ಬೆಂಗಳೂರು; ಕರ್ನಾಟಕದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರ ಬಾಯಿಯನ್ನು ಮುಚ್ಚಿಸಬೇಕು ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಪಾಕಿಸ್ತಾನದ ವಿರುದ್ಧದ ಹೋರಾಟದಲ್ಲಿ ತನ್ನ ನಿಲುವು ಏನು ಎಂಬುದನ್ನು ಕಾಂಗ್ರೆಸ್ ಸ್ಪಷ್ಟ ಮಾಡಬೇಕಿದೆ.ಕರ್ನಾಟಕ ಸೇರಿ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಮುಖಂಡರ ಹೇಳಿಕೆಗಳು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ವಿರುದ್ಧವಾಗಿದೆ.ಯಾಕೆ ಹೈಕಮಾಂಡ್ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ ಅಥವಾ ಇದು ಹೈಕಮಾಂಡ್ ಸೂಚನೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು. ಸೈನಿಕರ ಶೌರ್ಯದ ಬಗ್ಗೆ ಅನುಮಾನಿಸಿ ಕಾಂಗ್ರೆಸ್ ಏನು ಮಾಡಲು ಹೊರಟಿದೆ?.ಕರ್ನಾಟಕದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರ ಬಾಯಿಯನ್ನು ಮುಚ್ಚಿಸಬೇಕು. ಇಲ್ಲದಿದ್ದರೆ ಅವರನ್ನು ನೀವು ಒಂದು ವರ್ಷಕ್ಕೆ ಪಾಕಿಸ್ತಾನಕ್ಕೆ ಕಳಿಸಿ. ಹೇಗೆ ಪಾಕಿಸ್ತಾನ ನಡೆಯುತ್ತಿದೆ ಎಂಬುದನ್ನು ಅಧ್ಯಯನ ಮಾಡಲಿ. ಜಮೀರ್ ಅಹಮದ್ ಪಾಕಿಸ್ತಾನಕ್ಕೆ ಬಾಂಬ್ ತೆಗೆದುಕೊಂಡು ಹೋಗುವುದು ಬೇಡ, ಪ್ರವಾಸ ಹೋಗಲಿ. ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಕೊತ್ತನೂರು ಮಂಜುನಾಥ್ ಅವರನ್ನು ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಕಳಿಸಲಿ ಎಂದಿದ್ದಾರೆ.
ಬೆಂಗಳೂರಿನಲ್ಲಿ ಟೋಪಿ ಉಲ್ಟಾ ಹಾಕಿಕೊಂಡು ಭಾರತದ ವಿರುದ್ಧ ಮಾತಾಡುತ್ತಾರೆ. ಸೈನಿಕರ ವಿಚಾರದಲ್ಲಿ ರಾಜಕಾರಣ ಮಾಡಲು ಹೊರಟಿರುವ ಕಾಂಗ್ರೆಸ್ ನಾಯಕರಿಗೆ ಹೆಣ್ಣು ಮಕ್ಕಳ ಧಿಕ್ಕಾರ ಇದೆ. ಇವರಿಗೆ ಹೋದಲ್ಲಿ ಬಂದಲ್ಲಿ ಕಪ್ಪು ಬಾವುಟ ತೋರಿಸಬೇಕಿದೆ. ಯಾವ ನಾಸೀರ್ ಹುಸೇನ್. ರಾಜ್ಯಸಭಾ ಸದಸ್ಯರಾಗುವ ಸಮಯದಲ್ಲೇ ಪಾಕಿಸ್ತಾನ ಜಿಂದಾಬಾದ್ ಹೇಳಿಸಿಕೊಂಡವರು. ಆ ರೀತಿಯ ಮಾನಸಿಕತೆ ಇರುವವರನ್ನು ವಿದೇಶಕ್ಕೆ ಕಳುಹಿಸಬೇಕಾ?. ಸರ್ಕಾರದ ವಿರುದ್ಧ ಭಾರತದ ವಿರುದ್ಧ ಮಾತಾಡಲು ಯಾರು ಹೆಸರು ಕಳಿಸಿದವರು?. ಕಾಂಗ್ರೆಸ್ ನಲ್ಲಿ ಬೇರೆ ಯಾರೂ ನಾಯಕರು ಇಲ್ವಾ?. ನಾಸೀರ್ ಹುಸೇನ್ ಕಳುಹಿಸಿದರೆ ನಾಳೆ ಅವರು ಪಾಕಿಸ್ತಾನದ ಪರವಾಗಿ ಮಾತಾಡಿ ಬರಬಹುದು. ಕಾಂಗ್ರೆಸ್ ನಲ್ಲಿ ನಾಸೀರ್ ಹುಸೇನ್ ಬಿಟ್ಟು ಬೇರೆ ಹೆಸರು ಇಲ್ವಾ?.ಕಾಂಗ್ರೆಸ್ ಇಷ್ಟು ದಿವಾಳಿ ಆಗಿದೆಯೋ ಅಂತಾ ಆಶ್ಚರ್ಯ ಆಗುತ್ತಿದೆ ಎಂದರು.
ಇನನು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ ರಾಜ್ಯದಲ್ಲಿ ಪಾಕಿಸ್ತಾನದ ಪರವಾಗಿ ವಕ್ತಾರರು ಜಾಸ್ತಿಯಾಗಿದ್ದಾರೆ. ಪಾಕಿಸ್ತಾನದವರೂ ಕೂಡಾ ಈ ರೀತಿ ಮಾತಾಡುತ್ತಿಲ್ಲ. ಪಾಕಿಸ್ತಾನದ ಮೇಲೆ ದಾಳಿಗೆ ಕೋತ್ವಾಲ್ ಮಂಜು ಸಾಕ್ಷಿ ಕೇಳುತ್ತಿದ್ದಾರೆ.ಇವರಿಗೆ ಮತ ಹಾಕಿ ತಪ್ಪು ಮಾಡಿದೆವು ಎಂದು ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಕೊತ್ತನೂರು ಮಂಜುನಾಥ್, ದಿನೇಶ್ ಗುಂಡೂರಾವ್ ಅವರ ಮತದಾರರು ದು:ಖಪಡುತ್ತಿರಬಹುದು. ಇವರು ಪಾಕಿಸ್ತಾನದ ಏಜೆಂಟ್ ಗಳಿಗಿಂತ ಕಡೆಯಾಗಿ ಮಾತಾಡುತ್ತಿದ್ದಾರೆ. ಪಾಕಿಸ್ತಾನದಲ್ಲಿ ಭಯೋತ್ಪಾದನೆ ಹೇಗಿದೆ ಅಂತಾ ನೋಡಲು ನಿಮ್ಮನ್ನು ಕಳಿಸುತ್ತೇವೆ ಹೋಗಿ. ಪ್ರಿಯಾಂಕ್ ಖರ್ಗೆ, ಲಾಡ್, ಮಂಜುನಾಥ್ ಅವರನ್ನು ಕಳಿಸುತ್ತೇವೆ. ಸಾಕ್ಷಿ ಬೇಕು ಅಂತಾದರೆ ಹೋಗಿ ನೋಡಿಕೊಂಡು ಬರಲಿ.ಈ ರೀತಿ, ದಾಸ್ಯ, ಗುಲಾಮಿತನದಿಂದ ಮಾತಾಡುವುದು ಶೋಭೆ ಅಲ್ಲ. ಪ್ರಿಯಾಂಕ್ ಏನು ಮಾತಾಡುತ್ತಿದ್ದಾರೆ ಅಂತಾ ಮಲ್ಲಿಕಾರ್ಜುನ ಖರ್ಗೆ ವ್ಯಥೆ ಪಡುತ್ತಿರಬಹುದು. ಅಥವಾ ಹಿರಿಯ ಖರ್ಗೆ ಸುಮ್ಮನೆ ಇರುವ, ಮರಿ ಖರ್ಗೆ ಮಾತಾಡುವ ಡಬಲ್ ಸ್ಟಾಂಡರ್ಡ್ ಇರಬಹುದು .ಸಂತೋಷ್ ಲಾಡ್ ಗೆ ಸಚಿವ ಸ್ಥಾನದಿಂದ ಕೈಬಿಡುವ ಅಭದ್ರತೆಯಿಂದ ಹೀಗೆ ಮಾತಾಡುತ್ತಿರಬಹುದು. ಪ್ರಿಯಾಂಕ್ ಖರ್ಗೆಯವರೇ ನೀವು ದೇಶಕ್ಕೆ ಅಪಮಾನ ಮಾಡುತ್ತಿದ್ದೀರಿ, ನಿಮ್ಮನ್ನು ಸರ್ವಜ್ಞ ಅಂತಾ ತಿಳುದುಕೊಂಡಿದ್ದೀರಿ.ಲಾಡ್ ಅವರೇ ನೀವು ಈ ರೀತಿ ಮಾತಾಡಿದರೆ ನಿಮ್ಮನ್ನು ಡಿಸಿಎಂ ಮಾಡಲ್ಲ ಎಂದಿದ್ದಾರೆ.