಡಿಕೊಳ್ತಿದ್ದಾರೆ, ಊಟ, ತಿಂಡಿ ಕೊಡ್ತಿದ್ದಾರೆ ಎಂದು ವಿವರಿಸಿದ್ದಾರೆ.
ಬಳಿಕ ಮಾಸ್ಕ್ ಧರಿಸಿ ಸಿಎಂ ಪುರುಷರ ಜನರಲ್ ವಾರ್ಡ್ ಮತ್ತು ಶಸ್ತ್ರ ಚಿಕಿತ್ಸಾ ವಾರ್ಡ್ ಗೆ ಭೇಟಿ ನೀಡಿದ್ದಾರೆ. ರೋಗಿಗಳು ಸೇವಿಸುವ ಆಹಾರ ಪರಿಶೀಲಿಸಿದ್ದಾರೆ. ವಿಕ್ಟೋರಿಯಾದ (ಟ್ರೋಮಾ) ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗಕ್ಕೆ ದಿಢೀರ್ ಭೇಟಿ ಕೊಟ್ಟಿದ್ದಾರೆ. ಇನ್ನು ವಿಕ್ಟೋರಿಯಾ ಬಳಿಕ ವಾಣಿ ವಿಲಾಸ ಆಸ್ಪತ್ರೆಗೆ ಸಿಎಂ ದಿಢೀರ್ ಭೇಟಿ ಕೊಟ್ಟು ಅಲ್ಲಿ ತಾಯಿ-ಮಗುವಿನ ಆರೋಗ್ಯ ವಿಚಾರಿಸಿದ್ದಾರೆ.
ಇದೇ ವೇಳೆ ಒಪಿಡಿ ರೋಗಿಗಳು ಕ್ಯೂ ನಲ್ಲಿ ಇದ್ರು. ಅವರ ಬಳಿ ಮಾತನಾಡಿದ್ದಾರೆ. ಡಾಕ್ಟರ್ ಚೆನ್ನಾಗಿ ನೋಡಿಕೊಳ್ತಾರೆ. ಊಟ ಕೊಡ್ತಿದ್ದಾರೆ ಅಂತ ಹೇಳಿದ್ದಾರೆ. ಬಳಿಕ ಮಾತನಾಡಿದ ಸಿಎಂ ವೈದ್ಯರು ಸಹಾನುಭೂತಿಯಿಂದ ನೋಡಿಕೊಳ್ಳಬೇಕು. ಉಚಿತ ಸೇವೆ ಇದೆ, ಒತ್ತಡ ಇರುತ್ತೆ. ಒಂದು ರೂಪಾಯಿಯೂ ತೆಗೆದುಕೊಳ್ಳಬಾರದು ಅಂತ ಹೇಳಿದ್ದೇನೆ. 40ಕ್ಕೂ ಹೆಚ್ಚು ಡಿಲೆವರಿ ಆಗುತ್ತೆ. ಆಂಬ್ಯುಲೆನ್ಸ್ ಸಮಸ್ಯೆ ಸರಿಪಡಿಸುತ್ತಿದ್ದೇವೆ. ಆರೋಗ್ಯ ಇಲಾಖೆ ಸಮಸ್ಯೆ ಬಗೆಹರಿಸುತ್ತಿದೆ. ಪಾರ್ಕಿಂಗ್ ದಂಧೆ ನನ್ನ ಗಮನಕ್ಕೆ ಬಂದಿಲ್ಲ. ಆಸ್ಪತ್ರೆಯಲ್ಲಿರುವ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಿ ಎಂದು ಸ್ಥಳದಲ್ಲೇ ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ ಗೆ ಸಿಎಂ ಸೂಚನೆ ಕೊಟ್ಟಿದ್ದಾರೆ.
ಇನ್ನು ಆಸ್ಪತ್ರೆಯಲ್ಲಿ ಆಡಳಿತ ಯಂತ್ರ ಕುಸಿತ ಮತ್ತು ವೈದ್ಯರ ಕೊರತೆ ವಿಚಾರದ ಬಗ್ಗೆ ಮಾತನಾಡಿ ಇದರ ಬಗ್ಗೆ ಯಾವ ರೋಗಿಯೂ ಹೇಳಿಲ್ಲ. ನೀವು ಹೇಳ್ತಿದ್ದೀರಿ, ಜನರನ್ನ ಕೇಳೋಣ ಬನ್ನಿ ಎಂದು ಹಾರಿಕೆಯ ಉತ್ತರ ಕೊಟ್ಟಿದ್ದಾರೆ. ಇದೇ ವೇಳೆ : ಚಿಕಿತ್ಸೆಗೆ ಬಂದಿದ್ದ ರೋಗಿ ಯೋಗೇಶ್ ಎಂಬವರು ಮಾತನಾಡಿ ಎಷ್ಟು ದೂರದಿಂದಲೂ ಬಂದ್ರೆ ಎರಡು ತಾಸು ಮಾಡಬೇಕು. ಊಟಕ್ಕೆ ಹೋದ್ರೆ ಎರಡು ಗಂಟೆ ಹೋಗ್ತಾರೆ. ಬಂದ್ರು ಆಡಳಿತ ವರ್ಗವನ್ನ ಕೇಳಿ ಸಿಎಂ ಹೋದ್ರು. ರೋಗಿಗಳ ಬಳಿ ಬಂದು ಸಮಸ್ಯೆ ಕೇಳಬೇಕು. ಸಿಎಂ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಇಲ್ಲಿನ ಅಧಿಕಾರಿಗಳು ಆಡಳಿತ ಯಂತ್ರ ಬಿಗಿ ಮಾಡಬೇಕು.ಕಂಪ್ಯೂಟರ್ ಆಪರೇಟರ್ಸ್ ಫೋನ್ ನಲ್ಲೇ ಬ್ಯುಸಿ ಇರ್ತಾರೆ ಎಂದು ಆರೋಪಿಸಿದ್ದಾರೆ.