ಬೆಂಗಳೂರು; ಮಳೆ ಬಗ್ಗೆ ಬಿಬಿಎಂಪಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ರೆ ಸಮಸ್ಯೆ ಆಗ್ತಿರಲಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಅವಾಂತರ ಬಗ್ಗೆ ಮಾತನಾಡಿದ ಅವರು ಕಳೆದ ಮೂರ್ನಾಲ್ಕು ದಿನಗಳಲ್ಲಿ ಭಾರೀ ಮಳೆ ಬಂದಿದೆ. ಸಿಲ್ಕ್ ಬೋರ್ಡ್ ಬಳಿ ಮಳೆಯಿಂದ ಸಮಸ್ಯೆ ಆಗಿದೆ. ಬಿಬಿಎಂಪಿ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ರೆ ಸಮಸ್ಯೆ ಆಗ್ತಿರಲಿಲ್ಲ. ವೈಟ್ ಟಾಪಿಂಗ್ ಆಗ್ತಿದೆ, ಇದರಿಂದ ಸಮಸ್ಯೆ ಆಗಿದೆ. ಬಿಬಿಎಂಪಿ ಕಮಿಷನರ್ ಸ್ಪಾಟ್ ಗೆ ಹೋಗಿದ್ದಾರೆ. ಸೂಚನೆ ಕೊಟ್ಟಿದ್ದಾರೆ, ಮಳೆಗಾಲದಲ್ಲಿ ಮುನ್ನಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಡಿಸಿಎಂ ಅವರು ಉಸ್ತುವಾರಿ ಇದ್ದಾರೆ. ಈಗಾಗಲೇ ಸೂಚನೆ ಕೊಟ್ಟಿದ್ದಾರೆ. ಸಮಸ್ಯೆ ಯನ್ನ ಅಧಿಕಾರಿಗಳು ನೋಡ್ತಿದ್ದಾರೆ. ಮೇ ಜೂನ್ ನಲ್ಲಿ ಪ್ರತೀ ವರ್ಷ ಸಮಸ್ಯೆ ಆಗುತ್ತದೆ. ಮುನ್ನಚ್ಚರಿಕಾ ಕ್ರಮ ವಹಿಸಿದ್ರೆ ಸಮಸ್ಯೆ ಆಗಲ್ಲ.ಲೋ ಲೆವಲ್ ಏರಿಯಾದಲ್ಲಿ ಸಮಸ್ಯೆ ಆಗುತ್ತದೆ. ಅದನ್ನು ಕ್ರಮ ತೆಗೆದುಕೊಳ್ಳಬೇಕು ಬಿಬಿಎಂಪಿ ಅವರು. ವಿಪಕ್ಷ ಗಳು ಆರೋಪ ಮಾಡ್ತಿದ್ದಾರೆ. ಪ್ಲಡಿಂಗ್ ಆಗ್ತಿದೆ, ಅದನ್ನ ಹೇಳಲೇಬೇಕು. ಮಳೆಯಿಂದ ಸಮಸ್ಯೆ ಆಗಿದೆ, ಎಲೆಗಳು, ಪ್ಲಾಸ್ಟಿಕ್ ಬಿದ್ದಿದೆ ಎಂದಿದ್ದಾರೆ.
ಸುನೀಲ್ ಕುಮಾರ್ ಟ್ವೀಟ್ ವಿಚಾರದ ಬಗ್ಗೆ ಮಾತನಾಡಿದ ಅವರು ಸಮಾವೇಶ ಮೊದಲೇ ನಿಗದಿ ಆಗಿತ್ತು. ಸಮಾವೇಶ ಹೊರಗೆ ಆಗ್ತಿದೆ.ಮೊದಲೇ ನಿಗದಿ ಆಗಿತ್ತು, ಅದಕ್ಕು ಇದಕ್ಕೂ ಹೊಲಿಕೆ ಮಾಡೋಕೆ ಆಗಲ್ಲ.ಮಳೆ ಅವಾಂತರದಿಂದ ಬೆಂಗಳೂರು ಮುಳುಗುತ್ತಿದೆ. ಜನ ಕಾಂಗ್ರೆಸ್ ಸರ್ಕಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ. ಬ್ರ್ಯಾಂಡ್ ಬೆಂಗಳೂರನ್ನ ಬ್ಯಾಡ್ ಬೆಂಗಳೂರು ಮಾಡಿದೆ ಎಂದು ವಿಪಕ್ಷಗಳು ಟೀಕಿಸುತ್ತಿದೆ. ಆದರೆ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಮಾತ್ರ ಮೂಲ ಸೌಕರ್ಯ ಅಭಿವೃದ್ಧಿ ಆಗ್ತಿದೆ ಎನ್ನುತ್ತಿದ್ದಾರೆ.
ತುಮಕೂರುವರೆಗೆ ಮೆಟ್ರೋಗೆ ತೇಜಸ್ವಿಸೂರ್ಯ , ಪಿ.ಸಿ.ಮೋಹನ್ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಅವರು ಕಳೆದ ಹತ್ತು ವರ್ಷದ ಹಿಂದೆ ನಾನು ತುಮಕೂರಿಗೆ ಮೆಟ್ರೋ ಬೇಕು ಅಂತ ಹೇಳಿದ್ದೆ. ತುಮಕೂರಿಗೆ ಮೆಟ್ರೋ ಬಂದ್ರೆ ಬೆಂಗಳೂರಿನ ಟ್ರಾಫಿಕ್ ಒತ್ತಡ ಕಡಿಮೆ ಆಗುತ್ತೆ ಅಂತ.ಕಳೆದ ಬಾರಿ ಸಿಎಂ ಮನವೊಲಿಸಿ ಬಜೆಟ್‌ನಲ್ಲಿ ಪ್ರಕಟ ಮಾಡಿಸಿದ್ದೇವೆ. ಹೈದ್ರಾಬಾದ್ ಮೂಲದ ಕಂಪನಿ ಕಾರ್ಯಸಾಧತಾ ವರದಿ ಕೊಟ್ಟಿದೆ. ಸಾಧಕ ಬಾಧಕ ನೋಡಿಯೇ ವರದಿ ನೀಡಲಾಗಿದೆ. ಬೆಂಗಳೂರಿನ ಇಬ್ಬರು ಸಂಸದರಿಗೆ ಇದರ ಬಗ್ಗೆ ಗೊತ್ತಿಲ್ಲ. ಸ್ಟುಪಿಡ್ ಗಿಪಿಡ್ ಅಂತ ಏನೇನೋ ಹೇಳಿದ್ದಾರೆ. ತುಮಕೂರಿನಲ್ಲಿ ಇಂಡಸ್ಟ್ರಿಯಲ್ ಹಬ್ ಮಾಡಿದ್ದೇವೆ. ದಿನನಿತ್ಯ ಸಾವಿರಾರು ಜನ ತುಮಕೂರು ಬೆಂಗಳೂರು ನಡುವೆ ಪ್ರಯಾಣ ಮಾಡ್ತಾರೆ. ತುಮಕೂರು ಬೆಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಾಗ್ತಿದೆ. ನಾವೆ ಒಮ್ಮೊಮ್ಮೆ ಓಡಾಡೋಕೆ ಎರಡು ಮೂರು ಘಂಟೆ ಬೇಕಾಗುತ್ತೆ. ಅವರು ಸಂಸದರು ಅಂತರಾಷ್ಟ್ರೀಯ ವಿಚಾರ ತಿಳಿದುಕೊಂಡಿದ್ದಾರೆ ಅಂದುಕೊಂಡಿದ್ದೇನೆ. ಟರ್ಕಿ, ಟೊಕಿಯೋದಲ್ಲಿ ಒಂದು ಸಿಟಿಯಿಂದ ಮತ್ತೊಂದು ಸಿಟಿಗೆ ಸಂಪರ್ಕ ಕಲ್ಪಿಸಲು ಮೆಟ್ರೋ ಇದೆ.ಹೀಗಾಗಿ ನಾವು ಮೆಟ್ರೋನ ತಮಾಷೆಗೆ ಮಾಡಿದ್ದಲ್ಲ, ಅರ್ಥ ಮಾಡಿಕೊಂಡು ಹೇಳಿಕೆ ಕೊಡಬೇಕು. ಸೋಮಣ್ಣ ಬೆಂಗಳೂರಿನಲ್ಲಿದ್ದವರೆ. ಅವರಿಗೆ ಚೆನ್ನಾಗಿ ಅರ್ಥ ಆಗಿದೆ. ನಾವು ತುಮಕೂರಿನವರಾಗಿ ನಮಗೆ ಮೆಟ್ರೋ ಬೇಕೆ ಬೇಕು. ಅಭಿವೃದ್ಧಿ ದೃಷ್ಟಿಯಿಂದ ಮೆಟ್ರೋ ಬೇಕು .ದುರುದ್ದೇಶದಿಂದ ಅಲ್ಲ. ಒಂದು ವೇಳೆ ನೆಲಮಂಗಲದಲ್ಲಿ ಏರ್‌ಪೋರ್ಟ್ ಆದ್ರೆ ಹೆಚ್ಚು ಅನುಕೂಲ ಆಗುತ್ತೆ ಎಂದಿದ್ದಾರೆ.