ಬೆಂಗಳೂರು;ಸಣ್ಣ ವ್ಯಾಣಿಜ್ಯೋದ್ಯಮಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಜಿಎಸ್ಟಿ ನೊಟೀಸ್ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸಣ್ಣ ವ್ಯಾಪಾರಿಗಳ ಜೊತೆ ಚರ್ಚೆ ಮಾಡಿದೆ. ಸಭೆಯಲ್ಲಿ ಕಂದಾಯ ಸಚಿವ, ಪೊನ್ನಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಭಾಗಿಯಾಗಿದ್ದರು. ಸಂಘ ಸಂಸ್ಥೆಗಳ ಮುಖ್ಯಸ್ಥರು, FKCCI ನವರು ಸಹ ಬಂದಿದ್ರು. ಚರ್ಚೆ ಮಾಡಿ ಅಹವಾಲು ಕೇಳಿದ್ದೇವೆ. ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯವರು ನೋಟಿಸ್ ಕೊಟ್ಟಿದ್ದಾರೆ. ಸುಮಾರು 9 ಸಾವಿರ ನೋಟಿಸ್ ಕೊಟ್ಟಿದ್ದಾರೆ. 40 ಲಕ್ಷಕ್ಕಿಂತ ಹೆಚ್ಚು ಕಾಂಪೋಸಿಷನ್ ಟ್ಯಾಕ್ಸ್ . GST ತೆರಿಗೆ ಹಾಕೋದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಲ್ಲ. 1% ಟ್ಯಾಕ್ಸನ್ನ ಹಾಕಿದ್ದಾರೆ. 40 ಲಕ್ಷಕ್ಕಿಂತ ಜಾಸ್ತಿ ಟರ್ನ್ ಓವರ್ ಜಾಸ್ತಿ ಇದ್ದವರಿಗೆ ನೋಟಿಸ್ ಕೊಟ್ಟಿದ್ದಾರೆ ಎಂದರು.
ಹಣ್ಣು ವ್ಯಾಪಾರಿಗಳಲ್ಲದೆ ಬೇರೆಯವರಿಗೂ ನೋಟಿಸ್ ಕೊಟ್ಟಿದ್ದಾರೆ. ಮೂರು ವರ್ಷಗಳ ಟ್ಯಾಕ್ಸ್ ಕೊಡಬೇಕು ಅಂತ ಹೇಳಿದ್ದಾರೆ.ತೆರಿಗೆಯಿಂದ ವಿನಾಯ್ತಿಯಿಂದ ನೋಟಿಸ್ ಕೊಟ್ಟರೂ ವಸೂಲಿ ಮಾಡಿದ್ದಾರೆ. ನೋಟಿಸ್ ಬಂದಾಗಿನಿಂದ ಗೊಂದಲ ನಿರ್ಮಾಣ ಆಗಿದೆ. ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಲು ಎಲ್ಲರೂ ಒಪ್ಪಿಕೊಂಡಿದ್ದಾರೆ. ಸಹಾಯವಾಣಿ ಪ್ರಾರಂಭಿಸುವಂತೆ ತಿಳಿಸಿದ್ದಾರೆ .ಈಗಾಗಲೇ ಸಹಾಯವಾಣಿ ಇದೆ, ಹೆಚ್ಚು ಪರಿಣಾಮಕಾರಿ ಮಾಡಲು ಹೇಳಿದ್ದೇನೆ. ಗೊಂದಲ ನಿವಾರಣೆ ಆಗಬೇಕಾದರೆ ಸರಿಯಾದ ರೀತಿಯಲ್ಲಿ ಮಾಹಿತಿ ಇಲ್ಲ, ಜಾಗೃತಿ ಉಂಟುಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ, FKCCI ಸೇರಿದಂತೆ ಬಹುತೇಕರು ಮಾಡುವುದಾಗಿ ಹೇಳಿದ್ದಾರೆ. ಕಾರ್ಯಗಾರ ಮಾಡುವ ಕಡೆ ವಾಣಿಜ್ಯ ತೆರಿಗೆ ಇಲಾಖೆಯವರು ಹೋಗ್ತಾರೆ ಎಂದು ತಿಳಿಸಿದರು.
ಇನ್ನು ಜು.25ರಂದು ವಾಣಿಜ್ಯೋದ್ಯಮಿಗಳು ಬಂದ್ ಕರೆ ನೀಡಿರುವ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುವುದಾಗಿ ಹೇಳಿದ್ರು.ಬಂದ್ ವಾಪಾಸ್ ತೆಗೆದುಕೊಳ್ಳಲು ಮನವಿ ಮಾಡಿದ್ದೆ. ಬಂದ್, ಪ್ರತಿಭಟನೆ ವಾಪಾಸ್ ತೆಗೆದುಕೊಳ್ಳ ಒಪ್ಪಿದ್ದಾರೆ.ಎಲ್ಲಾ ಹೋರಾಟ ಕೈಬಿಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ನೋಂದಣಿ ಕಡ್ಡಾಯ. ವಿನಾಯ್ತಿ ಇದ್ದವರಿಗೆ ನೋಂದಣಿ ಅಗತ್ಯ ಇಲ್ಲ. ಹಾಲು, ಹಣ್ಣು, ತರಕಾರಿ, ಎಳನೀರು, ನೀರು, ಹೂ ರೀತಿಯ ಪದಾರ್ಥಗಳಿಗೆ ತೆರಿಗೆ ಸಂಗ್ರಹ ಇಲ್ಲ. ಬ್ರೆಡ್, ಹಾಲು, ಆಹಾರ ಪದಾರ್ಥಗಳಿಗೆ ತೆರಿಗೆ ಸಂಗ್ರಹ ಇಲ್ಲ.
ಅಗತ್ಯ ಸೇವೆಗಳಿಗೆ ಯಾವುದೇ ತೆರಿಗೆ ಸಂಗ್ರಹ ಇಲ್ಲ. ಎಲ್ಲರೂ ಒಪ್ಪಿಕೊಂಡಿದ್ದಾರೆ. ಗೊಂದಲಗಳು ನಿವಾರಣೆ ಆಗಿದೆ.ಪ್ರತಿಭಟನಾ ರ್ಯಾಲಿ ವಾಪಾಸ್ ಪಡೆದಿದ್ದಾರೆ. ತೆರಿಗೆ ಸಂಗ್ರಹದಿಂದ ವಾರ್ಷಿಕ ಸುಮಾರು 2 ಸಾವಿರ ಕೋಟಿಯಷ್ಟು ಲಾಭ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ತೆರಿಗೆ ವಸೂಲಿ ಎಂಬ ಪ್ರಹ್ಲಾದ್ ಜೋಷಿ ಹೇಳಿಕೆ ಪ್ರತಿಕ್ರಿಯಿಸಿದ ಅವರು ಅವರು ಸುಳ್ಳು ಹೇಳ್ತಿದಾರೆ. ಕೇಂದ್ರ ಜಿಎಸ್ ಟಿ ಹಾಕುತ್ತೆ. ವಸೂಲಿ ಮಾಡುವವರು ಮಾತ್ರ ನಾವು. ನೋಟಿಸ್ ಕೊಟ್ಟ ಮೇಲೆ ಅಲ್ವಾ ನಾವು ಹಾಕೋದು ಎಂದ ಅವರು ದೆಹಲಿ ಪ್ರವಾಸ ವಿಚಾರದ ಬಗ್ಗೆ ಮಾತನಾಡಿ ಒಬಿಸಿ ಸಭೆ ಇದೆ. ನಾನು ಸದಸ್ಯ ಇದ್ದೇನೆ. ಕರೆದಿದ್ದಾರೆ, ಹೀಗಾಗಿ ಹೋಗ್ತಿದ್ದೇನೆ. ಹೈಕಮಾಂಡ್ ಭೇಟಿಗೆ ಸಮಯ ನಿಗದಿ ಆಗಿಲ್ಲ ಎಂದರು.
ಗ್ಯಾರೆಂಟಿ ಯೋಜನೆಯಿಂದ 2 ಲಕ್ಷ 5 ಸಾವಿರ ತಲಾ ಆದಾಯ ಇದೆ. ಬಿಜೆಪಿಯವರಿಗೆ ಜ್ಞಾನೋದಯ ಆಗಿದೆ ಎಂದ ಅವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ 3 ತಿಂಗಳಿನಲ್ಲಿ ಕೊಡಬೇಕು ಅಂತ ಹೇಳಿದ್ದೇನೆ. ನಾಳೆ ಆದೇಶ ಆಗುತ್ತೆ. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ನೊಳಗೆ ಕೊಡಬೇಕು ಎಂದರು.