ಮನೆ Latest News ರಾಹುಲ್ ಗಾಂಧಿ, ಸಿಎಂ ಡಿಸಿಎಂ ಅವರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ; ಮಾಜಿ ಸಂಸದ ಡಿಕೆ...

ರಾಹುಲ್ ಗಾಂಧಿ, ಸಿಎಂ ಡಿಸಿಎಂ ಅವರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ; ಮಾಜಿ ಸಂಸದ ಡಿಕೆ ಸುರೇಶ್

0

ಬೆಂಗಳೂರು; ರಾಹುಲ್ ಗಾಂಧಿ, ಸಿಎಂ ಡಿಸಿಎಂ ಅವರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಮತಗಳ್ಳತನ ಆರೋಪ ವಿಚಾರದ ಬಗ್ಗೆ ಮಾತನಾಡಿ ಓಟರ್ ಲಿಸ್ಟ್ ನಲ್ಲಿ ಸಾಕಷ್ಟು ಗೊಂದಲ ಇರುವುದನ್ನು ನೋಡಿದ್ದೇವೆ. ಮತಪಟ್ಟಿ ಸಂಖ್ಯೆ ಏರಿಸಿದ್ದು ಡಿಲೀಟ್ ಮಾಡಿದ್ದು ನೋಡಿದ್ದೇವೆ.ರಾಹುಲ್ ಗಾಂಧಿ, ಸಿಎಂ ಡಿಸಿಎಂ ಅವರವರ ಅನಿಸಿಕೆ ಹೇಳಿದ್ದಾರೆ. ಅವರ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ. ಅವರೇ ಹೇಳಿದ್ದರಿಂದ ನಾನು ಹೆಚ್ಚಿಗೆ ಹೇಳುವುದಿಲ್ಲ ಎಂದಿದ್ದಾರೆ.

ಮಹದಾಯಿ ಯೋಜನೆಗೆ ಗೋವಾ ಕ್ಯಾತೆ ವಿಚಾರದ ಬಗ್ಗೆ ಮಾತನಾಡಿದ ಅವರು ಗೋವಾ ನಮ್ಮ ನೆರೆ ರಾಜ್ಯ, ಎರಡೂ ರಾಜ್ಯಗಳು ಅನ್ಯೋನ್ಯವಾಗಿ ಇವೆ. ಆದರೆ ಬಹಳಷ್ಟು ವರ್ಷಗಳಿಂದ ಇಲ್ಲ ಸಲ್ಲದ ಖ್ಯಾತ ತೆಗೆದುಕೊಂಡು ತೊಂದರೆ ಕೊಡ್ತಿದ್ದಾರೆ. ಸುಪ್ರಿಂ ಸ್ಪಷ್ಟ ತೀರ್ಪು ಕೊಟ್ಟ ಮೇಲೂ ನೀರಾವರಿ ಯೋಜನೆ ಆಗುತ್ತಿಲ್ಲ. ಬಿಜೆಪಿ ಅವರ ಅಧಿಕಾರ- ಕೇಂದ್ರ ಸರ್ಕಾರವನ್ನು ಬಳಸಿಕೊಂಡು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವುದು ಎದ್ದು ಕಾಣುತ್ತದೆ. ಕೇಂದ್ರಕ್ಕೆ ನಾನು ಒತ್ತಾಯ ಮಾಡುವುದು ಆದಷ್ಟು ಬೇಗ ಕುಡಿಯುವ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲಿ. ಬಿಜೆಪಿಗೆ ಸುಮಾರು ೨೦ ಕ್ಕೂ ಹೆಚ್ಚು ಸ್ಥಾನ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಮೂರು ಬಾರಿ ಬರಲು ಕರ್ನಾಟಕದ ಕೊಡುಗೆ ದೊಡ್ಡದು. ನಮ್ಮ ಸಂಸದರು ನ್ಯಾಯ ಕೊಡಿಸಲು ಹೋರಾಟ ಮಾಡ್ತಿಲ್ಲ. ಗೋವಾ ಕರ್ನಾಟಕ ಇಬ್ಬರನ್ನೂ ಕರೆದು ಸರಿಪಡಿಸಲಿ. ಅದಕ್ಕೆ ನಮ್ಮ ಕೇಂದ್ರ ಮಂತ್ರಿಗಳು ಒತ್ತಾಯ ಮಾಡಲಿ ಎಂದಿದ್ದಾರೆ.

ಪ್ರಹ್ಲಾದ ಜೋಷಿ ಯವರು ಕಳೆದ ೧೦ ವರ್ಷಗಳಿಂದ ಮಂತ್ರಿಯಾಗಿದ್ದಾರೆ. ಅವರೇ ಅವರ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ ಅಂದ್ರೆ ಅವರನ್ನು ಯಾರು ನಂಬ್ತಾರೆ?.ಅವರು ಪ್ರಧಾನಿ ಗೆ ಬಹಳ ಹತ್ತಿರದವರು. ಅವರು ಮನಸ್ಸು ಮಾಡಿದೇ ಮಹದಾಯಿ ಯೋಜನೆ ದೊಡ್ಡದಲ್ಲ. ಆದರೆ ಪ್ರಹ್ಲಾದ ಜೋಷಿಯವರಿಗೆ ಯೋಜನೆ ಬೇಕಾಗಿಲ್ಲ ಎಂದು ತಿಳಿಸಿದ್ದಾರೆ.ಸುರ್ಜೆವಾಲಾ ಅಧಿಕಾರಿಗಳ ಮೀಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ಮಾಹಿತಿ ಇಲ್ಲ, ಯಾರಾದ್ರೂ ಸಚಿವರು ಹೇಳಿದ್ದಾರಾ?. ರಾಜಣ್ಣ ಬಹಳ ಹಿರಿಯರು. ರಾಜ್ಯದ ಎಲ್ಲಾ ಮಾಹಿತಿ ಅವರಿಗೆ ಇರುತ್ತದೆ. ಅವರು ಅಷ್ಟು ದೊಡ್ಡ ಮಂತ್ರಿ ಆದಮೇಲೆ ಅವರಿಗೆ ಮಾಹಿತಿ ಇರಬಹುದು.ನಾನು ಸಣ್ಣ ಕಾರ್ಯಕರ್ತ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ.