ಬೆಂಗಳೂರು; ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಆಯೋಜನೆ ಮಾಡಿದ ಅಮೃತ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದರು.
ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸಿಎಂ ಉದ್ಘಾಟಿಸಿದ್ರು. ಕಾರ್ಯಕ್ರಮದಲ್ಲಿ ಸಣ್ಣ ಕೈಗಾರಿಕೆ ಸಚಿವ ಶರಣಬಸನಗೌಡ ದರ್ಶನಾಪುರ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.ಕಾಸಿಯಾ ಅಮೃತ ಮಹೋತ್ಸವದ ಲೋಗೋವನ್ನು ಸಿಎಂ ಲೋಕಾರ್ಪಣೆ ಮಾಡಿದರು.ಸಿಎಂಗೆ ಶಾಸಕ ಟಿ.ರಘುಮೂರ್ತಿ, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಸಾಥ್ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಸಂತೋಷದಿಂದ ಕಾಸಿಯಾ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. 1949ನೇ ಇಸವಿಯಲ್ಲಿ ಪ್ರಾರಂಭವಾಗಿ 75 ವರ್ಷ ಪೂರೈಸಿದೆ. ಆರಾಧ್ಯ ಎಂಬವರು ಸಣ್ಣ ಕೊಠಡಿಯಲ್ಲಿ ಸಂಸ್ಥೆ ಆರಂಭ ಮಾಡಿದ್ರು. ಈಗ 13 ಸಾವಿರ ಸದಸ್ಯರು ಕೆಲಸ ಮಾಡುತ್ತಿದ್ದಾರೆ, ಆದರೆ ಅಷ್ಟು ಕಾರ್ಯಕ್ರಮಕ್ಕೆ ಜನ ಬಂದಿಲ್ಲ. 1 ಸಾವಿರ ಜನರಾದ್ರೂ ಕಾರ್ಯಕ್ರಮದಲ್ಲಿ ಹಾಜರಿರಬೇಕಿತ್ತು. ಎಲ್ಲರೂ ಸಕ್ರಿಯವಾಗಿ ಇದ್ದಾರಲ್ವಾ ? ಉದ್ಯಮ ನಡೆಸುತ್ತಿದ್ದಾರಲ್ಲ ಎಂದು ಸಿಎಂ ಪ್ರಶ್ನಿಸಿದ್ರು.
ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಅಂತ ಹಾರೈಸುತ್ತೇನೆ. 1 ಲಕ್ಷ ಸದಸ್ಯರು ಹೆಚ್ಚಾಗಲೆಂದು ಹಾರೈಸುತ್ತೇನೆ. MSME ಬೆಳೆದಷ್ಟು ರಾಜ್ಯದ ಅಭಿವೃದ್ಧಿ ಆಗುತ್ತೆ. ಅಭಿವೃದ್ಧಿ ಆದರೆ ತಲಾ ಆದಾಯ ಹೆಚ್ಚಾಗುತ್ತದೆ. ಅಭಿವೃದ್ಧಿ ಆಗದಿದ್ದರೆ ತಲಾ ಆದಾಯ ಜಾಸ್ತಿ ಅಗಲ್ಲ. ಕರ್ನಾಟಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯ. 1.85 ಲಕ್ಷಕ್ಕೂ ಹೆಚ್ಚು ಉದ್ಯೋಗ ಕೊಟ್ಟಿದ್ದೀರಿ. ಸುಮಾರು 20 MSME ಗಳು ಇವೆ. ಅವರೆಲ್ಲ ಸೇರಿ 1.85 ಲಕ್ಷ ಉದ್ಯೋಗ ಸೃಷ್ಟಿ. 7 ಕೋಟಿ ಜನಸಂಖ್ಯೆ ಕರ್ನಾಟಕದಲ್ಲಿದೆ. ಕೃಷಿ ಕ್ಷೇತ್ರ ಬಿಟ್ಟರೆ ಸೂಕ್ಷ ಮತ್ತು ಸಣ್ಣ ಕೈಗಾರಿಕೆ ಹೆಚ್ಚು ಉದ್ಯೋಗ ಕೊಡ್ತಿದೆ. 7 ಕೋಟಿ ಜನಸಂಖ್ಯೆ ಕರ್ನಾಟಕದಲ್ಲಿದೆ ಎಂದರು.
ದಾಬಸ್ ಪೇಟೆಯಲ್ಲಿ ನಾಲ್ಕುವರೆ ಎಕರೆ ಕಾಸಿಯಾದವರಿಗೆ ಜಮೀನು ಕೊಡಿಸಿದೆ. ಮಾರ್ಕೆಟ್ ನ ಬೆಲೆ 50% ನಲ್ಲಿ ಕೊಡಿಸಿದ್ದೇನೆ. ಕೌಶಲ್ಯಾಭಿವೃದ್ದಿ ತರಬೇಕು ಅಲ್ವಾ ?. ಜೂನ್ ತಿಂಗಳಿನಿಲ್ಲಿ ಉದ್ಘಾಟನೆ ಮಾಡುವುದಾಗಿ ತಿಳಿಸಿದ್ದಾರೆ. ನಾನು ಜಾಗ ಮಾತ್ರ ಕೊಡದೆ 5 ಕೋಟಿ ರೂ. ಸಹ ಕೊಟ್ಟಿದ್ದೀನಿ.ಆಸಕ್ತಿ, ಶಕ್ತಿ ಎರಡೂ ಬೇಕು, ಆಸಕ್ತಿ ಇಲ್ಲದಿದ್ದರೆ ಶಕ್ತಿ ಇರೊಲ್ಲ.ಆಸಕ್ತಿ ಇದ್ದರೆ ಶಕ್ತಿ ತಾನಾಗಿಯೇ ಬರುತ್ತೆ. ಆಸಕ್ತಿ ಬೆಳೆಸಿಕೊಳ್ಳುವುದು ಅವಶ್ಯಕ. ಕೈಗಾರಿಕೆಗೆ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬಬೇಕು.ಇಲ್ಲವಾದರೆ ಸಮಾನತೆ ತರಲು ಅಸಾಧ್ಯ. ಜಾತಿ, ವರ್ಗ ಇಲ್ಲದೆ ಎಷ್ಟು ಜನ ಇದ್ದೀರಿ ಅನ್ನೋದು ಗೊತ್ತಿಲ್ಲ. ಜಾತಿ ನೋಡಿ ಉದ್ಯೋಗ ಉದ್ಯೋಗ ಕೊಡಲು ಆಗಲ್ಲ. ಅರ್ಹತೆ ಇದ್ದವರಿಗೆ ಉದ್ಯೋಗ ಕೊಡಬೇಕು. ಅರ್ಹತೆ ಇಲ್ಲದವರಿಗೆ ತರಬೇತಿ ನೀಡಬೇಕು. 2013ರಲ್ಲಿ ಈ ಹಿಂದೆ ನಾನು ಸಿಎಂ ಆಗಿದ್ದಾಗ ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಾರಂಭ ಮಾಡಿದೆ. ಉದ್ಯೋಗಕ್ಕೆ ಬೇಡಿಕೆ ಇರುವ ಕೆಲಸಕ್ಕೆ ತರಬೇತಿ ಕೊಡಬೇಕು. ಕೈಗಾರಿಕೋದ್ಯಮಗಳು ಬಯಸುವ ಕೌಶಲಾಭಿವೃದ್ದಿ ಕೊಡಬೇಕು ಎಂದರು.
ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕೆಲಸಕ್ಕೆ ತರಬೇತಿ ನೀಡಬೇಕು. ಕರ್ನಾಟಕ ರಾಜ್ಯ ಆರ್ಥಿಕವಾಗಿ ಬೆಳವಣಿಗೆ ಆಗ್ತಿದೆಯ. ಕರ್ನಾಟಕದಿಂದ ಕೇಂದ್ರಕ್ಕೆ ಎಷ್ಟು ತೆರಿಗೆ ಹೋಗ್ತಿದೆ ಗೊತ್ತಾ?. ನಾಲ್ಕುವರೆ ಲಕ್ಷ ಕೋಟಿ ರಾಜ್ಯದಿಂದ ಕೇಂದ್ರಕ್ಕೆ ಹೋಗ್ತಿದೆ. ವಾಪಾಸ್ ನಮಗೆ 65-70 ಸಾವಿರ ಕೋಟಿ ರೂ. ಮಾತ್ರ ಬರ್ತಿದೆ. ಕರ್ನಾಟಕಕ್ಕೆ ಅನ್ಯಾಯ ಆಗಬಾರದು, ತೆರಿಗೆ ಹಣ ಬರದಿದ್ದರೆ ಅಭಿವೃದ್ಧಿ ಹೇಗೆ ಆಗುತ್ತೆ?. 100 ರೂ. ಕೊಟ್ಟರೆ 14-15ರೂ. ಮಾತ್ರ ವಾಪಾಸ್ ಬರುತ್ತಿದೆ. ಸಾಕಾ? ಸಾಕೇನ್ರೀ?. ಫೆಡರಲ್ ಸ್ಕ್ಟ್ರಚರ್ ಅಂತ ಮೋದಿ ಹೇಳ್ತಾರೆ. ತೆರಿಗೆ ಕರ್ನಾಟಕಕ್ಕೂ ಹೆಚ್ಚು ಬರಬೇಕು ಅಲ್ವಾ ? ನೀವು ತೆರಿಗೆ ಕಟ್ಟುತ್ತಿದ್ದೀರಿ ಅಲ್ವಾ ? ಎಂದರು.