ಮನೆ Latest News ಮಂಗಳೂರಿನಲ್ಲಿ ನಡೆದ ಹಿಂದೂ ಪರ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ಪ್ರಕರಣವನ್ನು ಎನ್ ಐಎಗೆ...

ಮಂಗಳೂರಿನಲ್ಲಿ ನಡೆದ ಹಿಂದೂ ಪರ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ಪ್ರಕರಣವನ್ನು ಎನ್ ಐಎಗೆ ವಹಿಸಲು ಬಿಜೆಪಿಯಿಂದ ರಾಜ್ಯಪಾಲರಿಗೆ ಮನವಿ

0

ಮಂಗಳೂರಿನಲ್ಲಿ ನಡೆದ ಹಿಂದೂ ಪರ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ  ಪ್ರಕರಣವನ್ನು ಎನ್ ಐಎಗೆ ವಹಿಸಲು ಬಿಜೆಪಿಯಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯಪಾಲರನ್ನು ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌, ವಿಧಾ‌ನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾ‌ನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಬಿಜೆಪಿ ನಿಯೋಗ ಮನವಿ ಮಾಡಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರು ಸೇರಿದಂತೆ ಹಲವು ಬಿಜೆಪಿ ಶಾಸಕರು ನಿಯೋಗದಲ್ಲಿದ್ದರು. ರಾಜಭವನದಲ್ಲಿ ಭೇಟಿ ಮಾಡಿ ರಾಜ್ಯಪಾಲರಿಗೆ 4 ಪುಟಗಳ ಲಿಖಿತ ದೂರು ಸಲ್ಲಿಕೆ ಮಾಡಿದ್ರು.

ಈ ವೇಳೆ ದಿವಂಗತ ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಶೆಟ್ಟಿ ಮಾತನಾಡಿ ನಮಗೆ ರಾಜ್ಯ ಸರ್ಕಾರದ ತನಿಖೆ ಮೇಲೆ ನಂಬಿಕೆ ಇಲ್ಲ. ಈ ಪ್ರಕರಣ ಎನ್‌ಐಎ ತನಿಖೆಗೆ ಕೊಡಬೇಕು ಅಂತ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಸರ್ಕಾರದವರು ಯಾರೂ ಬಂದು ನಮ್ಮನ್ನು ಮಾತಾಡಿಸಿಲ್ಲ. ನನ್ನ ಮಗ ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಅಲ್ಲ. ನನ್ನ ಮಗನಿಗೆ ನ್ಯಾಯ ಸಿಗಬೇಕು, ನ್ಯಾಯ ಸಿಗುವವರೆಗೂ ನಾವು ಹೋರಾಟ ಮಾಡುತ್ತೇವೆ. ನನಗೆ ಹುಷಾರಿಲ್ಲ, ಕ್ಯಾನ್ಸರ್, ಆದರೂ ಬಂದಿದ್ದೇನೆ. ನನ್ನ ಮಗನ ಸಾವಿಗೆ ನ್ಯಾಯ ಬೇಕು .ನ್ಯಾಯಕ್ಕಾಗಿ ನಾನು ಎಲ್ಲಿಗೆ ಬೇಕಾದರೂ ಹೋಗುತ್ತೇನೆ ಎಂದು ತಿಳಿಸಿದ್ರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ ಸುಹಾಸ್ ಶೆಟ್ಟಿ ಕುಟುಂಬದವರ ಜೊತೆ ನಾವು ಇಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಪ್ರಕರಣ ಎನ್ಐಎಗೆ ಕೊಡಲು ಮನವಿ ಮಾಡಿದ್ದೇವೆ. ನಾವು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಮಂಗಳೂರು ಚಲೋ ಮಾಡಲು ನಿರ್ಧರಿಸಿದ್ದೆವು. ಆದ್ರೆ ಆಪರೇಷನ್ ಸಿಂಧೂರ ಹಿನ್ನೆಲೆಯಲ್ಲಿ ಅದನ್ನು ಕೈ ಬಿಟ್ಟೆವು. ಪೊಲೀಸರು ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಸರಿಯಾಗಿ ನಡೆಸುತ್ತಿಲ್ಲ.ಪೊಲೀಸ್ ತನಿಖೆ ಮೇಲೆ ನಂಬಿಕೆ ಇಲ್ಲ. ಸರ್ಕಾರ ಆರೋಪಿಗಳ ರಕ್ಷಣೆಗೆ ಮುಂದಾಗಿದೆ. ಸುಹಾಸ್ ಶೆಟ್ಟಿ ಕುಟುಂಬದ ಸದಸ್ಯರ ಜೊತೆ ಸರ್ಕಾರ ಮಾತಾಡಿಲ್ಲ, ಸಚಿವರು, ಶಾಸಕರು ಅವರ ಮನೆ ಭೇಟಿ ಮಾಡಿಲ್ಲ.ಸ್ಪೀಕರ್ ಖಾದರ್  ಫಾಜಿಲ್ ಕುಟುಂಬದ ಪಾತ್ರ ಇಲ್ಲ ಅಂತಾರೆ.ಸೋಷಿಯಲ್ ಮೀಡಿಯಾದಲ್ಲಿ ಅನೇಕ ಹಿಂದೂ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಿದ್ದಾರೆ .ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಕೊಡುವ ಕೆಲಸ ಮಾಡಬೇಕು.ಸುಹಾಸ್ ಶೆಟ್ಟಿ ಕೊಲೆಗೆ ನ್ಯಾಯ ಸಿಗಬೇಕು ಎಂದರು.

ಇನ್ನು ಆಪರೇನ್ ಸಿಂಧೂರ್ 2 ಬಗ್ಗೆ ಮಾತನಾಡಿದ ವಿಜಯೇಂದ್ರ ಪಹಲ್ಗಾಮ್ ದುರ್ಘಟನೆ ನಂತರ ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ ರವಾನೆ‌ ಮಾಡಿದೆ.ಪಾಕಿಸ್ತಾನದ ಪ್ರಜೆಗಳು 48 ಗಂಟೆಯಲ್ಲಿ ಅವರ ದೇಶಕ್ಕೆ ಹೋಗಬೇಕು ಅಂತಾ ಸೂಚನೆ ನೀಡಿದೆ. ಆದರೆ ನಮ್ಮ ರಾಜ್ಯದಲ್ಲಿ ಈ ವಿಚಾರವನ್ನು ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಇತ್ತೀಚೆಗೆ ಬಿಜೆಪಿ ಕಡೆಯಿಂದ ಸಿಗ್ನೇಚರ್ ಕ್ಯಾಂಪೇನ್ ಮಾಡಿದ್ದೆವು.60 ಸಾವಿರಕ್ಕೂ ಹೆಚ್ಚು ಸಹಿ ಪಡೆದಿದ್ದು ರಾಜ್ಯಪಾಲರನ್ನು ಭೇಟಿ ಮಾಡಿದ್ದೇವೆ. ಇದು ದೇಶದ ಭದ್ರತೆ ವಿಚಾರ.ನಮ್ಮ ರಾಜ್ಯದಲ್ಲಿರುವ ಪಾಕಿಸ್ತಾನದ ಪ್ರಜೆಗಳನ್ನು ಹೊರ ಕಳಿಸಲು ನಿರ್ದೇಶನ ನೀಡಬೇಕು ಅಂತಾ‌ ಮನವಿ ಮಾಡಿದ್ದೇವೆ.ಪಾಕಿಸ್ತಾನದ ದಾಳಿಯನ್ನು ನಮ್ಮ ಸೈನಿಕರು ವಿಫಲಗೊಳಿಸಿದ್ದಾರೆ.ನಮ್ಮ ಸೇನೆ ಪಾಕ್ ನ ದಾಳಿ ತಡೆಯುವಲ್ಲಿ ಯಶಸ್ವಿಯಾಗಿದೆ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ರಾಜ್ಯಪಾಲರನ್ನು ಭೇಟಿ ಮಾಡಿ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವಂತೆ ಮನವಿ ಮಾಡಿದ್ದೇವೆ. ಸಮಗ್ರ ತನಿಖೆಗಾಗಿ ರಾಜ್ಯಪಾಲರು ಶಿಫಾರಸು ಮಾಡುವಂತೆ ಮನವಿ ಮಾಡಿದ್ದೇವೆ.ಸುಹಾಸ್ ಶೆಟ್ಟಿಯವರ ತಂದೆ ಮತ್ತು ತಾಯಿಯ ಜೊತೆ ಕೂಡಾ ರಾಜ್ಯಪಾಲರು ಮಾತನಾಡಿ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.ಆದಷ್ಟು ಶೀಘ್ರ ಹತ್ಯೆ ಪ್ರಕರಣ ಎನ್ ಐಎ ತನಿಖೆಗೆ ಹೋಗುವ ವಿಶ್ವಾಸ ಇದೆ. ಎಂದರು.