ಮನೆ Latest News ಕಮಲ್ ಹಾಸನ್ ಅವರು ಕ್ಷಮೆ ಕೇಳ್ತಾರೆ ಅನ್ನೋ ವಿಶ್ವಾಸ ಇದೆ: ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್...

ಕಮಲ್ ಹಾಸನ್ ಅವರು ಕ್ಷಮೆ ಕೇಳ್ತಾರೆ ಅನ್ನೋ ವಿಶ್ವಾಸ ಇದೆ: ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು: ಕಮಲ್ ಹಾಸನ್ ಅವರು ಕ್ಷಮೆ ಕೇಳ್ತಾರೆ ಅನ್ನೋ ವಿಶ್ವಾಸ ಇದೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಕಮಲ್ ಹಾಸನ್ ಕೋರ್ಟ್ ಗೆ ಹೋಗಿದ್ದಾರೆ. ಕ್ಷಮೆ ಯಾಚನೆಗೆ ಕೋರ್ಟ್ ಹೇಳಿದೆ. ಅವರು ಕ್ಷಮೆ ಕೇಳ್ತಾರೆ ಅನ್ನೋ ವಿಶ್ವಾಸ ಇದೆ. ಕನ್ನಡಪರ ಸಂಘಟನೆಗಳಿಗೆ ನಾನು ಮನವಿ ಮಾಡ್ತೀನಿ. ಪ್ರತಿಭಟನೆ ವಿಕೋಪಕ್ಕೆ ಹೋಗಬಾರದು ಎಂದರು.

ಕಮಲ್ ಹಾಸನ್ ಪರ ಸಾಫ್ಟ್ ಅಲ್ಲ. ಏನಾದರೂ ಹೆಚ್ಚು ಕಮ್ಮಿಯಾದ್ರೆ ಯಾರು ಹೊಣೆ?. ಹೊಸೂರಿಗೆ ಬೆಂಗಳೂರಿನಿಂದ ನಿತ್ಯ 50 ಸಾವಿರ ಜನ ಹೋಗ್ತಾರೆ, ಅಲ್ಲಿಂದಲೂ ಬರ್ತಾರೆ. ನಾವು ಸೂಜಿ, ಬಿಜೆಪಿ ಅವರು ಕತ್ತರಿ. ನಾವು ಹೊಲಿಯುವ ಕೆಲಸ ಮಾಡ್ತೀವಿ. ಅವರೂ ಲಿಮಿಟ್ ನಲ್ಲಿ‌ ಇರಬೇಕು. ಕಮಲ್ ಹಾಸನ ವೈಯುಕ್ತಿಕವಾಗಿ ಬಹಳ ಹಠದಲ್ಲಿ ಇದ್ದಾರೆ. ನಮ್ಮವರೂ ಲಿಮಿಟ್ ನಲ್ಲಿ ಇರಬೇಕು, ನಮ್ಮ ರಾಜ್ಯದ ಹಿತಕ್ಕಾಗಿ ಇರಬೇಕು ಎಂದರು.

ನ್ಯಾಯಾಲಯ ಎಲ್ಲ ಗಮನದಲ್ಲಿಟ್ಟುಕೊಂಡು ಅಭಿಪ್ರಾಯಪಟ್ಟಿದ್ದಾರೆ. ನಾವೆಲ್ಲ ದ್ರಾವಿಡ ಭಾಗಕ್ಕೆ ಸೇರಿದಂತವರು.ನಾವು ಭಾಷೆ ಮಾತಾಡಬೇಕಾದ್ರೆ ಕೆಲವು ತೆಲಗು, ತಮಿಳು ಅಕ್ಷರಗಳು ಬರ್ತಾವೆ. ಕಮಲ್ ಹಾಸನ್ ಪರ ಸಾಫ್ಟ್ ಅಲ್ಲ ರೀ. ಭಾಷೆಗೆ, ಜಾತಿಗೆ, ರಾಜ್ಯಗಳಿಗೆ ಜಗಳ ಮಾಡಿಸಲು ಆಗುತ್ತಾ? . ಯಾವುದೋ ಒಂದು ರೂಪಕ್ಕೆ ತಿರುಗಿದ್ರೆ ಯಾರು ಹೊಣೆ?. ಸಣ್ಣ ಸಣ್ಣ ವಿಚಾರಕ್ಕೆ, ಅವರು ತಪ್ಪು ಮಾಡಿದ್ದಾರೆ, ಕ್ಷಮೆ ಕೇಳ್ತಾರೆ. ಎಲ್ಲೆಲ್ಲಿಗೂ ಹೋಗಬಾರದು ಎಂದು ತಿಳಿಸಿದರು.