ಬೆಂಗಳೂರು; ರಾಜಣ್ಣ ಅವರಿಗೆ ಯಾವುದೋ ಮಾಹಿತಿ ಇರಬೇಕು ಅದಕ್ಕೆ ಹೇಳಿದ್ದಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಆಗಸ್ಟ್ ಸೆಪ್ಟೆಂಬರ್ ನಲ್ಲಿ ಬದಲಾವಣೆ ಆಗುತ್ತೆ ಎಂಬ ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ರಾಜಣ್ಣ ಅವರಿಗೆ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ.ಅವರು ಸೆಪ್ಟೆಂಬರ್ ನಲ್ಲಿ ಕ್ರಾಂತಿಯಾಗುತ್ತೆ ಅಂದಿದ್ದಾರೆ. ಅವರಿಗೆ ಯಾವುದೋ ಮಾಹಿತಿ ಇರಬೇಕು.ಇಲ್ಲದಿದ್ರೆ ಜವಾಬ್ದಾರಿ ಸ್ಥಾನದಲ್ಲಿ ಇದ್ದು ಹಾಗೆ ಮಾತಾಡಕ್ಕಾಗಲ್ಲ.ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಅವರನ್ನೇ ಕೇಳಿ.ನನಗೆ ಯಾವುದೇ ಮಾಹಿತಿ ಇಲ್ಲ ಅದರ ಬಗ್ಗೆ ಎಂದಿದ್ದಾರೆ
ಸಣ್ಣಪುಟ್ಟ ಬದಲಾವಣೆ, ಮಂತ್ರಿಗಳ ಬದಲಾವಣೆ ಆಗಬಹುದೆಂಬ ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಮಾತನಾಡಿದ ಅವರು ಅವರಿಗೆ ಇರೋ ಮಾಹಿತಿ ಪ್ರಕಾರ ಅವರು ಮಾತಾಡಿದ್ದಾರೆ.ನನಗೆ ಯಾವುದೇ ಮಾಹಿತಿ ಇಲ್ಲ. ನನಗೆ ತಿಳಿದಿರುವ ಹಾಗೆ ಯಾವುದೇ ಬದಲಾವಣೆ ಆಗಲ್ಲ.ನನಗೆ ಗೊತ್ತಿರುವ ಹಾಗೆ ಯಾವುದೇ ಬದಲಾವಣೆ ಇಲ್ಲ.ಮುಂದೇನಾಗುತ್ತೆ ಅಂತ ಹೇಗೆ ಹೇಳಕ್ಕಾಗುತ್ತೆ.ಮುಂದೇನಾಗಬೇಕು ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದಿದ್ದಾರೆ.
ರಾಜಣ್ಣ ಅವರಿಗೆ ಏನ್ ಮಾಹಿತಿ ಇದೆ ಗೊತ್ತಿಲ್ಲ.ಅವರಿಗೆ ಏನೋ ಮಾಹಿತಿ ಇದೆ ಅನ್ಸುತ್ತೆ. ಸಚಿವರು ಆಗಿರೋರು, ಅವರಿಗೆ ಮಾಹಿತಿ ಇರಬಹುದು.ನನ್ನ ಗಮನಕ್ಕೆ ಯಾವುದೂ ಇಲ್ಲ.ಸಿಎಂ ಬಳಿ ಇಂಟಲಿಜೆನ್ಸ್ ಇದೆ, ನನ್ನ ಬಳಿ ಇಲ್ಲ.ಅವರಿಗೆ ಏನು ಗೊತ್ತಿದೆ ಅದನ್ನ ಹೇಳಿದ್ದಾರೆ. ನಾನು ಪೊಲೀಸ್ ಇಲಾಖೆ ಯಲ್ಲಿ ಅನೇಕ ವಿಚಾರ ಇರ್ತಾವೆ. ವಾರ್ಷಿಕ ಸಭೆ ಇದೆ, ಅದಕ್ಕೆ ಭೇಟಿ ಮಾಡಿದ್ದೇನೆ.ಅನೇಕ ವಿಚಾರ ಅವರ ಗಮನಕ್ಕೆ ತರಬೇಕಾಗುತ್ತದೆ, ಅದಕ್ಕೆ ಭೇಟಿ ಮಾಡಿದ್ದೀರಿ. ಯಾವ ಗ್ರಿಪ್ಪೂ ಕಳೆದುಕೊಂಡಿಲ್ಲ, ಆಡಳಿತ ನಡೀತಿಲ್ವಾ?.ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದರು ತಾನೇ.ಈಗ ಆಡಳಿತ ನಡೀತಿದೆ ಅಲ್ಲವೇ, ಸಿಎಂ ಅವರಿಗೆ ಅನುಭವ ಇದೆ, ಸ್ವಾಭಾವಿಕ ವಾಗಿ ಟೀಕೆ ಟಿಪ್ಪಣಿ ಬರ್ತಿದೆ.ನಾಲ್ಕೈದು ವರ್ಷ ಹೆಚ್ಚಾಗಿದೆ.ಹೀಗಾಗಿ ಸಾಫ್ಟ್ ಆಗಿದ್ದಾರೆ ಅನ್ಸುತ್ತೆ ಎಂದಿದ್ದಾರೆ.
ಯಾವುದೇ ಪವರ್ ಸೆಂಟರ್ ಇಲ್ಲ.ಆಡಳಿತ ನಡೆಸುವವರಿಗೆ ಅದೇ ಪವರ್ ಸೆಂಟರ್. ಯಾರ ಕಂಟ್ರೋಲ್ ಯಾರ ಮೇಲೆಯೂ ಇಲ್ಲ.ಹೈಕಮಾಂಡ್ ಪವರ್ ಸೆಂಟರ್ ಎಂದಿದ್ದಾರೆ. ಸುರ್ಜೇವಾಲಾ ಬರುವ ವಿಚಾರದ ಬಗ್ಗೆ ಮಾತನಾಡಿ ಸುರ್ಜೇವಾಲ ತಿಂಗಳಿಗೊಮ್ಮೆ ಬರುವ ಪದ್ದತಿ ಇದೆ. ಒಮ್ಮೊಮ್ಮೆ ಎರಡು ಸಾರಿ ಬರ್ತಾರೆ.ಅವರು ಉಸ್ತುವಾರಿ ಕಾರ್ಯದರ್ಶಿ ಬರಲೇ ಬೇಕು. ಅದಿಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲ್ಲ.ಪಕ್ಷದ ವಿಚಾರದಲ್ಲಿ ಅನೇಕ ಸಲಹೆ ಕೊಡ್ತಾರೆ.ಆಡಳಿತ ಹೇಗೆ ನಡೀತಿದೆಯೆಂದು ಗಮನಿಸ್ತಾರೆ.ಏನಾದರೂ ಸಣ್ಣ ಪುಟ್ಟ ವ್ಯತ್ಯಾಸ ಇದ್ರೆ ಸೂಕ್ಷ್ಮವಾಗಿ ಯಾರಿಗೆ ಹೇಳಬೇಕೋ ಹೇಳ್ತಾರೆ.ನನಗೆ ತಿಳಿದಿರುವ ಹಾಗೆ ಯಾವುದೇ ಬದಲಾವಣೆ ಇಲ್ಲ. ಆಡಳಿತವನ್ನ ತ್ವರಿತವಾಗಿ ಮಾಡಬೇಕು ಮಾಡ್ತೇವೆ.ಸ್ಪೀಡ್ ಜಾಸ್ತಿ ಮಾಡಬೇಕು,ಸ್ವಲ್ಪ ಎಕ್ಸ್‌ಲೇಟರ್ ಒತ್ತಬೇಕಿದೆ.ಎರಡುವರೆ ವರ್ಷಕ್ಕೆ ಹತ್ತಿರ ಬರ್ತಿದ್ದೇವೆ. ನನಗೆ ಗೊತ್ತಿರೊದು, ಗೊತ್ತಿಲ್ಲದ್ದನ್ನ ಹೇಳೋಕಾಗುತ್ತಾ?.ಅವರು ಮುಂದೆ ಆಗೋದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಸಿಎಂ ಯಾವುದೇ ಗ್ರಿಪ್ ಕಳೆದುಕೊಂಡಿಲ್ಲ.ಸಿಎಂ ಈಗ ಆಡಳಿತ ನಡೆಸ್ತಾ ಇಲ್ವಾ?. ಸಣ್ಣಪುಟ್ಟ ವಿಚಾರಗಳಿದ್ದೇ ಇರ್ತವೆ, ಬಗೆಹರಿಸ್ತಾರೆ.ಬಿಜೆಪಿಯವ್ರು ಹಿಂದೆಯೂ ಟೀಕೆ ಮಾಡ್ತಿದ್ರು, ಈಗಲೂ ಮಾಡ್ತಾರೆ. ಆಯ್ತಪ್ಪ ನಾಲ್ಕೈದು ವರ್ಷ ಹೆಚ್ಚಾಗಿರಬಹುದು ಸಿಎಂಗೆ. ಹಾಗಾಗಿ ಅವ್ರು ಸ್ವಲ್ಪ ಸಾಫ್ಟ್ ಆಗಿರಬಹುದು ಎಂದಿದ್ದಾರೆ