ಮನೆ Blog ಯುದ್ಧ ಬೇಡ ಎಂದು ಸಿಎಂ ಹೇಳಿದ ಮೇಲೆ ಸಚಿವರು ಹೇಳುವುದು ವಿಶೇಷ ಅಲ್ಲ: ಬೆಂಗಳೂರಿನಲ್ಲಿ ಬಿಜೆಪಿ...

ಯುದ್ಧ ಬೇಡ ಎಂದು ಸಿಎಂ ಹೇಳಿದ ಮೇಲೆ ಸಚಿವರು ಹೇಳುವುದು ವಿಶೇಷ ಅಲ್ಲ: ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ

0

ಬೆಂಗಳೂರು: ಯುದ್ಧ ಬೇಡ ಎಂದು ಸಿಎಂ ಹೇಳಿದ ಮೇಲೆ ಸಚಿವರು ಹೇಳುವುದು ವಿಶೇಷ ಅಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಯುದ್ಧ ಬೇಡ ಎಂಬ ಸಿಎಂ, ಸಚಿವರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು  ಯುದ್ಧ ಬೇಡ ಎಂದು ಸಿಎಂ ಹೇಳಿದ ಮೇಲೆ ಸಚಿವರು ಹೇಳುವುದು ವಿಶೇಷ ಅಲ್ಲ. ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಂಬಲ ಎಂದು ಖರ್ಗೆಯವರು ಹೇಳಿದ್ದಾರೆ. ನಿರ್ಧಾಕ್ಷಿಣ್ಯ ಕ್ರಮ ಆಗಬೇಕು ಎಂದು ಶಶಿ ತರೂರ್ ಹೇಳಿದ್ದಾರೆ. ಸಿಎಂ ಅವಿವೇಕದ ಹೇಳಿಕೆ ಬಿಟ್ಟು ಕೇಂದ್ರದ ನಿರ್ಧಾರಕ್ಕೆ ಕೈ ಜೋಡಿಸಬೇಕು ಎಂದರು.

ರೈಲ್ವೇ ಇಲಾಖೆ ಪರೀಕ್ಷೆಗೆ ಮಂಗಳ ಸೂತ್ರ, ಜನಿವಾರ ಬಳಸಬಾರದು ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಅಶೋಕ್ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜೊತೆ ಮಾತಾಡಿದ್ದಾರೆ. ಜೋಷಿ ಅವರು ಕೇಂದ್ರ ರೈಲ್ವೇ ಸಚಿವರ ಜೊತೆ ಮಾತಾಡಿದ್ದಾರೆ. ಯಾರೋ ಅಧಿಕಾರಿ ಉದ್ಧಟತನ ಮಾಡಿದ್ದಾರೆ. ಇದನ್ನು ಸಹಿಸಬಾರದು, ಇದು ತಪ್ಪು. ನಾವು ಕೇಂದ್ರದ ಜೊತೆ ಮಾತಾಡಿದ್ದೇವೆ. ಶಾಸಕರ ಅಮಾನತು ಸಂಬಂಧ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ . ಪ್ರಜಾಪ್ರಭುತ್ವ ವಿರೋಧಿ ನಡೆಯಿಂದ ರಾಜ್ಯ ಸರ್ಕಾರ ಹಿಂದಡಿ ಇಡಬೇಕು. ರಾಜ್ಯಪಾಲರು ಸರ್ಕಾರಕ್ಕೆ ಬುದ್ದಿ ಹೇಳಬೇಕು ಎಂದು ಮನವಿ ಮಾಡಿದ್ದೇವೆ ಎಂದರು.

ಹತ್ಯೆಗೊಳಗಾದವರ ಕುಟುಂಬದವರು ಕಣ್ಣೀರಿಡುತ್ತಾ ಹೇಳಿದರೂ ಅದನ್ನು ಒಪ್ಪದ ಒಂದು ವರ್ಗ ರಾಜ್ಯ ಮತ್ತು ದೇಶದಲ್ಲಿ ಇದೆ ; ಬೆಂಗಳೂರಿನಲ್ಲಿ ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ

ಬೆಂಗಳೂರು; ಹತ್ಯೆಗೊಳಗಾದವರ ಕುಟುಂಬದವರು ಕಣ್ಣೀರಿಡುತ್ತಾ ಹೇಳಿದರೂ ಅದನ್ನು ಒಪ್ಪದ ಒಂದು ವರ್ಗ ರಾಜ್ಯ ಮತ್ತು ದೇಶದಲ್ಲಿ ಇದೆ ಎಂದು  ಬೆಂಗಳೂರಿನಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಪಹಲ್ಗಾಮ್‌ ಉಗ್ರರ ದಾಳಿ ವಿಚಾರದ ಬಗ್ಗೆ ಮಾತನಾಡಿದ ಅವರು  ಉಗ್ರರು ಕೊಂದಿರುವುದು ಹಿಂದೂಗಳನ್ನು. ಹತ್ಯೆಗೊಳಗಾದವರ ಕುಟುಂಬದವರು ಕಣ್ಣೀರಿಡುತ್ತಾ ಹೇಳಿದರೂ ಅದನ್ನು ಒಪ್ಪದ ಒಂದು ವರ್ಗ ರಾಜ್ಯ ಮತ್ತು ದೇಶದಲ್ಲಿ ಇದೆ. ಅಸಾದುದ್ದೀನ್ ಒವೈಸಿ ಧರ್ಮಾಧಾರಿತವಾಗಿ ಹತ್ಯೆ ತಪ್ಪು ಎಂದು ಹೇಳಿದ್ದರೂ ಕಾಂಗ್ರೆಸ್ ಒಪ್ಪಲು ತಯಾರಿಲ್ಲ. ಇನ್ನು ಎಂತಹ ದೈನೇಸಿ, ದರಿದ್ರ ಸ್ಥಿತಿಗೆ ಕಾಂಗ್ರೆಸ್ ಇಳಿದಿದೆ. ಉಗ್ರರು ದಾಳಿ ಮಾಡಿರುವುದು ಹಿಂದೂ ಸಮಾಜದ ಮೇಲೆ . ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ಹತ್ತು ಲಕ್ಷ ಘೋಷಣೆ ಮಾಡಿದೆ. ಸಿದ್ದರಾಮಯ್ಯ ಮಾನವೀಯತೆಯ ಎಲ್ಲಾ ಲಿಂಕ್ ಗಳನ್ನು ಕಳೆದುಕೊಂಡಿದ್ದಾರೋ ಏನೋ  ಅವರಿಗೆ ಯಾರು ಸಲಹೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

ಮಾನವೀಯತೆ ಇದ್ದರೆ ಕನಿಷ್ಠ ಒಂದು ಕೋಟಿ ರೂ. ಕೊಡುತ್ತಿದ್ದರು. ಪಕ್ಕದ ರಾಜ್ಯದಲ್ಲಿ ಆನೆ ದಾಳಿಯಿಂ ಮೃತಪಟ್ಟವರಿಗೆ 25 ಲಕ್ಷ ರೂ. ಕೊಟ್ಟಿದ್ದಾರೆ. ಕನಿಷ್ಠ ಅಷ್ಟು ಪರಿಹಾರ ಆದರೂ ಕೊಡುವ ಯೋಗ್ಯತೆ ಇಲ್ವಲ್ಲಾ ರಾಜ್ಯ ಸರ್ಕಾರಕ್ಕೆ. ಎರಡೂ ಕುಟುಂಬಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹಿಂದೂ ಸಮಾಜದ ಮೇಲಿದೆ. ನಾಳೆ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲೆ ಮತ್ತು ರಾಜ್ಯ ಯುವ ಮೋರ್ಚಾದಿಂದ ಎರಡೂ ಕುಟುಂಬಕ್ಕೆ 10 ಲಕ್ಷದ ಒಂದು ರೂ.‌ ಕೊಡುತ್ತಿದ್ದೇವೆ. ರಾಜ್ಯ ಸರ್ಕಾರ ಕೊಟ್ಟಿದ್ದಕ್ಕಿಂತ ಒಂದು ರೂ. ಹೆಚ್ಚು ಹಣ ಕುಟುಂಬಕ್ಕೆ ಹಿಂದೂ ಸಮಾಜ ಕೊಡುತ್ತಿದೆ. ಮೃತ ಮಂಜುನಾಥ್ ಪುತ್ರ ಅಭಿಜಯ್ ಗೆ ಬಿ.ಕಾಂ. ಮತ್ತು ಮಾಸ್ಟರ್ಸ್‌ ಓದಲು ಬೆಂಗಳೂರಿನ‌ ಆರ್. ವಿ. ಯುನಿವರ್ಸಿಟಿ ಶಿಕ್ಷಣ ನೀಡಲು ಮುಂದೆ ಬಂದು ಮಂಜುನಾಥ್ ಅವರ ಪತ್ನಿಗೆ ಪತ್ರ ಬರೆದಿದ್ದಾರೆ. ಕನಕಪುರ ರಸ್ತೆಯಲ್ಲಿರುವ ಟ್ರಾನ್ಸೆಂಟ್ ಶಿಕ್ಷಣ ಸಂಸ್ಥೆಗೆ ಭರತ್ ಭೂಷಣ್ ಪುತ್ರನಿಗೆ ಒಂದರಿಂದ 12 ನೇ ತರಗತಿಯವರೆಗೆ ಶಿಕ್ಷಣ ನೀಡಲು ಮುಂದೆ ಬಂದಿದ್ದಾರೆ. ಎರಡೂ ಕುಟುಂಬಗಳ ಆರೋಗ್ಯ ವ್ಯವಸ್ಥೆ ನೋಡಿಕೊಳ್ಳಲು ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆ ಒಪ್ಪಿಕೊಂಡಿದೆ ಎಂದು ತಿಳಿಸಿದ್ರು.

ಐಡಿ ಕಾರ್ಡ್ ನೋಡಿ ಹತ್ಯೆ ಮಾಡಿಲ್ಲ ಎಂಬ ಸಚಿವ ತಿಮ್ಮಾಪುರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ  ತಿಮ್ಮಾಪುರ ಅವರೇ ನಿಮಗೂ ಚಡ್ಡಿ ಬಿಚ್ಚಿ ಪರೀಕ್ಷೆ ಮಾಡಿದ್ದರೆ ನಿಮಗೂ ಗೊತ್ತಾಗುತ್ತಿತ್ತು. ಇದೇ ಮಾತು ನಿಮಗೆ ಭರತ್ ಭೂಷಣ್ ಪತ್ನಿ ಎದುರು, ಮಂಜುನಾಥ್ ಕುಟುಂಬದ ಎದುರು ಹೇಳಲು ಸಾಧ್ಯವಿದ್ಯಾ?. ಕನಿಷ್ಠ ಸೂಕ್ಷ್ಮತೆ ಕಳೆದುಕೊಂಡವರು ಮಾತ್ರ ಈ ರೀತಿಯ ಹೇಳಲು ಸಾಧ್ಯ.ಇಂತಹವರು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯವಿಲ್ಲ.ರಾಜೀನಾಮೆ ಕೊಟ್ಟು ವೈಯಕ್ತಿಕ ಜೀವನಕ್ಕೆ ಹೋಗಲಿ. ಇವರ ಪ್ರಕಾರ ಉಗ್ರರನ್ನು ಕರೆದು ವಿಧಾನಸೌಧದ ಮುಂದೆ ಆರತಿ ಮಾಡಬೇಕಿತ್ತಾ?.ಯಾವತ್ತು ಈ ರೀತಿಯ ಸಾವು ನೋವಿನ ಪರಿಸ್ಥಿತಿ ಸೆಕ್ಯುಲರ್ ರಾಜಕಾರಣಿಗಳ ಮನೆಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ಅವರಿಗೆ ಸೂಕ್ಷ್ಮತೆ ಅರ್ಥವಾಗುವುದಿಲ್ಲ. ಎಂದರು.

ಬಿಜೆಪಿ ಸರ್ಕಾರ ಬಂದ ಬಳಿಕ ಪ್ರತಿ ಶುಕ್ರವಾರ ನಮಾಜ್ ಮುಗಿಸಿದ ಕೂಡಲೇ ಹೋಗಿ ಕಲ್ಲೆಸೆತ ಮಾಡುತ್ತಿದ್ದುದು ನಿಂತಿದೆ. ದೇಶದ ಬೇರೆ ಬೇರೆ ಭಾಗದ ಜನ ಹೂಡಿಕೆ ಮಾಡಿ ಹೋಟೆಲ್ ಗಳು ಆರಂಭ ಆಗಿವೆ. ಪುಲಿಕೇಶಿನಗರದಲ್ಲಿ ಪೊಲೀಸ್ ಸ್ಟೇಷನ್ ಗೆ ಬೆಂಕಿ ಹಚ್ಚಿ ಅವರ  ಶಾಸಕರ ಮನೆಗೇ ಬೆಂಕಿ ಹಚ್ಚಿದರೂ ಪರ ನಿಲ್ಲದ ಕಾಂಗ್ರೆಸ್ ಗೆ ಮೋದಿ ಏನು ಮಾಡುತ್ತಿದ್ದಾರೆ ಎಂಬು ಪ್ರಶ್ನೆ ಮಾಡಲು ಅರ್ಹತೆ ಇಲ್ಲ. ಸಾರ್ವಜನಿಕ ಜೀವನದಲ್ಲಿ ಇರುವವರು ಗಂಭೀರವಾಗಿ ಮಾತಾಡಬೇಕು. ಸಚಿವ ಸಂತೋಷ್ ಲಾಡ್ ಅವರಿಗೂ ಇದು ಅನ್ವಯಿಸುತ್ತದೆ. ಯಾರಿಗೂ ಕೂಡಾ ಇಂತಹ ಹೇಳಿಕೆ ನೀಡುವುದು ಶೋಭೆ ತರಲ್ಲ. ಪ್ರವಾಸಿಗರು ಯಾವಾಗ ಹೋಗಲು ಧೈರ್ಯ ಮಾಡುತ್ತಾರೋ ಆಗ ಪ್ರವಾಸಿಗರು ಕಾಶ್ಮೀರಕ್ಕೆ ಹೋಗಬಹುದು. ಕಾಶ್ಮೀರ ನಮ್ಮದು, ಇದನ್ನು ಭಾರತೀಯರು, ಹಿಂದೂ ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ರು.

ರೈಲ್ವೇ ಪರೀಕ್ಷೆಯಲ್ಲಿ ಮಂಗಳಸೂತ್ರ ಮತ್ತು ಜನಿವಾರಕ್ಕೆ ತಡೆ ವಿಚಾರದ ಬಗ್ಗೆ ಮಾತನಾಡಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೆಲಸ ಮಾಡಿದ ಕೆಲವು ಸೆಕ್ಯುಲರ್ ಅಧಿಕಾರಿಗಳಲ್ಲಿ ಬ್ರಿಟೀಷರ ಡಿಎನ್ಎ ಸೇರಿಕೊಂಡಿದೆ. ಕೆಲವು ಸಲ ಸಚಿವರ ಗಮನಕ್ಕೆ ತರದೇ ಈ ರೀತಿಯ ಆದೇಶ ಮಾಡಿರುತ್ತಾರೆ. ಅಧಿಕಾರಿಗಳ ಮೇಲೆ ಕ್ರಮ ಆಗುತ್ತದೆ. ಸಚಿವ ಸೋಮಣ್ಣ ಅವರ ಗಮನಕ್ಕೆ ತರಲಾಗಿದೆ.ಹಿಂದೂ ಸಮಾಜದವರು ತಮ್ಮ ಗುರುತನ್ನು ಧರಿಸಿಕೊಂಡು ಹೆಮ್ಮೆಯಿಂದ ಪರೀಕ್ಷೆಯನ್ನು ಬರೆಯಬಹುದು ಎಂದರು ಕಾಶ್ಮೀರ ಕುರಿತಾದ ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶಹೀದ್ ಅಫ್ರಿದಿ ಹೇಳಿಕೆಗೆ ಪ್ರತಿಕ್ರಿಯಿಸಿ  ಒಬ್ಬ ವಿಫಲ ಕ್ರಿಕೆಟಿಗನ ಹೇಳಿಕೆಯನ್ನು ವೈಭವೀಕರಿಸುವ ಅಗತ್ಯವಿಲ್ಲ ಎಂದಿದ್ದಾರೆ.