ಮನೆ Latest News ಎಲ್ಲರಿಗೂ ಅನ್ನ ಕೊಟ್ಟೆ, ಸುಮ್ಮನೇ ಕೊಟ್ಟಿಲ್ಲ, ಅನುಭವದ ಮೇಲೆ ಕೊಟ್ಟಿದ್ದೇನೆ; ಸಿಎಂ ಸಿದ್ದರಾಮಯ್ಯ ಹೇಳಿಕೆ

ಎಲ್ಲರಿಗೂ ಅನ್ನ ಕೊಟ್ಟೆ, ಸುಮ್ಮನೇ ಕೊಟ್ಟಿಲ್ಲ, ಅನುಭವದ ಮೇಲೆ ಕೊಟ್ಟಿದ್ದೇನೆ; ಸಿಎಂ ಸಿದ್ದರಾಮಯ್ಯ ಹೇಳಿಕೆ

0

ಬೆಂಗಳೂರು: ಎಲ್ಲರಿಗೂ ಅನ್ನ ಕೊಟ್ಟೆ, ಸುಮ್ಮನೇ ಕೊಟ್ಟಿಲ್ಲ, ಅನುಭವದ ಮೇಲೆ ಕೊಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ರಾಜ್ಯ ಅಹಲ್ಯಾಬಾಯಿ ಹೋಳ್ಕರ್ ಮಹಿಳಾ ಸಂಘದ ವತಿಯಿಂದ ನಡೆದ ರಾಣಿ ಅಹಲ್ಯ ಬಾಯಿ ಹೋಳ್ಕರ್ ಅವರ ೩೦೦ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಇವತ್ತು ಅಹಲ್ಯಾಬಾಯಿ ಅವರ ೩೦೦ನೇ ಜಯಂತಿ ಹಾಗೂ ಸಂಘದ ರಜತ ಮಹೋತ್ಸವ ಇದೆ. ಈ ಕಾರ್ಯಕ್ರಮ ವನ್ನ ಅತ್ಯಂತ ಸಂತೋಷ ದಿಂದ ಉದ್ಘಾಟಿಸಿದ್ದೇನೆ. ಎಲ್ಲರಿಗೂ ಶುಭ ಕೋರುತ್ತೇನೆ. ಯಾವುದೇ ಒಂದು ಸಂಘಟನೆ ಅದರಲ್ಲೂ ಮಹಿಳಾ ಸಂಘಟನೆ ೨೫ ನೇ ವರ್ಷ ಆಚರಿಸುತ್ತಿರೋದು ಸಂತೋಷ ದ ವಿಚಾರ. ಇದೊಂದು ಮೈಲಿಗಲ್ಲು, ಸಂಘಟನೆ ಅತ್ಯಂತ ಅವಶ್ಯಕ. ಮಹಿಳೆಯರು , ಪುರುಷರು ಸಂಘಟನೆ ಆಗಬೇಕು. ಜಾತಿ ವ್ಯವಸ್ಥೆ ಯ ಸಮಾಜದಲ್ಲಿ ಸಂಘಟನೆ ಅತೀ ಮುಖ್ಯ.ಅದಕ್ಕೆ ಅಂಬೇಡ್ಕರ್ ಅವ್ರು ಇಂತಹ ಸಮಾಜದಲ್ಲಿ ಶಿಕ್ಷಣ, ಸಂಘಟನೆ, ಹೋರಾಟ ಮೂರು ಮಂತ್ರ ಕೊಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ.

ಹೇಗೆ ಶೂದ್ರ ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರೂ, ಅದೇ ರೀತಿಯಲ್ಲಿ ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತ ರಾಗಿದ್ದರು. ಮುಂದುವರೆದ ವರ್ಗದ ಮಹಿಳೆಯರು ವಂಚಿತರಾಗಿದ್ದರು. ಈ ಸಂಘವನ್ನ ಯಲ್ಲಮ್ಮನವರು ಪ್ರಾರಂಭ ಮಾಡಿದ್ರು. ವಯಸ್ಸಿನಲ್ಲಿ ಯಲ್ಲಮ್ಮ ದೊಡ್ಡವರು. ನನಗೆ 78 ವಯಸ್ಸು, ಅವರಿಗೆ  81 ವಯಸ್ಸು. ವಿದ್ಯಾಭ್ಯಾಸ ಕೊಡಿಸಿದಕ್ಕೆ ಯಲ್ಲಮ್ಮ ಅವರ ತಂದೆ ತಾಯಿಗೆ ಅಭಿನಂದನೆಗಳು. ನಾನು ಬಿಎಸ್ಸಿನಲ್ಲಿ ಮೇಜರ್ ವಿಷ್ಯ ಇದ್ವಿ. ಆಗ ಗ್ರೇ ಮ್ಯಾಟರ್ ಹುಡುಗಿಯ ರಲ್ಲಿ ಕಡಿಮೆ ಇತ್ತು. ಹೆಣ್ಮಕ್ಕಳು ಅಂತರಿಕ್ಷ ಯಾನ, ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ, ಡಾಕ್ಟರ್, ಇಂಜಿನಿಯರಿಂಗ್ ಮಾಡುತ್ತಿದ್ದಾರೆ. ನೂರಕ್ಕೆ ನೂರು ಅಂಕ ತೆಗೆದುಕೊಳ್ಳುತ್ತಿದ್ದಾರೆ. ೬೩೫ ಅಂಕಣದಲ್ಲಿ ಎಲ್ಲಾ ಅಂಕ ಪಡೀತಿದ್ದಾರೆ, ಶಿಕ್ಷಣ ಯಾರ ಸ್ವತ್ತು ಅಲ್ಲ. ಅವಕಾಶ ಸಿಕ್ಕಬೇಕು ಅಷ್ಟೇ, ಅದನ್ನು ಬಳಸಿಕೊಂಡು ಮೇಲೆ‌ ಬರೋದು ಬುದ್ದಿವಂತಿಕೆ ಎಂದಿದ್ದಾರೆ.

ಇನ್ನು ತಮ್ಮ  ಭಾಷಣದ ವೇಳೆ ಬಾಲ್ಯದ ಗುರುಗಳನ್ನು ನೆ ಸಿಎಂ ಸಿದ್ದರಾಮಯ್ಯ ನೆನೆದಿದ್ದಾರೆ. ಶಿಕ್ಷಣ ಯಾರ ಸ್ವತ್ತು ಅಲ್ಲ. ರಾಯಚೂರಿನ ವಿದ್ಯಾರ್ಥಿನಿ 625 ಕ್ಕೆ 625 ಕ್ಕೆ ತೆಗೆದುಕೊಂಡಿದ್ದಾಳೆ. ಕುರುಬರಿಗೆ ಯಾಕೆ ವಿದ್ಯೆ ಎಂದು ಅಜ್ಜಿ ಹೇಳ್ತಾ ಇದ್ಲು. ಅಂತಹವರ ಮನೆಯಲ್ಲಿ ನಾನು ಹುಟ್ಟಿದ್ದು‌. ನಮ್ಮ ಅವ್ವ, ಅಪ್ಪ ನಾನು ವಿದ್ಯಾವಂತರು ಆಗಬೇಕು ಹಠ ಮಾಡಿದ್ರು.ನಾನು ವಿದ್ಯಾವಂತ, ನನ್ನ ತಮ್ಮಿಂದರು ಅವಿದ್ಯಾವಂತರು. ನಮ್ಮ ಅಣ್ಣ ಒಬ್ಬ 4 ಕ್ಲಾಸ್ ಓದಿದ. ನಮ್ಮ ಅಕ್ಕಂದಿರು ಅವಿದ್ಯಾವಂತರು‌‌. ನಾನು ಲಾ ಓದಿ, ಸಿಎಂ ಆಗಿದ್ದೇನೆ. ಅಹಲ್ಯ ಬಾಯಿ ಬಗ್ಗೆ ಪುಸ್ತಕ ಬರೆದಿದ್ದಾರೆ. ಪ್ರತಿಭೆಯಿದೆ ಅವಕಾಶ ಸಿಗಬೇಕು.ವೀರ ಮಕ್ಕಳ ಜನಪದ ಕಲೆ, ಅದರ ಗುರು ನಂಜೇಗೌಡ. ನಮ್ಮ ಅಪ್ಪ ವೀರ ಮಕ್ಕಳ ಕುಣಿತಕ್ಕೆ ಸೇರಿಸಿದ್ದರು.ನಂಜೇಗೌಡ ಅಕ್ಷರ ಕಲಿಸದೇ ಹೋಗಿದ್ದರೆ, ರಾಜಪ್ಪ ಮೇಷ್ಟ್ರು ಅಕ್ಷರ ಕಲಿಸದೇ ಹೋಗಿದ್ದರೆ ಓದುತ್ತಿರಲಿಲ್ಲ. ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಗ್ಯಾರಂಟಿ ಯೋಜನೆ ಕೋಡೋದ್ರಿಂದ ಸೋಮಾರಿಗಳಾಗ್ತೀರಾ?. ಇನ್ನೂ ಆ್ಯಕ್ಟೀವ್ ಆಗುತ್ತೀರಾ ಅಂತ ಮಹಿಳೆ‌ ಹೇಳ್ತಾರೆ.ಪುಕ್ಸಟ್ಟೆ ಅಕ್ಕಿ ಕೊಟ್ರೆ ಸೋಮಾರಿ ಆಗ್ತಾರೆ ಅಂತ ಹೇಳ್ತಾರೆ. ಹಿಂದೆ ಬಿಜೆಪಿ ಶಾಸಕರೊಬ್ಬರು ಪ್ರಶ್ನೆ ಕೇಳಿದ್ದರು. ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದಿರಿ, ಸೋಮಾರಿ ಮಾಡಿಬಿಟ್ಟಿದ್ದೀರಿ ಅಂದರು. ಆದ್ರೆ ನಾನು ಹೇಳಿದ್ದೆ, ಹಸಿವಿನಿಂದ ಯಾರೂ ಇರಬಾರದು, ಹಸಿವು ಮುಕ್ತ ಆಗಬೇಕು ಎಂದಿದ್ದೇ. ಈಗಲೂ ಅದೇ ಹೇಳ್ತಾರೆ, ನಾನು ಯಾಕೆ ಅನ್ನಭಾಗ್ಯ ಯೋಜನೆ ಮಾಡಿದೆ ಅಂತ ಯಾರೂ ಕೇಳಲ್ಲ ಎಂದಿದ್ದಾರೆ. ಅನ್ನಕ್ಕಾಗಿ ಇನ್ನೊಬ್ಬರ ಮುಂದೆ ಸಮಾಜದಲ್ಲಿ ಯಾರೂ ಕೂಡ ಚಾಚಬಾರದು. ಹೀಗಾಗಿ ಎಲ್ಲರಿಗೂ ಅನ್ನ ಕೊಟ್ಟೆ, ಸುಮ್ಮನೇ ಕೊಟ್ಟಿಲ್ಲ, ಅನುಭವದ ಮೇಲೆ ಕೊಟ್ಟಿದ್ದೇನೆ. ನಾನು ನನ್ನ ಸ್ನೇಹಿತ ರೂಮ್ ಮಾಡಿಕೊಂಡಿದ್ವಿ. ಆಗ ಅನ್ನ ಮಾಡಿ ಊಟ ಮಾಡುತ್ತಿದ್ವಿ, ಸಾಂಬರ್ ಹೋಟೆಲ್ ನಿಂದ ತರುತ್ತಿದ್ವಿ. ಅದಕ್ಕಾಗಿ ನಾವು ವಿದ್ಯಾಸಿರಿ ಕಾರ್ಯಕ್ರಮ ಮಾಡಿದ್ದೆ. ಒಂದು ತಿಂಗಳಿಗೆ ೧೫೦೦ ರೂಪಾಯಿ ಕೊಡ್ತಿದ್ದೇವೆ. ಆರ್ಥಿಕ ವಾಗಿ ಸಹಾಯ ಮಾಡಿದ್ರೆ ಸೋಮಾರಿ ಆಗ್ತಾರಾ, ಇದು ಸಾಧ್ಯವಾ?.೧.೨೩ ಕೋಟಿ ಕುಟುಂಬಗಳಿಗೆ ತಿಂಗಳಿಗೆ ೨ ಸಾವಿರ ಹಣ ನೀಡುತ್ತಿದ್ದೇವೆ. ಇದು ಸಹಾಯ ಆಗುತ್ತೆ ಅಲ್ಲವಾ? ಆರ್ಥಿಕ ವಾಗಿ ಸಹಾಯ ಆಗುತ್ತೆ ತಾನೇ?.ಗಂಡನ ಮುಂದೆ ಕಾಯ್ತಾ ಕೂಡಬೇಕಾ?. ಗೃಹಲಕ್ಷ್ಮೀ, ಗೃಹ ಜ್ಯೋತಿ ಕಾರ್ಯಕ್ರಮ ಗ್ಯಾರಂಟಿ ಯೋಜನೆ ಕೊಟ್ಟೆ. ಇದರಿಂದ ಸೋಮಾರಿ ಆಗ್ತಾರಾ? ನೀವೇ ಹೇಳಿ, ಬಡವರು ಬದುಕಬಾರದಾ? ಅವರಿಗೆ ಶಕ್ತಿ ಬರಬೇಕಾ ಬೇಡ್ವಾ?. ಮಹಿಳೆಯರು ಆರ್ಥಿಕ ವಾಗಿ ಸಬಲೀಕರಣ ಆಗಬೇಕು ಎಂದು ತಿಳಿಸಿದ್ದಾರೆ.