ಬೆಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ವಿರುದ್ಧ ಸತ್ಯ ಹೇಳುವವರ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಕಾಂಗ್ರೆಸ್ ಸರ್ಕಾರ ನಮ್ಮ ಮೇಲೆ ಗದಾ ಪ್ರಹಾರ ಪ್ರಾರಂಭಿಸಿದೆ. ನನಗೆ ಪ್ರಿಯಾಂಕ್ ಖರ್ಗೆ ಮಾತಾಡಬೇಕು ಅಂತಾ ಅನ್ನಿಸಲ್ಲ, ನನಗೆ ಇಚ್ಚೆಯೂ ಇಲ್ಲ. ಆದರೆ ನಾನು ಅಸಹಾಯಕ, ಎಳೆದೂ ಎಳೆದೂ ನಮ್ಮನ್ನು ಮೇಲೆ ಹಾಕಿಕೊಳ್ಳುತ್ತಾರೆ. ವಿಪಕ್ಷ ಮತ್ತು ವಿಪಕ್ಷ ನಾಯಕ ಕಾವಲು ನಾಯಿ ಎಂಬುದನ್ನು ಮನವರಿಕೆ ಮಾಡಿಕೊಂಡು ನಾವು ಕೆಲಸ ಮಾಡುತ್ತಿದ್ದೇವೆ. ಕಲ್ಬುರ್ಗಿಗೆ ಹೋದಾಗ ನಾಯಿ ಎಂಬ ಪದಕ್ಕೆ ನೋವಾಗಿದ್ದರೆ ವಿಷಾದವನ್ನೂ ವ್ಯಕ್ತಪಡಿಸಿದ್ದೆ. ನಾಲ್ಕೈದು ಗಂಟೆಗಳ ಕಾಲ ನನ್ನ ಐಬಿಯಲ್ಲಿ ಕೂಡಿ ಹಾಕಿದ್ದರು. ಪೊಲೀಸರು ನಮಗೆ ಒತ್ತಡ ಇದೆ, ಅರ್ಥ ಮಾಡಿಕೊಳ್ಳಿ ಎಂದು ಹೇಳುತ್ತಿದ್ದರು. ಐದು ಗಂಟೆ ಬಳಿಕ ನನ್ನನ್ನು ಚಿತ್ತಾಪುರದಿಂದ ಹೊರಗೆ ಹಾಕಿದರು. ನಂತರ ನಾನು ಯಾದಗಿರಿಗೆ ಬಂದು ರಾತ್ರೋ ರಾತ್ರಿ ರೈಲು ಹಿಡಿದು ಬೆಂಗಳೂರಿಗೆ ಬಂದೆ
ಸಿಎಂ, ಗೃಹ ಸಚಿವರು, ಡಿಜಿಪಿ ಎಲ್ಲರಿಗೂ ದೂರು ಕೊಟ್ಟರೂ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾಗ ಕೊಡಗಿನಲ್ಲಿ ಮೊಟ್ಟೆ ಹೊಡೆದಾಗ ಎಷ್ಟು ರಾದ್ಧಾಂತ ಮಾಡಿದರು?. ಆಗ ನಮ್ಮ ಸರ್ಕಾರ ಸಿದ್ದರಾಮಯ್ಯನವರಿಗೆ ಎಷ್ಟು ರಕ್ಷಣೆ ಕೊಟ್ಟಿತ್ತು. ಕಲ್ಬುರ್ಗಿಯಲ್ಲಿ ಪ್ರತಿಭಟನೆಗೆ ಹೋದಾಗ ರವಿಕುಮಾರ್ ಮಾತಿನ ಭರದಲ್ಲಿ ಒಂದು ಮಾತು ಡಿಸಿ ಬಗ್ಗೆ ಆಡಿದ್ದರು. ನಂತರ ರವಿಕುಮಾರ್ ವಿಷಾದ ವ್ಯಕ್ತಪಡಿಸಿ ಡಿಸಿಯವರಿಗೇ ಫೋನ್ ಮಾಡಿ ಮಾತಾಡಿದ್ದರು. ಡಿಸಿಯವರು ದೂರು ಕೊಡಲಿಲ್ಲ, ಸಾಮಾಜಿಕ ಕಾರ್ಯಕರ್ತ ದತ್ತಾತ್ರೇಯ ಇಕ್ಕಲಗಿ ರವಿಕುಮಾರ್ ಮೂಲಕ ಅಟ್ರಾಸಿಟಿ ಕೇಸ್ ಕೊಡಿಸಿದ್ದಾರೆ. ರವಿಕುಮಾರ್ ಎಲ್ಲಾರೂ ಡಿಸಿ ಬಗ್ಗೆ ಅಟ್ರಾಸಿಟಿ ಮಾತು ಆಡಿದ್ದರೆ ನಾನೇ ದೂರು ಕೊಡುತ್ತೇನೆ. ದತ್ತಾತ್ರೇಯ ಅವರಿಗೆ ಸರ್ಕಾರ ಇತ್ತೀಚೆಗೆ ಅಂಬೇಡ್ಕರ್ ಪ್ರಶಸ್ತಿ ಕೊಟ್ಟಿದೆ, ಅದರ ಋಣ ತೀರಿಸಬೇಕಲ್ವಾ. ಸಿಎಂ ಹೆಚ್ಚುವರಿ ಎಸ್ಪಿಗೆ ಕಪಾಳ ಮೋಕ್ಷ ಮಾಡಲು ಹೋದಾಗ, ವಿಜಯನಗರ ಡಿಸಿಯನ್ನು ವೇದಿಕೆಯಲ್ಲಿ ನಿಂದಿಸಿದಾಗ ಐಎಎಸ್ ಅಧಿಕಾರಿಗಳು ಏನು ಮಾಡುತ್ತಿದ್ರಿ? ಯಾಕೆ ಐಎಎಸ್ ಅಧಿಕಾರಿಗಳು ಆಗ ದೂರು ಕೊಡಲಿಲ್ಲ?.ಅಂದರೆ ವಿಪಕ್ಷದವರು ಏನು ಮಾತಾಡಿದರೂ ಅಧಿಕಾರಿಗಳು ಕೂಡಾ ಸಹಿಸಿಕೊಳ್ಳಲ್ಲ ಎಂದರು.
ರಾಜಕಾರಣದಲ್ಲಿ ನಾಯಿ ಪದ ಸಾಮಾನ್ಯವಾಗಿ ಬಳಕೆಯಾಗುತ್ತದೆ. ನಾಯಿ ನಿಮಗೆ ಹಿಡಿಸುವುದಿಲ್ಲ ಅಂತಾ ಅಂದರೆ ಬಿಟ್ಟುಬಿಡಿ. ಆದರೆ ನಾಯಿಗೆ ಇರುವ ನಿಯತ್ತು ಆದರೂ ಇಟ್ಟುಕೊಳ್ಳಿ. ಇಂದು ಕಾಂಗ್ರೆಸ್ ಎಂಎಲ್ಸಿಗಳು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ. ನಾನು ಕಾಂಗ್ರೆಸ್ ಎಂಎಲ್ಸಿಗಳು ನನ್ನ ಮತ್ತು ರವಿಕುಮಾರ್ ಗೆ ಬೆಂಬಲವಾಗಿ ರಾಜ್ಯಪಾಲರ ಬಳಿ ಹೋಗಿದ್ದಾರೆ ಅಂದುಕೊಂಡಿದ್ದೆ. ಕಾಂಗ್ರೆಸ್ ವಿರುದ್ಧ ಯಾರ್ಯಾರು ಮಾತಾಡುತ್ತಾರೋ ಅವರನ್ನೆಲ್ಲಾ ಹತ್ತಿಕ್ಕುವ ಕೆಲಸ ಆಗುತ್ತಿದೆ. ಸಿ.ಟಿ. ರವಿ ಬಿಜೆಪಿಯ ಗಟ್ಟಿ ಧ್ವನಿ. ಅವರನ್ನು ಹತ್ತಿಕ್ಕುವ ಕೆಲಸ ಮಾಡಿದ್ರಿ. ಸಿ.ಟಿ. ರವಿ ಜಗ್ಗುವ ಬಗ್ಗುವ ವ್ಯಕ್ತಿ ಅಲ್ಲ. ನನ್ನ ಹಿಂದುಗಡೆ ಹಲವು ಜನ ಎಲ್ಲಿ ಬೀಳಿಸಬೇಕು ಅಂತಾ ಪಿಹೆಚ್ ಡಿ ಮಾಡುತ್ತಿದ್ದಾರೆ.ರವಿಕುಮಾರ್ ಕೂಡಾ ಪಕ್ಷದ ಗಟ್ಟಿ ಧ್ವನಿ.ಈಗ ಅವರ ಬಗ್ಗೆ ಕೂಡಾ ಶುರು ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರೇ ನಿಲ್ಲಿಸಿಬಿಡಿ. ನಿಮ್ಮನ್ನು ಟ್ರೋಲ್ ಮಾಡುತ್ತಿರುವುದನ್ನು ನೋಡಲು ಆಗಲ್ಲ. ಬೀದಿ ಬಸವ ಅಂತಾ ಜನ ನಿಮ್ಮ ಬಗ್ಗೆ ಹೇಳುತ್ತಿದ್ದಾರೆ.ನಿಮ್ಮ ಷಡ್ಯಂತ್ರಗಳಿಗೆ ನಾವು ಬಗ್ಗಲ್ಲ. ಇಂದು ದಲಿತರ ಮಾರಣಹೋಮ ರಾಜ್ಯದಲ್ಲಿ ಆಗುತ್ತಿದೆ .ದಲಿತರ 42 ಸಾವಿರ ಕೋಟಿ ನುಂಗಿದಾಗ ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ಮುಖಂಡರು ಬಾಯಲ್ಲಿ ಏನು ಇಟ್ಟುಕೊಂಡಿದ್ದರು? ಎಂದರು.
ಹೆಚ್ ಎಎಲ್ ನೆಹರು ತಂದಿದ್ದು ಅಂದರು. ಪುಣ್ಯಕ್ಕೆ ರಾಮಾಯಣ, ಮಹಾಭಾರತ ನೆಹರು ಬರೆದಿದ್ದು ಅಂತಾ ಹೇಳಿಲ್ಲ. ರವಿಕುಮಾರ್ ಮೇಲಿನ ಕೇಸ್ ಅನ್ನು ತಕ್ಷಣ ವಾಪಸ್ ಪಡೆಯಬೇಕು. ನಾನು ಕೊಟ್ಟ ದೂರಿನಲ್ಲಿ ಯಾರ್ಯಾರನ್ನು ಅರೆಸ್ಟ್ ಮಾಡಿದ್ದೀರಿ ಅಂತಾ ಹೇಳಬೇಕು. ನಮ್ಮನ್ನು ಕೆಣಕಬೇಡಿ. ಇಲ್ಲದಿದ್ದರೆ ಈ ಎರಡೂ ಪ್ರಕರಣಗಳನ್ನು ಇಟ್ಟುಕೊಂಡು ನಿಮ್ಮ ಕಚೇರಿ ಮುಂದೆ ಕೂರುತ್ತೇನೆ. ಎಫ್ ಐಆರ್ ನಲ್ಲಿ ಜಾತಿ ನಿಂದನೆ ಏನು ಮಾಡಿದರು ಅಂತಾ ಒಂದು ಶಬ್ದ ಕೂಡಾ ಇಲ್ಲ. ಕೋರ್ಟ್ ನಲ್ಲಿ ಒಂದೇ ನಿಮಿಷಕ್ಕೆ ಇದು ಬಿದ್ದು ಹೋಗುತ್ತದೆ.ನಮ್ಮನ್ನು ಕಳ್ಳರ ಸ್ಥಾನದಲ್ಲಿ ನೋಡಬೇಕು ಅಂತಾ ಅವರ ಆಸೆ.ಸೋಷಿಯಲ್ ಮೀಡಿಯಾದಲ್ಲಿ ನಿಮ್ಮನ್ನು ಎಷ್ಟು ಟ್ರೋಲ್ ಮಾಡಿದ್ಡಾರೆ ಅಂತಾ ನೋಡಿಕೊಳ್ಳಿ ಎಂದರು.