ಮನೆ Latest News ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ, ಅದು ಯಾರಿಗೂ ಗೊತ್ತಿಲ್ಲ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ, ಅದು ಯಾರಿಗೂ ಗೊತ್ತಿಲ್ಲ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

0

ಬೆಂಗಳೂರು; ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ, ಅದು ಯಾರಿಗೂ ಗೊತ್ತಿಲ್ಲ  ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಸುರ್ಜೇವಾಲಾ ರಾಜ್ಯಕ್ಕೆ ಬಂದ ವಿಚಾರದ ಬಗ್ಗೆ ಮಾತನಾಡಿದ ಅವರು ಈಗ ಸುರ್ಜೇವಾಲಾ ಬಂದಿದ್ದಾರೆ. ಅವರು ಏನ್ ರಿಪೋರ್ಟ್ ತಂದಿದ್ದಾರೆ, ಅವರು ಏನು ಕೇಳ್ತಾರೆ ನೋಡಬೇಕು. ಮುಂದೆ ಏನು ಮಾಹಿತಿ ನೋಡುತ್ತಾರೆ, ಅದನ್ನ ನೋಡಬೇಕು.ನೋಡಿ, ಅದು ಹೈಕಮಾಂಡ್ ಕೈಯಲ್ಲಿ ಇದೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ, ಅದು ಯಾರಿಗೂ ಗೊತ್ತಿಲ್ಲ. ಅವರೆಲ್ಲರ ಹೇಳಿಕೆಗೆ ಉತ್ತರ ಕೋಡೋದಿಲ್ಲ. ಎಐಸಿಸಿ ಹಂತದಲ್ಲಿ ಏನು ನಡೀತಿದೆ ಅದನ್ನ ಮಾತ್ರ ಹೇಳುತ್ತೇನೆ. ಇಲ್ಲಿ ಯಾರ್ಯಾರು ಹೇಳ್ತಾರೆ, ಕಮೆಂಟ್ ಮಾಡ್ತಾರೆ, ಅದನ್ನ ಹೇಳೋಕೆ ನಾನು ಹೋಗೋದಿಲ್ಲ ಎಂದಿದ್ದಾರೆ.

ಈಗ ಸುರ್ಜೇವಾಲಾ ಬಂದಿದ್ದಾರೆ. ಅವರು ಏನು ರಿಪೋರ್ಟ್ ತಂದಿದ್ದಾರೆ? ಏನು ಕೇಳ್ತಾರೆ? ಏನೇನು ನಡೆದಿದೆ? ಅದನ್ನ ನಮಗೆ ಹೇಳ್ತಾರೆ. ಆ ಮೇಲೆ ಯಾವ ವಿಚಾರದ ಬಗ್ಗೆ ನಮಗೆ ಕೊಡ್ತಾರೆ ಅನ್ನೋದು ನೋಡಬೇಕು. ಮುಂದೇ ಏನು ಮಾಡ್ತಾರೆ ಅಂತ ನೋಡಬೇಕು ಎಂದ ಅವರು ಅಕ್ಟೋಬರ್ ನಲ್ಲಿ ಬದಲಾವಣೆ ಎಂಬ ವಿಚಾರದ ಬಗ್ಗೆ ಮಾತನಾಡಿ ಬದಲಾವಣೆ ಎಲ್ಲಾ ಇರೋದು ಹೈಕಮಾಂಡ್ ಕೈಯಲ್ಲಿ ಇದೆ. ಯಾರಿಗೂ ಗೊತ್ತಿಲ್ಲ, ಮುಂದೆ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಅಂತ.ಇದು ಹೈಕಮಾಂಡ್ ಗೆ ಬಿಟ್ಟ ವಿಚಾರ, ಹೈಕಮಾಂಡೇ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಆದ್ರೆ ಅನಾವಶ್ಯಕವಾಗಿ ಯಾರೂ ಕೂಡ ಸಮಸ್ಯೆ ಕ್ರಿಯೇಟ್ ಮಾಡಬಾರದು ಎಂದರು.

ಪದೇ ಪದೇ ಬದಲಾವಣೆ, ಆರೋಪದ ಬಗ್ಗೆ ನಾಯಕರ ಹೇಳಿಕೆ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿ ಅವರೆಲ್ಲರ ಹೇಳಿಕೆಗೆ ನಾನು ಉತ್ತರ ಕೋಡೋದಿಲ್ಲ. ನಾನು ಉತ್ತರ ಕೋಡೋದು ಕೇವಲ ಎಐಸಿಸಿ ಹಂತದಲ್ಲಿ ಮಾತ್ರ. ಇಲ್ಲಿ ಯಾರೋ ಏನೋ ಹೇಳ್ತಾರೆ ಅಂತ ಪ್ರತಿ ಯೊಂದಕ್ಕೂ ಮಾತಾಡೋದಿಲ್ಲ. ಪ್ರತಿಯೊಂದಕ್ಕೂ ಉತ್ತರ ಕೊಟ್ಟುಕೊಳ್ತಾರೆ ಹೋದ್ರೆ ಇಲ್ಲಿ ಸಾಕಷ್ಟು ಪ್ರಶ್ನೆ ಇವೆ, ಅದನ್ನು ಹೊಡಿಕೊಳ್ಳಲು ಆಗಲ್ಲ ಎಂದ್ರು.  ದತ್ತಾತ್ರೇಯ ಹೊಸಬಾಳೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಹೊಸಬಾಳೆ ಅವರು ಮ್ಯಾನ್ ಆಫ್ ಮನುಸ್ಮೃತಿ .ಬಡವರು ಮುಂದೆ ಬರೋದು ಅವರಿಗೆ ಬೇಕಾಗಿಲ್ಲ. ಸಾವಿರಾರು ವರ್ಷಗಳ ಹಿಂದೆ ಏನು ನಡೀತಿದೆ ಅದನ್ನ ಮುಂದುವರಿಸೋಕೆ ಹೊರಟಿದ್ದಾರೆ. ಅದಕ್ಕೆ ಅವರು ಸೋಷಿಯಲಿಸಂ, ಸೆಕ್ಯೂಲರಿಸಂ, ಲಿಬರ್ಟಿ, ಇಕ್ವಾಲಿಟಿ ಇಷ್ಟ ಪಡೋದಿಲ್ಲ. ನಾನು ಅವರು ಬಗ್ಗೆ ಹೆಚ್ಚೋನೂ ಮಾತಾಡೋಕೆ ಇಷ್ಟ ಪಡೋದಿಲ್ಲ. ಅವರ ಪಾರ್ಟಿ, ಆರ್ ಎಸ್ ಎಸ್ ಲೈನ್ ನಲ್ಲಿ ಇದ್ದಾರೆ. ಸುಖಾಸುಮ್ಮನೇ ಹೇಳಿಕೆ ಕೊಡ್ತಾರೆ, ದೇಶದಲ್ಲಿ ಗೊಂದಲ ಸೃಷ್ಟಿ ಮಾಡೋದಕ್ಕೆ ಹೊರಟಿದ್ದಾರೆ. ಇದು ತಪ್ಪು, ನಾವು ಖಂಡಿಸುತ್ತೇವೆ. ಸಂವಿಧಾನದಲ್ಲಿ ಯಾವುದೇ ಪದವನ್ನೂ ಅವರು ತೆಗೆಯಲು ಹೊರಟರೇ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.