ಬೆಂಗಳೂರು; ರಾಜ್ಯದ ಎಂಎಸ್ ಎಂಇ ಸಚಿವರ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಎಂಎಸ್ ಎಂಇ ಇಲಾಖೆ ಸಚಿವ ರನ್ನು ಇಂದೇ ಮೊದಲ ಬಾರಿಗೆ ನಾನು ಕಾರ್ಯಕ್ರಮದಲ್ಲಿ ನೋಡಿದ್ದು. ಇಲಾಖೆಯ ಕಾರ್ಯಕ್ರಮದಲ್ಲಿ ಇಂದು ಅರಮನೆ ಮೈದಾನದಲ್ಲಿ ಅವರನ್ನು ನೋಡಿದ್ದೇನೆ. ಈ ಹಿಂದೆ ಇಲಾಖೆಯ ಎರಡು ಮೂರು ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿರಲಿಲ್ಲ ಎಂದರು.
ದಕ್ಷಿಣ ಕನ್ನಡದವರಿಗೆ ಹೊಟ್ಟೆ ಬಟ್ಟೆಗೆ ಕಾಂಗ್ರೆಸ್, ಮತ ಬೇರೆ ಪಕ್ಷಕ್ಕೆ ಹಾಕುತ್ತಾರೆ ಅಂತಾ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ದಕ್ಷಿಣ ಕನ್ನಡದವರು ಕರ್ನಾಟಕದಲ್ಲಿ ಇಲ್ಲ ಅಂತಾ ಅರ್ಥವೇ?. ಏನು ಅಂತಾ ಮಾತಾಡುತ್ತಾರೆ?. ಅಂದರೆ ಮತ ಹಾಕಿದವರಿಗೆ ಮಾತ್ರ ಅಂತಾನಾ?. ಕಾಂಗ್ರೆಸ್ ನವರಿಗೆ ಮಾತ್ರ ಗ್ಯಾರಂಟಿ ಅಂತಾ ಅವತ್ತೇ ಹೇಳಬೇಕಿತ್ತು. ಅವತ್ತು ನಿನಗೂ ಫ್ರೀ ನನಗೂ ಫ್ರೀ ಅಂತಾ ಹೇಳಿದ್ದರಲ್ವಾ?.ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತ್ಯೇಕತೆಯ ಕೂಗು ಇರುವಾಗ ಇವರು ಜವಾಬ್ದಾರಿ ಇಲ್ಲದೇ ಮಾತಾಡುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ರು.
ಬೆಂಗಳೂರು ದಕ್ಷಿಣ ಎಂದು ರಾಮನಗರದ ಹೆಸರು ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಬೆಂಗಳೂರು ಅಂದರೆ ರಿಯಲ್ ಎಸ್ಟೇಟ್ ಅಂದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಬೆಳೆಸಲು ಮುಂದಾಗಿದ್ದಾರೆ. ಹಾಗಾಗಿ ರಾಮನಗರವನ್ನು ಬೆಂಗಳೂರು ದಕ್ಷಿಣ ಮಾಡಲು ಹೊರಟಿದ್ದಾರೆ. ಮಳೆ ಬಂದಾಗ ಬೆಂಗಳೂರು ಹೀಗೆ ಇರುತ್ತದೆಯೇ ಎಂಬ ರೀತಿ ಆಗಿದೆ. ಐದಾರು ಗಂಟೆಗಳ ಕಾಲ ಕಾರಿನಲ್ಲೇ ಕೂರುವ ಪರಿಸ್ಥಿತಿ ಇದೆ. ರಾಜಕೀಯ ಇಲ್ಲಿ ಬೇಡ, ಆದರೆ ಬೆಂಗಳೂರು ಉಳಿಸುವ ದೃಷ್ಟಿಯಿಂದ ಎಲ್ಲರೂ ನಿಲ್ಲಬೇಕಿದೆ. ರಾಮನಗರವನ್ನು ಬೆಂಗಳೂರು ಅಂತ ಮಾಡಿರುವದೇ ಮಾಫಿಯಾ ಎಂದು ಆಕ್ರೋಶ ಹೊರ ಹಾಕಿದ್ರು.
ಕಮಲ್ ಹಾಸನ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಕಮಲ್ ಹಾಸನ್ ಒಂದು ಕಾಲದಲ್ಲಿ ನಾಯಕ ನಟ. ಅವರನ್ನು ಎಲ್ಲರೂ ಇಷ್ಟ ಪಡುತ್ತಿದ್ದರು.ಇಂದು ಅವರು ಚಾಲ್ತಿಯಲ್ಲಿಲ್ಲದ ನಾಣ್ಯ. ಪೊಲಿಟಿಕಲ್ ಪಾರ್ಟಿ ಮಾಡಿ ಫೈಲ್ಯೂರ್ ಆಗಿದ್ದಾರೆ. ಅವರಿಗೆ ಸಿನಿಮಾ ಕೂಡ ಇಲ್ಲ. ಅವರ ಸಿನಿಮಾಗೆ ಪ್ರಚಾರ ಈ ರೀತಿ ಪಡೆಯುತ್ತಿದ್ದಾರೆ. ಎರಡು ರಾಜ್ಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ನೀರು ಮತ್ತು ಭಾಷೆಗೆ ಜಗಳ ಇದೆ. ಪ್ರಚಾರ ಪಡೆಯಲು ಈ ರೀತಿ ಮಾಡುತ್ತಿದ್ದಾರೆ ಎಂದರು.
ದಕ್ಷಿಣ ಕನ್ನಡದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ವಿಚಾರದ ಬಗ್ಗೆ ಮಾತನಾಡಿದ ಅವರು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ? ಎಲ್ಲಿ ಕೊಲೆ, ಅತ್ಯಾಚಾರ ಆಗುತ್ತಿದೆ ಗೊತ್ತಾಗುತ್ತಿಲ್ಲ. ಮನೆಯಿಂದ ಹೋದವರು ವಾಪಸ್ ಬರುತ್ತೇವೆ ಎಂಬ ಗ್ಯಾರಂಟಿ ಇಲ್ಲ. ಎಲ್ಲಾ ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಸರ್ಕಾರ ಪ್ರಾಣದ ಗ್ಯಾರಂಟಿ ಕೊಡುತ್ತಿಲ್ಲ. ಗೃಹ ಸಚಿವರು ಅವರೇ ಹಗರಣದಲ್ಲಿ, ಮಾಫಿಯಾದ ಕೈಯಲ್ಲಿ ಸಿಕ್ಕಿಕೊಂಡಿದ್ದಾರೆ. ಇಂತಹವರನ್ನು ಇಟ್ಟುಕೊಂಡು ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುವುದು ವೇಸ್ಟ್. ಸಿದ್ದರಾಮಯ್ಯ ಪಿಎಫ್ ಐ ಮೇಲಿನ ಕೇಸ್ ವಾಪಸ್ ಪಡೆದು ಎಲ್ಲರನ್ನೂ ಹೊರಗೆ ಬಿಟ್ಟರು. 800 ರೌಡಿಗಳು ಆಚೆ ಬಂದರು, ನಮ್ಮ ಹುಡುಗರನ್ನು ಕೊಂದು ಹಾಕಿದರು. ಹುಬ್ಬಳ್ಳಿ ಕೇಸ್ ವಾಪಸ್ ಪಡೆಯುವುದನ್ನು ತಡೆದು ಕ್ರಿಮಿನಲ್ ಗಳು ರಸ್ತೆಗೆ ಬರುವುದನ್ನು ಹೈಕೋರ್ಟ್ ತಡೆದಿದೆ. ದಕ್ಷಿಣ ಕನ್ನಡದಲ್ಲಿ ಮುಸ್ಲಿಮರಿಗೆ ರಕ್ಷಣೆ ಇಲ್ಲ ಅಂತಾ ದಿನೇಶ್ ಗುಂಡೂರಾವ್ ಹೇಳುತ್ತಾರೆ.ಅಂದರೆ ನೀವು ಒಬ್ಬರನ್ನೇ ಓಲೈಕೆ ಮಾಡುತ್ತಿದ್ದೀರಿ. ಏನು ಮಾಡಬೇಕು ಅಂತೀದ್ದೀರಿ ಕರ್ನಾಟಕವನ್ನು?. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪರಮೇಶ್ವರ್ ನೇತೃತ್ವದಲ್ಲಿ ಕರ್ನಾಟಕವನ್ನು ಬಿಹಾರ ರೀತಿ ಮಾಡಲಾಗಿದೆ ಎಂದು ಬೇಸರ ಹೊರ ಹಾಕಿದ್ರು.